ಒಕ್ಕಲಿಗ ಸಮುದಾಯದ ₹10,000 ಕೋಟಿ ಮಹಾ ಆಸ್ತಿ ರಕ್ಷಣಾ ಸಮರ: ನಾಯಕತ್ವದ ದ್ರೋಹ, ರಾಜಕೀಯ ಸ್ವಾರ್ಥದ ಕರಾಳ ಅಧ್ಯಾಯ ಮತ್ತು ಸಮುದಾಯದ ಜವಾಬ್ದಾರಿ!
₹10,000 ಕೋಟಿಗೂ ಹೆಚ್ಚು ಮೌಲ್ಯದ ಒಕ್ಕಲಿಗ ಸಮುದಾಯದ ದತ್ತಿ ಆಸ್ತಿ ಕಬಳಿಕೆ ಯತ್ನವನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ. ಆದರೆ, ರಾಜಕೀಯ ಪಕ್ಷಗಳ ಒಕ್ಕಲಿಗ ನಾಯಕರು ಮತ್ತು ಗಣ್ಯರು ತಮ್ಮ ಸ್ವಾರ್ಥ ಮತ್ತು ನಿರ್ಲಕ್ಷ್ಯದಿಂದ ಈ ಆಸ್ತಿಯನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸಮುದಾಯವು ಈಗ ಎಚ್ಚೆತ್ತು, ದ್ರೋಹ ಎಸಗಿದವರನ್ನು ಶಿಕ್ಷಿಸಿ, ದಾನಿಗಳ ಆಶಯವನ್ನು ಉಳಿಸಿ, ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಒಗ್ಗಟ್ಟಿನ ಹೋರಾಟ ಮಾಡುವುದು ಅನಿವಾರ್ಯವಾಗಿದೆ.
VOKKALIGA COMMUNITY DEVELOPMENT AND UNITY FORMATION IN ACTION
ROHANA GOWDA
12/6/20251 min read


ಒಕ್ಕಲಿಗ ಸಮುದಾಯದ ₹10,000 ಕೋಟಿ ಮಹಾ ಆಸ್ತಿ ರಕ್ಷಣಾ ಸಮರ: ನಾಯಕತ್ವದ ದ್ರೋಹ, ರಾಜಕೀಯ ಸ್ವಾರ್ಥದ ಕರಾಳ ಅಧ್ಯಾಯ ಮತ್ತು ಸಮುದಾಯದ ಜವಾಬ್ದಾರಿ!
ಬೆಂಗಳೂರು:
ಒಕ್ಕಲಿಗ ಸಮುದಾಯದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ದಾನ ಮಾಡಲಾಗಿದ್ದ ಸಜ್ಜೆಪಾಳ್ಯದ ಜಮೀನಿನ ಒಟ್ಟು ಪ್ರಸ್ತುತ ಮಾರುಕಟ್ಟೆ ಮೌಲ್ಯವು ₹10,000 ಕೋಟಿಗಿಂತ ಕಡಿಮೆಯಿಲ್ಲ! ಇಂತಹ ಬೃಹತ್ ಮೊತ್ತದ ಆಸ್ತಿಯ ಅಕ್ರಮ ಪರಭಾರೆ ಯತ್ನವನ್ನು ತಡೆ ಹಿಡಿಯುವ ಮೂಲಕ ಸುಪ್ರೀಂ ಕೋರ್ಟ್ ಇತ್ತೀಚೆಗೆ ಐತಿಹಾಸಿಕ ತೀರ್ಪು ನೀಡಿದೆ. ಈ ಮಹತ್ವದ ತೀರ್ಪು ಸಮುದಾಯದ ಆಸ್ತಿಯನ್ನು ಕಬಳಿಕೆದಾರರ ಕೈಯಿಂದ ಉಳಿಸಿರುವಂತೆಯೇ, ಸಮುದಾಯದ ಮುಖಂಡರ ನಿರ್ಲಕ್ಷ್ಯ, ರಾಜಕೀಯ ದುರ್ಬಲತೆ ಮತ್ತು ಸ್ವಾರ್ಥದ ಕರಾಳ ಮುಖವನ್ನು ಅತ್ಯಂತ ಸ್ಪಷ್ಟವಾಗಿ ಬಯಲು ಮಾಡಿದೆ.
ದಾನಶೂರ ರಂಗಮ್ಮನವರ ಸಂಕಲ್ಪ ಮತ್ತು ನಷ್ಟದ ಅಂದಾಜು
ದಾನಶೂರರಾದ ಶ್ರೀಮತಿ ರಂಗಮ್ಮನವರು 1962ರಲ್ಲಿ ಮಾಡಿದ ಮರಣ ಶಾಸನದ (ವಿಲ್) ಮೂಲಕ, ತಮ್ಮ ಯಜಮಾನರಾದ ಕೃಷ್ಣಪ್ಪನವರ ಹೆಸರನ್ನು ಶಾಶ್ವತಗೊಳಿಸಲು 96 ಎಕರೆ 36 ಗುಂಟೆ ಜಮೀನನ್ನು ಒಕ್ಕಲಿಗ ಸಮುದಾಯದ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಾತ್ರ ಉಪಯೋಗಿಸಬೇಕು ಎಂದು ದಾನ ಮಾಡಿದ್ದರು.
ಆದರೆ, ಈ ಅಮೂಲ್ಯ ಆಸ್ತಿಯನ್ನು ಪ್ರಾಮಾಣಿಕವಾಗಿ ರಕ್ಷಿಸಿ, ದಾನಿಗಳ ಸಂಕಲ್ಪವನ್ನು ಮುಂದುವರೆಸಬೇಕಿದ್ದ ಸಮುದಾಯದ ಕೆಲ ಪದಾಧಿಕಾರಿಗಳೇ ಈ ಜಮೀನನ್ನು ಕಬಳಿಸಲು ಒಳಸಂಚು ರೂಪಿಸಿದರು. ದುಃಖದ ಸಂಗತಿ ಏನೆಂದರೆ, ಒಟ್ಟು ₹10,000 ಕೋಟಿ ಮೌಲ್ಯದ ಆಸ್ತಿಯ ಪೈಕಿ, ಕೇವಲ ₹5,000 ಕೋಟಿ ಮೌಲ್ಯದ ಆಸ್ತಿಗಾಗಿ ಮಾತ್ರ ನ್ಯಾಯಾಲಯದಲ್ಲಿ ಗಟ್ಟಿಯಾದ ಹೋರಾಟ ನಡೆದು, ಅದನ್ನು ಕೆಲ ಮಟ್ಟಕ್ಕೆ ರಕ್ಷಿಸಲು ಸಾಧ್ಯವಾಗಿದೆ. ಉಳಿದ ಆಸ್ತಿ ಅಕ್ರಮವಾಗಿ ಅನ್ಯರ ಪಾಲಾಗುವ ಅಪಾಯದಲ್ಲಿದೆ.
2009ರಲ್ಲಿ ಸುಪ್ರೀಂ ಕೋರ್ಟ್ ಅಕ್ರಮ ಸಂಧಾನವನ್ನು ರದ್ದುಗೊಳಿಸಿ, "ಸಾರ್ವಜನಿಕ ಹಿತಾಸಕ್ತಿಗಾಗಿ ದಾನ ಮಾಡಿದ ಆಸ್ತಿಯನ್ನು ಮಾರಾಟ ಮಾಡುವ ಅಧಿಕಾರ ಯಾರಿಗೂ ಇಲ್ಲ" ಎಂದು ಸ್ಪಷ್ಟಪಡಿಸಿ, ಸಮುದಾಯಕ್ಕೆ ನ್ಯಾಯ ಒದಗಿಸಿತು. ಆದರೂ, ಸಂಪೂರ್ಣ ಆಸ್ತಿಯ ರಕ್ಷಣೆಗೆ ಸಮುದಾಯದ ಬೃಹತ್ ಮತ್ತು ಒಗ್ಗಟ್ಟಿನ ಬೆಂಬಲವು ಅತ್ಯಗತ್ಯವಾಗಿದೆ.
ನಾಯಕತ್ವದ ನಿರ್ಲಕ್ಷ್ಯವೇ ಸಮುದಾಯದ ಶತ್ರು: ಕಾಣೆಯಾದ ರಾಜಕೀಯ ಧುರೀಣರು!
ಇಂತಹ ಸಾವಿರಾರು ಕೋಟಿ ಮೌಲ್ಯದ ಆಸ್ತಿಗೆ ಧಕ್ಕೆಯಾದಾಗ, ಸಮುದಾಯದ ಪರವಾಗಿ ಧ್ವನಿ ಎತ್ತಬೇಕಿದ್ದ ನಾಯಕತ್ವವೇ ಮೌನಕ್ಕೆ ಶರಣಾಯಿತು.
ಆಕ್ರೋಶ: ಪ್ರಸಕ್ತ ರಾಜಕೀಯ ಕ್ಷೇತ್ರಗಳಲ್ಲಿ, "ನಾನು ಒಕ್ಕಲಿಗ, ನನ್ನ ಹಿಂದೆ ಸಮುದಾಯದ ಮತಗಳಿವೆ" ಎಂದು ಲಾಭ ಪಡೆಯುವವರಿಗೆ ಪಕ್ಷಗಳು ಒಳ್ಳೆಯ ಜವಾಬ್ದಾರಿ ಮತ್ತು ಸ್ಥಾನಮಾನಗಳನ್ನು ಕೊಡುತ್ತವೆ. ಆದರೆ, ವಿಪರ್ಯಾಸವೆಂದರೆ, ಇಂದು ಇಂತಹ ಒಂದು ಸಮುದಾಯಕ್ಕೆ ಆಗಿರುವ ಮೋಸವನ್ನು ತಡೆಯಲು ಜೆಡಿಎಸ್‌ನ ಒಕ್ಕಲಿಗ ರಾಜಕೀಯ ವ್ಯಕ್ತಿ ಬರಲಿಲ್ಲ, ಕಾಂಗ್ರೆಸ್‌ನ ಒಕ್ಕಲಿಗ ರಾಜಕೀಯ ವ್ಯಕ್ತಿ ಬರಲಿಲ್ಲ ಮತ್ತು ಬಿಜೆಪಿಯ ಒಕ್ಕಲಿಗ ರಾಜಕೀಯ ವ್ಯಕ್ತಿ ಬರಲಿಲ್ಲ!
ಅಷ್ಟೇ ಏಕೆ? ಸದಾ ಕಾಲ ತಾಲೂಕು, ಜಿಲ್ಲೆ ಮತ್ತು ಎಲ್ಲಾ ಕಡೆ ವೇದಿಕೆಗಳ ಮೇಲೆ "ಕೆಂಪೇಗೌಡರು ನಮ್ಮವರು, ನಾವೆಲ್ಲರೂ ಒಕ್ಕಲಿಗರು" ಎಂದು ಕೇವಲ ನಾಟಕ ಆಡುತ್ತಿದ್ದ ಅನೇಕ 'ನಟನಾ ಶಿರೋಮಣಿಗಳು' ಹಾಗೂ ಅಮಾಯಕ ಸಮುದಾಯದ ಜನರಿಂದ ದೇಣಿಗೆ ಪಡೆದು "ನಾವು ಸಮುದಾಯವನ್ನು ಕಾಪಾಡುತ್ತೇವೆ" ಎಂದು ಬೊಬ್ಬೆ ಹೊಡೆಯುವ ಹಲವಾರು ಮಂದಿ ಗಣ್ಯರೆನಿಸಿಕೊಂಡವರು ಈ ಮಹಾ ಹೋರಾಟದ ಕಡೆ ಕಾಣಲೇ ಇಲ್ಲ!
ಮುಖಂಡರ ಸ್ವಾರ್ಥದ ಸತ್ಯ:
ಇದನ್ನೇ ಸಮುದಾಯ ಅರ್ಥಮಾಡಿಕೊಳ್ಳಬೇಕು: ನಿಮ್ಮ ಬಳಿ ಮತಯಾಚನೆಗೆ ಬರುವ ಯಾರೋ ಒಬ್ಬರು, ತಮ್ಮ ತಮ್ಮ ವೈಯಕ್ತಿಕ ಆಸ್ತಿಗಳಿಗೆ ಧಕ್ಕೆ ಬಂದಾಗ ಕರ್ನಾಟಕದ ಉಚ್ಚ ನ್ಯಾಯಾಲಯದಿಂದ ಹಿಡಿದು ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯದವರೆಗೆ ಹೋರಾಟ ಮಾಡಿ ರಿಯಲ್ ಎಸ್ಟೇಟ್ ದಂಧೆಗಳನ್ನು ಮಾಡಿಕೊಂಡು, ಕೇವಲ ತಮ್ಮ ಗೌರವ-ಕೀರ್ತಿಗಾಗಿ ಮಾತ್ರ "ನಾವು ಗೌಡರು" ಎಂದು ಗುರುತಿಸಿಕೊಂಡು ಸಮಾಜದಲ್ಲಿ ನೆಮ್ಮದಿಯಿಂದ ಇರುವಾಗ, ಇಡೀ ಸಮುದಾಯಕ್ಕೆ ಆದ ಈ ನೋವಿನ ಸಂಗತಿಗೆ ಮತ್ತು ಈ ಅನ್ಯಾಯಕ್ಕೆ ಏಕೆ ಧ್ವನಿ ಎತ್ತಲಿಲ್ಲ?
ದ್ರೋಹಿ ಯಾರು?: ಬದಲಿಗೆ, ಈ ವಿಚಾರದಲ್ಲಿ ಒಂದು ಬಲಿಷ್ಠ ರಾಜಕೀಯ ಪಕ್ಷದ ಒಬ್ಬ ನಾಯಕನೇ "ಬೇಲಿಯೇ ಎದ್ದು ಹೊಲವನ್ನು ನುಂಗುವಂತೆ" ಸಮುದಾಯದ ಆಸ್ತಿಯನ್ನು ಕಬಳಿಸಲು ಮಹಾಷಡ್ಯಂತ್ರ ಮಾಡಿದ್ದಾನೆ ಎಂಬ ಆರೋಪ ಬಲವಾಗಿ ಕೇಳಿಬಂದಿದೆ. ನಮ್ಮ ಸಮುದಾಯದ ಈ ನಾಯಕರು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ತರುತ್ತಾರೆ ಎಂದು ನಂಬಿದ್ದರೆ, ಅವರು ಎಂದಿಗೂ ಇಷ್ಟು ದೊಡ್ಡ ಆಸ್ತಿಯನ್ನು ನಿರ್ಲಕ್ಷಿಸುತ್ತಿರಲಿಲ್ಲ. ಇಂತಹ ದ್ರೋಹ ಎಸಗಿದವನನ್ನು ಭೈರವನು ಎಂದಿಗೂ ಸುಮ್ಮನೆ ಬಿಡುವುದಿಲ್ಲ.
ಅಂತಿಮ ಸಂಕಲ್ಪ ಮತ್ತು ಪೀಳಿಗೆಯ ಭವಿಷ್ಯ: ಈಗ ಎಚ್ಚೆತ್ತುಕೊಳ್ಳಿ!
ಇದೆಲ್ಲವೂ ಸರಿ. ಇನ್ನಾದರೂ ಸಮುದಾಯವು ತನ್ನ ಮುಂದಿನ ಮಕ್ಕಳ ಭವಿಷ್ಯದ ಚಿಂತನೆಗಾಗಿ ಆದರೂ ಈ ಭೂಮಿಯನ್ನು ಉಳಿಸಿಕೊಳ್ಳಲು ಜಾಗೃತವಾಗಬೇಕು.
ಸಮುದಾಯದ ಕರೆ: ನಾವು ಈಗಿರುವ ಒಕ್ಕಲಿಗ ಸಮುದಾಯದ ಪ್ರತಿಯೊಬ್ಬರೂ ಒಗ್ಗಟ್ಟಾಗಿ, ದಾನಿಗಳ ಆಶಯಗಳನ್ನು (Donor’s Intentions) ರಕ್ಷಿಸಲು ಮತ್ತು ₹10,000 ಕೋಟಿ ಮೌಲ್ಯದ ಈ ಮಹಾ ಸಾತ್ವಿ ರಂಗಮ್ಮನವರ ತ್ಯಾಗವನ್ನು ಉಳಿಸಲು ಹೋರಾಟ ಮಾಡಬೇಕು. ಇಲ್ಲದಿದ್ದರೆ, ಈ ಅಜಾಗರೂ ಕಥೆಯ ಶಾಪವೂ ಶಾಶ್ವತವಾಗಿ ನಮ್ಮ ಸಮುದಾಯದೊಂದಿಗೆ ಇರುತ್ತದೆ.
ಕರ್ತವ್ಯ: ಇಂತಹ ತಪ್ಪು ಕೆಲಸಕ್ಕೆ ಕೈ ಹಾಕಿದವರ ಮೇಲೆ ಪ್ರಹಾರ ಮಾಡಿ ಬುದ್ಧಿ ಕಲಿಸಬೇಕು ಮತ್ತು ಅವರನ್ನು ನ್ಯಾಯಾಂಗದ ವ್ಯಾಪ್ತಿಯಲ್ಲಿ ಶಿಕ್ಷಿಸಬೇಕು. ಯಾವುದೇ ಕಾರಣಕ್ಕೂ "ಅವನು ನಮ್ಮ ನೆಂಟರು, ಇವರು ನಮ್ಮ ಪಕ್ಷದವರು, ಇವರು ದೊಡ್ಡವರು, ಇವರು ಸಾಧಕರು" ಎಂದೆಲ್ಲಾ ಹೇಳಿ ನಮ್ಮ ಸಮುದಾಯದ ಕೀರ್ತಿಯನ್ನು ಇಂತಹವರ ಸ್ವಾರ್ಥಕ್ಕೆ ಬಲಿ ಕೊಡಬಾರದು.
ಪರಂಪರೆ ರಕ್ಷಣೆ: ಒಕ್ಕಲಿಗರು ಎಂದರೆ ಗಂಗರಸರಿಂದ ಹಿಡಿದು, ನಾಡಪ್ರಭು ಕೆಂಪೇಗೌಡರವರೆಗೆ, ಮತ್ತು ಕೆ.ಎಚ್. ರಾಮಯ್ಯನವರಂತಹ ಮಹನೀಯರು, ಕೃಷ್ಣಮ್ಮ-ರಂಗಮ್ಮನಂಥ ಧೀಮಂತರು ಹಾಗೂ ಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರ ದಿವ್ಯ ಚೇತನ್ಯಕ್ಕೆ ಬರುವವರೆಗೂ ನಮಗೆಲ್ಲ ಇಷ್ಟೊಂದು ಗೌರವ ಮರ್ಯಾದೆಯನ್ನು ಉಳಿಸಿ ಕೊಟ್ಟಿರುತ್ತಾರೆ. ಅದನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಒಕ್ಕಲಿಗನ ಮೊದಲನೇ ಕರ್ತವ್ಯ.
ಮರೆಯದಿರಿ, ಸಮುದಾಯದ ಬೇಜವಾಬ್ದಾರಿತನ ವರ್ತನೆ ನಿಮ್ಮ ಮಕ್ಕಳ ಭವಿಷ್ಯ ಅಧೋಗತಿಗೆ ಹೋಗುತ್ತದೆ! ಜಾಗೃತರಾಗಿ! ಒಗ್ಗಟ್ಟಾಗಿ!
