Community Projects

Dedicated to serving Vokkaliga community through civic engagement and ethical organization.

Empowering Vokkaligas

Building a strong system to fulfill the needs of Vokkaliga community.

Future Sustainability Programs

Ensuring quality living and basic future for the next generation.

ನಾವು ಇಂದು ಸಂಪಾದಿಸಿದ ಹಣ ಹಿಂದೆಲ್ಲ ನಾಳೆ ಭಯ ಆಗಲೇಬೇಕು ಹಾಗೂ ಯಾವುದು ಶಾಶ್ವತವಲ್ಲ ಎಂಬುದು ಸತ್ಯ, ಆದರೆ ಬಲಿಷ್ಠವಾದ ನಮ್ಮ ಹಿರಿಯರು ಮತ್ತು ಅನೇಕ ತ್ಯಾಗಮಯಿ ಜೀವನಕ್ಕೆ ಅಡಿಪಾಯ ವಾದಂತಹ ಬದುಕನ್ನು ಬದುಕಿದವರು ನಮಗೆ ಉಳಿಸಿಕೊಟ್ಟ ಗೌರವ ಕೀರ್ತಿಗಳು ಇಂದಿಗೂ ಸಮಾಜದಲ್ಲಿ ನಮ್ಮನ್ನು ಗೌರವತರನ್ನಾಗಿ ಮಾಡಿರುವುದು ಕಣ್ಣಿಗೆ ಕಾಣುವಂತಹ ಸತ್ಯ.

ಇಂತಹ ಭವ್ಯ ಪರಂಪರೆಯ ಒಕ್ಕಲಿಗ ಪರಂಪರೆಯಿಂದ ಹುಟ್ಟಿದ ನಾವು ನಮ್ಮ ಉಳಿವನ್ನು ನಮ್ಮ ಐಕ್ಯತೆಯ ಗೌರವ ಕೀರ್ತಿಗಳೊಂದಿಗೆ ಪೋಣಿಸಿಕೊಳ್ಳಬೇಕು, ಒಂದು ವೇಳೆ ನಾವು ಈ ಒಂದು ಸಮುದಾಯಿಕ ಚಿಂತನೆ ಮತ್ತು ಐಕ್ಯತೆಯ ಗೌರವಗಳನ್ನು ಮರೆತರೆ, ಸಮಾಜದಲ್ಲಿ ಹಂತ ಹಂತವಾಗಿ ರಾಜಕೀಯ, ಕಾರ್ಯಾಂಗ ಮತ್ತು ಉಳಿದ ಎಲ್ಲ ಕ್ಷೇತ್ರಗಳಲ್ಲಿ ನಮ್ಮನ್ನು ದಿಕ್ಕು ತಪ್ಪಿಸಿ ನಮ್ಮ ಐಕ್ಯತೆಯನ್ನು ಮರೆತು ಮುಂದೊಂದು ದಿನ ಅಸ್ತಿತ್ವವನ್ನೇ ಅಳಿಸಿ ಹಾಕುವ ಕಾಲ ದೂರವೇನಿಲ್ಲ ಎಂಬುದನ್ನು ನಾವು ಅರಿಯಬೇಕು. ನಮ್ಮನ್ನು ಕಾಪಾಡುವುದು ನಮ್ಮ ಐಕ್ಯತೆ ಹೊರತು ಬೇರೇನೂ ಅಲ್ಲ, ಆದ್ದರಿಂದ ಈ ಕೊಡಲೇ ಈ ಕ್ಷಣದಿಂದ ನಾವೆಲ್ಲರೂ ಒಂದು ಆಲೋಚನೆಯ ಮುಖಾಂತರ ಒಂದಾಗಬೇಕು ಅದೇನೆಂದರೆ ನಾವೆಲ್ಲರೂ ಹೆಮ್ಮೆಯ ಒಕ್ಕಲಿಗ ಪರಂಪರೆಯ ಬೆನ್ನೆಲುಬನ್ನು ಉಳ್ಳವರು ಹಾಗೂ ಒಳಪಂಗಡಗಳ ಐಕ್ಯತೆಯೇ ಈ ಶಕ್ತಿಗೆ ಮೂಲಾಧಾರವಾಗುವುದು ಎಂಬುದು ಅಗ್ನಿಯಸ್ತೆ ಸತ್ಯ ಎಂಬುದನ್ನು ನಾವು ಅರಿಯಬೇಕು.

ಒಕ್ಕಲಿಗರ ಒಳಪಂಗಡಗಳ ಐಕ್ಯತೆ ಆಗದಿದ್ದ ಪಕ್ಷದಲ್ಲಿ ಬರಿಯ ರಾಜಕೀಯ ಲೋಭಿಗಳಿಗೆ ಮತ್ತು ಸ್ವಾರ್ಥಗಳಿಗೆ ಮುಂದೊಂದು ದಿನ ಸಮಸ್ತ ಎಲ್ಲಾ ಒಕ್ಕಲಿಗ ಗೌರವ ಮರ್ಯಾದೆಗಳು ಇಲ್ಲದಂತಾಗುವುದರಲ್ಲಿ ಸಂಶಯವೇ ಇಲ್ಲ.

ಯಾವುದೇ ಕಾರಣಕ್ಕೂ ಒಕ್ಕಲಿಗರ ಒಳಪಂಗಡಗಳ ಐಕ್ಯತೆಯ ಬಾಗಿಲುಗಳನ್ನು ತೆರೆದು ಸಮಾಜದಲ್ಲಿ ಗೌರವ ಮರ್ಯಾದೆಗಳೊಂದಿಗೆ ಬದುಕುವ ವಾತಾವರಣವನ್ನು ಮುಂದಿನ ಪೀಳಿಗೆಗೆ ಒದಗಿಸುವ, ಬೆಳಕನ್ನು ಚೆಲ್ಲಿ ನಿಜ ಜ್ಞಾನಕ್ಕೆ ಮನ್ನಣೆಯನ್ನು ಕೊಟ್ಟು, ಕನಿಷ್ಠ ನಮ್ಮ ಜವಾಬ್ದಾರಿ ಎಂದು ಅರಿತು ನಮ್ಮ ನಿಸ್ವಾರ್ಥ ಸಮುದಾಯದ ಆಲೋಚನೆಗೆ ಕೈಜೋಡಿಸಬೇಕಾದ ಕರ್ತವ್ಯ ನಮ್ಮದಾಗಿಸಿಕೊಂಡು ನಡೆಯಲೇಬೇಕು ಎಂಬ ಅನಿವಾರ್ಯ ಪರಿಸ್ಥಿತಿ ಇಂದು ಒಂದು ಒದಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

Community Engagement

Uniting vokkaliga community to build a strong system for future.

people sitting on floor front of table
people sitting on floor front of table
five human hands on brown surface
five human hands on brown surface