ವಿಶೇಷ ತನಿಖಾ ವರದಿ: ಕೋಲಾರ ಜಿಲ್ಲಾ ಒಕ್ಕಲಿಗರ ಸಂಘದ ನೈತಿಕ ಪತನ? 40 ವರ್ಷಗಳ 'ಅಧಿಕಾರ ಶಾಹಿ' ವಿರುದ್ಧ ಕುಲಬಾಂಧವರ ಆಕ್ರೋಶ!
ಕೋಲಾರ: ಒಂದು ಸಮುದಾಯದ ಏಳಿಗೆ, ಸಂಸ್ಕೃತಿ ಮತ್ತು ಹಿತರಕ್ಷಣೆಯ ಆಶಯದೊಂದಿಗೆ ಅಸ್ತಿತ್ವಕ್ಕೆ ಬರುವ ಸಂಘಟನೆಗಳು ಕೇವಲ ವ್ಯಕ್ತಿಗತ ಲಾಭಕ್ಕೆ ಬಳಕೆಯಾದರೆ ಏನಾಗುತ್ತದೆ ಎಂಬುದಕ್ಕೆ ಕೋಲಾರ ಜಿಲ್ಲಾ ಒಕ್ಕಲಿಗರ ಸಂಘದ ಇಂದಿನ ಸ್ಥಿತಿಯೇ ಸಾಕ್ಷಿ. ಸಮುದಾಯದ ಹೆಸರಿನಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿರುವವರ ಮುಖವಾಡ ಕಳಚುವ ಸಮಯ ಬಂದಿದೆ.
VOKKALIGA COMMUNITY DEVELOPMENT AND UNITY FORMATION IN ACTION
Rohann kumar K
1/5/20261 min read


ವಿಶೇಷ ತನಿಖಾ ವರದಿ: ಕೋಲಾರ ಜಿಲ್ಲಾ ಒಕ್ಕಲಿಗರ ಸಂಘದ ನೈತಿಕ ಪತನ? 40 ವರ್ಷಗಳ 'ಅಧಿಕಾರ ಶಾಹಿ' ವಿರುದ್ಧ ಕುಲಬಾಂಧವರ ಆಕ್ರೋಶ!
ಕೋಲಾರ: ಒಂದು ಸಮುದಾಯದ ಏಳಿಗೆ, ಸಂಸ್ಕೃತಿ ಮತ್ತು ಹಿತರಕ್ಷಣೆಯ ಆಶಯದೊಂದಿಗೆ ಅಸ್ತಿತ್ವಕ್ಕೆ ಬರುವ ಸಂಘಟನೆಗಳು ಕೇವಲ ವ್ಯಕ್ತಿಗತ ಲಾಭಕ್ಕೆ ಬಳಕೆಯಾದರೆ ಏನಾಗುತ್ತದೆ ಎಂಬುದಕ್ಕೆ ಕೋಲಾರ ಜಿಲ್ಲಾ ಒಕ್ಕಲಿಗರ ಸಂಘದ ಇಂದಿನ ಸ್ಥಿತಿಯೇ ಸಾಕ್ಷಿ. ಸಮುದಾಯದ ಹೆಸರಿನಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿರುವವರ ಮುಖವಾಡ ಕಳಚುವ ಸಮಯ ಬಂದಿದೆ.
ಯಾರು ಇವರು? ಸಮುದಾಯ ಕೇಳುತ್ತಿರುವ ಖಾರವಾದ ಪ್ರಶ್ನೆಗಳು!
ಕಳೆದ 40 ವರ್ಷಗಳಲ್ಲಿ ಕನಿಷ್ಠ 40 ಬಾರಿ ಕೂಡ ನಾನು ಒಕ್ಕಲಿಗ, ನಾನು ಒಕ್ಕಲಿಗರಿಗಾಗಿ ನಿಲ್ಲುತ್ತೇನೆ ಎಂಬ ಸತ್ಯದ ಧ್ವನಿ ಇವರಿಂದ ಕೇಳಿಬರಲಿಲ್ಲ. ಮತ್ತು ಕೆಂಪೇಗೌಡರ ಜಯಂತಿಗೆ ಅಷ್ಟೇ ನಾನು ಸೀಮಿತ ಅಲ್ಲ, ಕೆಂಪೇಗೌಡರ ಆದರ್ಶಗಳನ್ನು ಸಮಾಜದಲ್ಲಿ ಅಳವಡಿಸೋಣ ಎಂಬ ಮಾತುಗಳನ್ನು ಇವರು ಒಮ್ಮೆಯಾದರೂ ಆಡಲಿಲ್ಲ? ಎಂಬುದು ಸಮುದಾಯದ ನೋವಿನ ಪ್ರಶ್ನೆ.
ದುರದೃಷ್ಟವಶಾತ್, ಸದ್ಯ ಸಮುದಾಯದ ಯಾವೊಂದು ಸಮಸ್ಯೆಗಳಿಗೆ ಎದೆಗಾರಿಕೆಯಿಂದ ನಿಲ್ಲುವ ಧೈರ್ಯವು ಇವರಿಗಿಲ್ಲ? ಮುಂದಿನ ಪೀಳಿಗೆಗೆ ಆಗುತ್ತಿರುವ ಅನ್ಯಾಯವನ್ನು ತಡೆಯುವ ಯೋಗ್ಯತೆಯೂ ಇಲ್ಲ? ಯಾವುದೇ ಹೋರಾಟಗಳಲ್ಲಿ ಕಾಣಿಸಿಕೊಳ್ಳುವುದು ಇಲ್ಲ? ಯಾರು ಇವರು...? ಎಂಬ ಪ್ರಶ್ನೆ ಇಂದು ಜಿಲ್ಲೆಯಾದ್ಯಂತ ಪ್ರತಿಧ್ವನಿಸುತ್ತಿದೆ.
ಅಧಿಕಾರದ ದಾಹ ಮತ್ತು ಬಕೆಟ್ ಸಂಸ್ಕೃತಿ
ಆತ್ಮೀಯ ಕುಲಬಾಂಧವರೇ, ಒಂದನ್ನು ನೆನಪಿನಲ್ಲಿಟ್ಟುಕೊಳ್ಳಿ. ಅಧಿಕಾರಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯುವ ಇವರು, ತಮ್ಮ ನಾಲ್ಕು ಚೇಲಾಗಳಿಗೆ ಮತ್ತು ಸ್ವಾಭಿಮಾನ ಮರೆತು ಅಧಿಕಾರದ ದಾಹಕ್ಕಾಗಿ ಇವರಿಗೆ ಬಕೆಟ್ ಹಿಡಿಯುವ ಜನರಿಗೆ ಕಾಣುವಂತೆ ನಿರ್ಧಾರಗಳನ್ನು ತೆಗೆದುಕೊಂಡು, ಅದು ಸಮುದಾಯದ ನಿರ್ಧಾರ ಎಂದು ಸಮಾಜವನ್ನು ನಂಬಿಸುತ್ತಿದ್ದಾರೆ. ಇದು ಕೇವಲ ಅಧಿಕಾರದ ಹಪಹಪಿಯಲ್ಲ, ಬದಲಿಗೆ ಸಮುದಾಯದ ನಂಬಿಕೆಗೆ ಮಾಡುತ್ತಿರುವ ದ್ರೋಹ.
ಕೇವಲ ದೇಣಿಗೆಗಾಗಿ ಸಮುದಾಯದ ಗೌರವಯುತರನ್ನು ನಂಬಿಸಿ ಇಕ್ಕಟ್ಟಿಗೆ ಸಿಲುಕಿಸಿ ಮತ್ತು ರಾಜಕೀಯವಾಗಿ ನಮ್ಮದೇ ಸಮುದಾಯದ ಜನರನ್ನು ವಿಭಜಿಸಿ ಕಾರ್ಯಕ್ರಮಗಳಲ್ಲಿ ಕೇವಲ ರಾಜಕೀಯವನ್ನು ಮಾಡುತ್ತಾ, ಇವರು ಯಾವ ಪಕ್ಷಕ್ಕೆ ಬಕೆಟ್ ಹಿಡಿಯುತ್ತಾರೋ ಆ ಪಕ್ಷಕ್ಕೆ ಮಾತ್ರ ನಿಷ್ಠೆ ತೋರಿಸುತ್ತಾ ಸದಾಕಾಲ ವರ್ಷಾನುಗಟ್ಟಲೆ ಕೋಲಾರ ಜಿಲ್ಲಾ ಒಕ್ಕಲಿಗರ ಸಂಘವನ್ನು ಇಲ್ಲಿಯವರೆಗೆ ಹಾಳು ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿ ಜನರನ್ನು ಮತ್ತು ಅವರ ನಂಬಿಕೆಗಳನ್ನು ಹಾಳು ಮಾಡಿ ಮತ್ತು ಪ್ರಸಕ್ತ ನಾವು ಒಕ್ಕಲಿಗರು ಎಂದು ಹೇಳಿಕೊಳ್ಳಲು ಜನರಿಗೆ ಜಿಗುಪ್ಸೆ ಬರುವಂತೆ ಮಾಡಿ ಸಮುದಾಯದ ಸೇವೆ ಸಲ್ಲಿಸಿರುವ ಏಕೈಕ ಗ್ಯಾಂಗ್ ಎಂದರೆ ಈ ಫೋಟೋದಲ್ಲಿರುವ ವ್ಯಕ್ತಿ ಮತ್ತು ಅವನ ಸಹಚರರು.
ಸಂವಿಧಾನದ ಆಶಯಗಳ ಉಲ್ಲಂಘನೆ ಮತ್ತು ವಕೀಲರ ಕರ್ತವ್ಯ ಲೋಪ
ಒಂದು ನಯಾ ಪೈಸೆ ಸಮುದಾಯದ ಜನರಿಗೆ ತಲುಪುವಂತೆ ಒಂದು ಆಫೀಸ್ ಮಾಡುವ ಯೋಗ್ಯತೆ ಇಲ್ಲದ ಈ ಕುಲದ್ರೋಹಿಗಳು ನಮ್ಮ ಸಮುದಾಯದಲ್ಲಿ ಸಾಧನೆ ಮಾಡಿ ಇಂದು ಸರ್ಕಾರಿ ಸೇವೆಯಲ್ಲಿ ಉನ್ನತ ಸ್ಥಾನ ಗಳಿಸಿರುವ ಗೌರವಯುತ ದೇವರಾಜ್ ರವರನ್ನು ಅಭಿನಂದಿಸಲು ಹೊರಟಿದ್ದಾರೆ. ಇದು ಕೇವಲ ನಾಟಕವಷ್ಟೇ.
ಹಾಗೂ ಕನಿಷ್ಠ ಒಂದನ್ನು ನಾವು ಗಮನಿಸಬಹುದು, ಅದೇನಂದರೆ ಸಮುದಾಯದ ಹಿತದೃಷ್ಟಿಯಿಂದ ಗೌರವಯುತ ದೇವರಾಜ್ ರವರು 40 ವರ್ಷಗಳಿಂದ ಅಸ್ತಂಗತದ ಹಾದಿಯಲ್ಲಿರುವ ಒಕ್ಕಲಿಗ ಸಮುದಾಯದ ಶಕ್ತಿಯನ್ನು ಜಿಲ್ಲೆಯಲ್ಲಿ ಕಾಪಾಡಲು ಮೊದಲು ಜಿಲ್ಲಾ ಒಕ್ಕಲಿಗರ ಸಂಘದ ಸಭೆ ನಡೆಯಬೇಕು ಮತ್ತು ನಿಯಮದಂತೆ ಚುನಾವಣೆ ನಡೆಯಬೇಕು ಹಾಗೂ ಅನೇಕ ಜನರಿಗೆ ಸದಸ್ಯತ್ವ ನೀಡಬೇಕು ಮುಂತಾದವುಗಳನ್ನು ಸಮಾಜದ ಜನರೊಂದಿಗೆ ಚರ್ಚಿಸಿ ಇಂತಹ ಬುದ್ಧಿಹೀನರಿಗೆ ಬುದ್ಧಿ ಕಲಿಸಲು ಮಾರ್ಗದರ್ಶನ ನೀಡಬೇಕು ಎಂಬುದು ಬಹಳ ಮಂದಿ ಸಮಾಜದ ಹಿರಿಯರ ಮತ್ತು ಚಿಂತಕರ ಮಹಾದಾಸೆಯಾಗಿರುತ್ತದೆ.
ಇಲ್ಲಿನ ಅಸಲಿ ವಿಪರ್ಯಾಸವೆಂದರೆ, ಜಿಲ್ಲಾ ಒಕ್ಕಲಿಗರ ಸಂಘದ ಶಂಕರಪ್ಪರವರು ವೃತ್ತಿಯಲ್ಲಿ ವಕೀಲರು, ಅಂದರೆ ಸಂವಿಧಾನದ ಅಸ್ಮಿತೆಗಳನ್ನು ಕಾಪಾಡುವುದು ಅವರ ಕರ್ತವ್ಯ. ಆದ್ದರಿಂದ ನ್ಯಾಯಾಲಯದಲ್ಲಿ ಇವರು ಬಹಳಷ್ಟು ಶ್ರದ್ಧೆಯಿಂದ ಕಡತಗಳನ್ನು ಬರೆಯುವುದಾಗಲಿ, ಅದನ್ನು ದಾಖಲು ಮಾಡುವುದರಲ್ಲಿ ಆಗಲಿ ಅವರಿಗೆ ಅಸಿಸ್ಟೆಂಟ್‌ಗಳನ್ನು ಸಹ ಜವಾಬ್ದಾರಿ ನೀಡಿ ಕೆಲಸ ಮಾಡಿಸುತ್ತಾರೆ. ಆದರೆ ತಮ್ಮದೇ ಸಮುದಾಯದ ವಿಷಯದಲ್ಲಿ ಮಾತ್ರ ಇವರ ನಡೆ ಸಂಪೂರ್ಣ ಭಿನ್ನ. ಆದರೆ ಅವರು ವಕೀಲರಾಗಿದ್ದು ಒಂದು ಕಣ್ಣಿಗೆ ಬೆಣ್ಣೆ ಮತ್ತು ಇನ್ನೊಂದು ಕಣ್ಣು ಎಂದರೆ ಸಮುದಾಯದ ಅವರ ಜವಾಬ್ದಾರಿ, ಅದಕ್ಕೆ ಸುಣ್ಣ. ಏಕೆಂದರೆ ಕನಿಷ್ಠ ಬೈಲಾಗಳಲ್ಲಿರುವ ಒಂದು ಪೈಸೆಯ ನಿರ್ವಹಣೆ ಇವರು ಮಾಡಿರುವುದಿಲ್ಲ. ಪ್ರತಿ ವರ್ಷದ ಆಡಿಟ್ ಪಾರದರ್ಶಕತೆ ಇರುವುದಿಲ್ಲ. ಸಭೆಗಳಿಗೆ ಸಮುದಾಯದ ಎಲ್ಲರಿಗೂ ತಿಳಿಸುವುದಿಲ್ಲ.
ಸಮುದಾಯಕ್ಕೆ ಮಾಡುತ್ತಿರುವ ದ್ರೋಹದ ಪ್ರಶ್ನೆ
ಸಮುದಾಯದ ಮೇಲೆ ಏಕೆ ಇವರಿಗೆ ಇಷ್ಟೊಂದು ಅಸೂಯೆ? ಹಾಗೂ ಸಮುದಾಯದಿಂದ ಗೌರವ ಇವರಿಗೆ ಬೇಕಿಲ್ಲ ಎಂಬುದಾದರೆ, 40 ವರ್ಷ ಸಮುದಾಯವನ್ನು ಹಾಳು ಮಾಡುವಷ್ಟು ಮೋಸ ಅಥವಾ ದ್ರೋಹ ಸಮಸ್ತ ಜಿಲ್ಲೆಯ ಒಕ್ಕಲಿಗರಿಂದ ಇವರಿಗೆ ಏನು ಆಗಿದೆ ಎಂದು ಇವರು ಬಹಿರಂಗವಾಗಿ ಹೇಳಬೇಕು. ಅಲ್ಲದೆ, ಇದೇ ಸಂಘದ ನಿರ್ದೇಶಕರು ಯಾರು ಸಹ ಅವಿದ್ಯಾವಂತರು ಅಥವಾ ಗುಗ್ಗುಗಳು ಎಂದು ನಾವು ನಂಬುವುದಿಲ್ಲ. ಅವರು ಇಂತಹ ಎಲ್ಲಾ ಕರ್ತವ್ಯ ಲೋಪವನ್ನು ಯಾಕೆ ಪ್ರಶ್ನಿಸಿಲ್ಲ ಮತ್ತು ಸಮುದಾಯದ ಪರ ಯಾಕೆ ನಿಂತಿಲ್ಲ ಎಂದು ಅನೇಕರು ಕೇಳುತ್ತಿದ್ದಾರೆ, ಆದರೆ ಅವರ ಬಗ್ಗೆ ನಮಗೆ ಮಾಹಿತಿ ಇಲ್ಲ.
ಅಯೋಗ್ಯರ ಕೈಯಲ್ಲಿ ಅಧಿಕಾರ: ಸಮುದಾಯ ಪತನದ ಹಾದಿ
ಒಟ್ಟಿನಲ್ಲಿ ನನ್ನ ಪ್ರಕಾರ ಒಕ್ಕಲಿಗರ ಸಮಗ್ರ ಪತನಕ್ಕೆ ಮುಖ್ಯ ಕಾರಣ ಅಯೋಗ್ಯರು ಒಂದು ಕಡೆ ರಾಜಕೀಯ ಕ್ಷೇತ್ರದಲ್ಲಿ ಜವಾಬ್ದಾರಿ ಪಡೆಯುವುದಲ್ಲದೆ, ರಾಜಕೀಯರಹಿತವಾಗಿ ಇರಬೇಕಿದ್ದ ಒಕ್ಕಲಿಗರ ಸಂಘವನ್ನು ತಮ್ಮ ಸ್ವಾರ್ಥಕ್ಕೆ ಇಲ್ಲಿಯೂ ಸಹ ಅಧ್ಯಕ್ಷರು ಅಥವಾ ಮತ್ತೊಂದು ಪದವಿ ಪಡೆದು ಸಮುದಾಯಕ್ಕೆ ಮೋಸ ಮಾಡುತ್ತಿರುವ ಬೇಜಾರಿನ ಸಂಗತಿ.
ಸಮುದಾಯದ ಜನರು ಇನ್ನಾದರೂ ಜಾಗೃತರಾಗಬೇಕು. ಕಾಲ ಎಂಬುದು ಇಂದಿನಂತೆ ಇಲ್ಲ, ಮುಂಬರುವ ದಿನಗಳಲ್ಲಿ ಮುಂದಿನ ಪೀಳಿಗೆಗೆ ಬಹಳ ಸವಾಲುಗಳು ಬರಲಿವೆ. ನಾವು ಯಾವುದೇ ಕಾರಣಕ್ಕೂ ರಾಜಕೀಯ ಕ್ಷೇತ್ರದಲ್ಲಿ ಜವಾಬ್ದಾರಿ ವಹಿಸಿರುವ ನಮ್ಮ ಹಿತೈಷಿಗಳಿಗೆ ಸಾಮುದಾಯಿಕ ಕ್ಷೇತ್ರದಲ್ಲಿ ಜವಾಬ್ದಾರಿ ಕೊಡುವುದು ಎಷ್ಟು ಸರಿ ಎಂಬುದನ್ನು ಬಹಳ ವಿಮರ್ಶೆ ಮಾಡಿಕೊಳ್ಳಬೇಕು.
ಮುಂದಿನ ನಡೆ ಏನು?
ಈಗ ಇಡೀ ಜಿಲ್ಲೆಯ ಕಣ್ಣು ಏಳನೇ ತಾರೀಖಿನ ಮೇಲಿದೆ. ಏಳನೇ ತಾರೀಕು ಜಿಲ್ಲಾ ನೋಂದಣಾಧಿಕಾರಿ ಕಚೇರಿಗೆ ಎಂತಹ ಕಡತಗಳನ್ನು ಇವರು ಕೊಡುತ್ತಾರೆ ಎಂದು ಬುಧವಾರ ಏನಾಗುತ್ತದೆ ಎಂದು ಇಡೀ ಜಿಲ್ಲೆ ಕಾದು ನೋಡುತ್ತಿದೆ... ಅವರನ್ನು ಅವರು ಸಾಬೀತುಪಡಿಸಿಕೊಳ್ಳಲು ಯಾವ ಮಟ್ಟದ ಸುಳ್ಳುಗಳನ್ನು ಹೇಳುತ್ತಾರೆ ಎಂದು ನಾವು ಕಾದು ನೋಡುತ್ತಿದ್ದೇವೆ.
ತೀರ್ಮಾನ: ಯಾವುದೇ ವ್ಯಕ್ತಿ ಅಥವಾ ಸಂಘಟನೆ ಸಮುದಾಯಕ್ಕಿಂತ ದೊಡ್ಡದಲ್ಲ. ಪಾರದರ್ಶಕತೆ ಇಲ್ಲದ, ಚುನಾವಣೆ ನಡೆಸದ ಮತ್ತು ರಾಜಕೀಯ ಲಾಭಕ್ಕೆ ಸಮುದಾಯವನ್ನು ಬಳಸಿಕೊಳ್ಳುವ ಇಂತಹ ವ್ಯವಸ್ಥೆಯ ವಿರುದ್ಧ ನಾವೆಲ್ಲರೂ ಒಕ್ಕೊರಲಿನಿಂದ ಧ್ವನಿ ಎತ್ತಬೇಕಿದೆ.
