ಒಕ್ಕಲಿಗ ಸಮುದಾಯದ ನಾಯಕತ್ವ, ರಾಜಕೀಯ ಮತ್ತು ಸಂಘಟನೆಯ ಕುರಿತು ಒಂದು ವಿಶ್ಲೇಷಣೆ
ಒಕ್ಕಲಿಗ ಸಮುದಾಯದ ನಾಯಕತ್ವ, ರಾಜಕೀಯ ಮತ್ತು ಸಂಘಟನೆಯ ಕುರಿತು ಒಂದು ವಿಶ್ಲೇಷಣೆ ಒಕ್ಕಲಿಗ ಸಮುದಾಯದ ರಾಜಕೀಯ ನಾಯಕತ್ವ, ಸಮುದಾಯ ಸಂಘಟನೆ (ಒಕ್ಕಲಿಗರ ಸಂಘ) ಮತ್ತು ಆಂತರಿಕ ಸವಾಲುಗಳ ಕುರಿತಾದ ಆಳವಾದ ವಿಚಾರ...
VOKKALIGA COMMUNITY DEVELOPMENT AND UNITY FORMATION IN ACTION
Rohan Gowda
12/3/20251 min read


ಒಕ್ಕಲಿಗ ಸಮುದಾಯದ ನಾಯಕತ್ವ, ರಾಜಕೀಯ ಮತ್ತು ಸಂಘಟನೆಯ ಕುರಿತು ಒಂದು ವಿಶ್ಲೇಷಣೆ
ಒಕ್ಕಲಿಗ ಸಮುದಾಯದ ರಾಜಕೀಯ ನಾಯಕತ್ವ, ಸಮುದಾಯ ಸಂಘಟನೆ (ಒಕ್ಕಲಿಗರ ಸಂಘ) ಮತ್ತು ಆಂತರಿಕ ಸವಾಲುಗಳ ಕುರಿತಾದ ಆಳವಾದ ವಿಚಾರ
1. ರಾಜಕೀಯ ನಾಯಕತ್ವ ಮತ್ತು ಸಮುದಾಯದ ನಿಲುವು
ಇಂದು ಸಮಾಜದಲ್ಲಿ ಧ್ವನಿ ಬರುತ್ತಿರುವುದು ಏನೆಂದರೆ: ಒಕ್ಕಲಿಗರ ಸಮುದಾಯ ಎಂದ ಮಾತ್ರಕ್ಕೆ ಸಾಮಾಜಿಕ ವಲಯವಾದ ಮತ್ತು ಸಮುದಾಯಿಕ ವಲಯದಿಂದ ಹೊರಗೆ ಬರುವ ರಾಜಕೀಯ ಕ್ಷೇತ್ರ ಅಥವಾ ರಾಜ್ಯಾಂಗದ ನಿರ್ವಹಣಾ ವಿಷಯಗಳಲ್ಲಿ ಯಾವುದೇ ಸಮುದಾಯ ಪ್ರತ್ಯೇಕವಾಗಿ ನಮ್ಮ ಸಮುದಾಯದವರೇ ನಾಯಕತ್ವ ವಹಿಸಬೇಕು ಎಂಬ ಭಾವನೆ ಸೂಕ್ತವಲ್ಲ. ಈ ಮಾತುಗಳು ತಪ್ಪೇನಲ್ಲ. ಇದಕ್ಕೆ ಪೂರಕವಾಗುವಂತೆ, ಒಕ್ಕಲಿಗರ ಸಮುದಾಯ ಎಂದಿಗೂ "ನಮ್ಮ ಸಮುದಾಯದವರೇ ನಾಯಕರಾಗಬೇಕು" ಎಂಬ ಪ್ರತ್ಯೇಕತಾ ಭಾವನೆ ಅಥವಾ ಧೋರಣೆಯನ್ನು ತೋರಿರುವುದಿಲ್ಲ.
ಇದಕ್ಕೆ ನೈಜ ಉದಾರಣೆ ಎಂದರೆ ಕುರುಬ ಸಮುದಾಯದ ನಮ್ಮ ಮಹಾನಾಯಕರು ಆದ ಹೆಚ್ ಡಿ ದೇವೇಗೌಡರಾಗಲಿ ಅಥವಾ ಅವರ ಜನ ಮೆಚ್ಚಿದ ನಾಯಕ ಕುಮಾರಣ್ಣನವರಾಗಲಿ ಅಥವಾ ಅವರ ಪುತ್ರ ರಾಜಕುಮಾರ ನಿಖಿಲ್ ಕುಮಾರಸ್ವಾಮಿ ಅವರೇ ಆಗಲಿ, ಇವರೆಲ್ಲರೂ ಕುರುಬ ಸಮುದಾಯಕ್ಕೆ ಸೇರಿದವರು ಎಂಬುದು ಮೂಲತಃ ನಮ್ಮ ಹಿರಿಯರಿಗೆ ಮತ್ತು ಸ್ವಾಮೀಜಿರವರಿಗೂ ಗೊತ್ತು. ಆದರೂ ಇಂದಿಗೂ ನಾವು ಅವರನ್ನು ಎಲ್ಲಿಯೂ ಬೇರೆಯ ಜಾತಿಯವರು ಅಥವಾ ಬೇರೆ ಸಮುದಾಯದವರು ಎಂದು ಪ್ರತ್ಯೇಕಿಸಿ ಹೊರಗೆ ಮಾತನಾಡುವುದಿಲ್ಲ. ಬದಲಿಗೆ, ಅದೆಷ್ಟೋ ಹಳ್ಳಿಗಳಲ್ಲಿ ಒಕ್ಕಲಿಗ ಅಂದರೆ ನಿಜವಾದ ಮೂಲ ಒಕ್ಕಲಿಗ ಸಮುದಾಯದವರು ಸಹ ಅವರೇ ನಮ್ಮ ನಾಯಕರು ಎಂದು ಈಗಲೂ ಹೇಳುತ್ತಾರೆ, ಅದರಲ್ಲಿ ತಪ್ಪೇನು ಇಲ್ಲ.
2. ವಿವಾದ ಮತ್ತು ಆಂತರಿಕ ಹೋರಾಟ
ಒಬ್ಬ ರಾಜಕೀಯ ವ್ಯಕ್ತಿಯಾಗಿ ಸರ್ಕಾರಿ ಜಾಗಗಳನ್ನು ಬಕ್ಷಿಸಿರುವ ಅನೇಕ ಉದಾಹರಣೆಗಳಿರುವಾಗ, ಪ್ರತ್ಯೇಕಿಸಿ ಇವರನ್ನೇ ಏಕೆ ಪ್ರಶ್ನಿಸಬೇಕು ಎಂಬ ವಿಚಾರ ಬಂದಾಗ, ಇಲ್ಲಿ ಒಂದು ವಿಷಯ ಸ್ಪಷ್ಟವಾಗುತ್ತದೆ:
ಇಲ್ಲಿ ನಾವು ಸರ್ಕಾರಿ ಜಾಗದ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ, ಒಬ್ಬ ಮಹಾ ಸಾತ್ವಿಯು ಒಕ್ಕಲಿಗ ಸಮುದಾಯದ ಉನ್ನತಿಗೆ ದಾನವಾಗಿ ನೀಡಿದ್ದ ಜಮೀನನ್ನು ಲಪಟಾಯಿಸಲು ತಂತ್ರಗಾರಿಕೆ ಮಾಡಿರುವುದನ್ನು ಖಂಡಿಸುತ್ತೇವೆ. ಈ ವಿಚಾರವಾಗಿ ಈಗಾಗಲೇ ಒಕ್ಕಲಿಗರ ಸಂಘ ಏನು ಮಾಡಲು ಆಗದಿರಲು, ಒಂದಿಷ್ಟು ಒಕ್ಕಲಿಗ ನಾಯಕರು ಮುಂದೆ ಬಂದು ನ್ಯಾಯವನ್ನು ಒದಗಿಸಿ ಸಮುದಾಯಕ್ಕೆ ಭರವಸೆ ಕೊಡಿಸಿದ್ದಾರೆ.
3. ಒಕ್ಕಲಿಗರ ಸಂಘದಲ್ಲಿ ರಾಜಕೀಯದ ಪಾತ್ರ: ಮೂಲ ಸಮಸ್ಯೆ
ಈ ಎಲ್ಲ ವಿಚಾರಗಳಿಗೆ ಮೂಲ ಕಾರಣ ಏನೆಂದರೆ ರಾಜಕೀಯ ಕ್ಷೇತ್ರ ಮತ್ತು ಅದರ ಮಿತಿ. ಸಮುದಾಯದ ಭಾವನೆಯಲ್ಲಿ ಬಹಳಷ್ಟು ಐಕ್ಯತೆಯನ್ನು ಪ್ರತಿನಿಧಿಸಿ, ಜನರನ್ನು ಒಗ್ಗಟ್ಟು ಮಾಡಿ, ಸಮಾಜ ಕಟ್ಟಲು, ಒಕ್ಕಲಿಗರನ್ನು ಮತ್ತು ಅದರ ಸಂಪ್ರದಾಯವನ್ನು ಕಾಪಾಡಿಕೊಂಡು, ಒಕ್ಕಲುತನಕ್ಕೆ ಮಹತ್ವ ನೀಡಲು ಇರಬೇಕಿದ್ದ ಒಕ್ಕಲಿಗರ ಸಂಘಕ್ಕೆ ನಾವೇ (ಸಮುದಾಯದವರೇ) ರಾಜಕೀಯ ಆಲೋಚನೆಗಳು ಇರುವಂತಹ ವ್ಯಕ್ತಿಗಳನ್ನು ಕರೆತಂದು ನಿರ್ದೇಶಕರಾಗಿ ಚುನಾಯಿಸಿರುವುದು ಮೊದಲ ತಪ್ಪು.
ರಾಜಕೀಯಕ್ಕೆ ಅವಕಾಶ: ನಿರ್ದೇಶಕರಾಗಿ ಸಮುದಾಯದ ಗೌರವವನ್ನು ಕಾಪಾಡಿಕೊಂಡು ಇರುವ ಬದಲು, ರಾಜಕೀಯ ಕ್ಷೇತ್ರಗಳ ವೇದಿಕೆಗಳನ್ನು ಅಲಂಕರಿಸುವುದು, ಸಾಮಾಜಿಕವಾಗಿ ಮತ್ತು ಸಾರ್ವಜನಿಕವಾಗಿ ಬಾಹ್ಯವಾಗಿ ಒಂದು ಪಕ್ಷಕ್ಕೆ ಸಮರ್ಥವಾಗಿ ನಿಲ್ಲುವುದು ಬಹಳ ದೊಡ್ಡ ಅಪರಾಧ.
ನಿಯಮದ ಅವಶ್ಯಕತೆ: ಇದೇ ರೀತಿ, ರಾಜಕೀಯದಲ್ಲಿ ಇರುವಂತಹ ನಮ್ಮ ಸಮುದಾಯದ ಯಾರೇ ಆಗಲಿ ಒಕ್ಕಲಿಗರ ಸಂಘ ಅಥವಾ ಸಂಘಟನೆಗಳ ವೇದಿಕೆಗಳ ಮೇಲೆ ಜವಾಬ್ದಾರಿ ವಹಿಸಿ ಕೂರಬಾರದು. ಬದಲಿಗೆ ಎಲ್ಲರನ್ನು ಪ್ರೋತ್ಸಾಹಿಸಬೇಕು.
ಅದೇ ರೀತಿ, ಒಕ್ಕಲಿಗರ ಸಮುದಾಯದ ಸಂಘಟನೆಯಲ್ಲಿನ ಜವಾಬ್ದಾರಿತರು ಮತ್ತು ಸಂಘಗಳು ಯಾವುದೇ ಕಾರಣಕ್ಕೂ ವ್ಯಕ್ತಿನಿಷ್ಠೆಗೆ ಸೀಮಿತವಾಗದೆ ನಮ್ಮ ಸಮುದಾಯದ ನಿಷ್ಠಾವಂತ ರಾಜಕೀಯ ಕ್ಷೇತ್ರದ ಪಕ್ಷಾತೀತವಾಗಿ ಯಾರನ್ನೇ ಆಗಲಿ ಸಹಕರಿಸಬಹುದು. ಆದರೆ, ಯಾವುದೇ ಕಾರಣಕ್ಕೂ ರಾಜಕೀಯ ಪಕ್ಷಗಳ ಅಥವಾ ರಾಜಕೀಯ ವ್ಯಕ್ತಿತ್ವಗಳ ವೇದಿಕೆಗಳನ್ನು ಜವಾಬ್ದಾರಿ ವಹಿಸಿ ಅಲಂಕರಿಸಬಾರದು. ಇಂತಹ ಒಂದು ದೃಢ ನಿರ್ಧಾರವನ್ನು ಅನುಷ್ಠಾನಗೊಳಿಸಲು ನಾವೆಲ್ಲರೂ ಪ್ರಮಾಣಿಭೂತರಾಗಿ ಸಂಕಲ್ಪ ತೊಡಬೇಕು.
4. ಭವಿಷ್ಯದ ಸವಾಲುಗಳು ಮತ್ತು ಕಾರ್ಯನೀತಿ
ಮೊನ್ನೆ ಮೊನ್ನೆ ಅಷ್ಟೇ ಕೆಲವರು ಹೇಳುತ್ತಿದ್ದರು: ಒಕ್ಕಲಿಗರ ಸಂಘದ ಚುನಾವಣೆ ಬಂದರೆ, ಒಂದಿಷ್ಟು ಹಣ ಭಿಕ್ಷೆ ನೀಡಿದರೆ ಸಾಕು, ನಮ್ಮ ಸಮುದಾಯದವರು ಏನು ಕಡಿಮೆ ಇಲ್ಲ, ಒಂದು ವೋಟಿಗೆ ಸಾವಿರ ಕೊಟ್ಟರೆ ಸಾಕು ನಾವು ಚುನಾವಣೆ ಗೆಲ್ಲಬಹುದು ಎನ್ನುವ ಮಟ್ಟಕ್ಕೆ ನಮ್ಮಲ್ಲಿರುವ ಕೆಲವರು ಸಮುದಾಯದ ಕುಲಬಾಂಧವರು ದಿಕ್ಕು ತಪ್ಪಿದ್ದಾರೆ.
ಇದನ್ನು ನಿಯಂತ್ರಿಸಬೇಕಾದರೆ:
ಭ್ರಷ್ಟಾಚಾರ ನಿಯಂತ್ರಣ: ಕನಿಷ್ಠ ಮುಂಬರುವ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಯಾರೇ ಹಣಕಾಸಿನ ಹಂಚುವಿಕೆಯನ್ನು ಮಾಡಿದರೆ, ಅಂತಹವರನ್ನು ಗುರುತಿಸಿ ಬೀದಿಗಳಲ್ಲಿ ನಿಲ್ಲಿಸಿ ಹೊಡೆದು ಬುದ್ಧಿ ಹೇಳಬೇಕು. ಇಲ್ಲದಿದ್ದರೆ ನಾವು ಕೆಂಪೇಗೌಡರ ಅನುಯಾಯಿಗಳು/ವಂಶಸ್ಥರು ಎಂದು ಹೇಳುವುದರಲ್ಲಿ ಅರ್ಥವೇ ಇಲ್ಲ.
ಆಂತರಿಕ ಶಕ್ತಿ ಪ್ರದರ್ಶನ: ಹೊರಗಿನ ಸಮಾಜದಲ್ಲಿ ನಾವು ನ್ಯಾಯವನ್ನು ಕೇಳಲು ಹೋದಾಗ ಒಡೆಯಲು/ಬಡಿಯಲು ಆಗುವುದಿಲ್ಲ, ಏಕೆಂದರೆ ಅಲ್ಲಿ ಜಾತಿ, ಧರ್ಮ ಎಲ್ಲವೂ ಬರುತ್ತದೆ ಮತ್ತು ಕಾನೂನಿನ ರೀತಿಯಾಗಿ ಕ್ರಮವಿಗೊಳ್ಳಲೇಬೇಕು. ಇಂಥ ಸಂದರ್ಭಗಳಲ್ಲಿ, ಕೆಲವರು ತಮ್ಮ ಹಣಬಲದಿಂದ ಹೇಗೆ ನಮ್ಮ ಸಮುದಾಯಕ್ಕೆ ಸೇರಿದ ಸಾತ್ವಿಮಣೆಯ ದಾನದಿಂದ ಬಂದ ಜಮೀನನ್ನು ಲಪಟಾಯಿಸಿದರು, ಅದೇ ರೀತಿ ನ್ಯಾಯವನ್ನು ಕೂಡ ಲಪಟಾಯಿಸುತ್ತಾರೆ.
ಸಮುದಾಯದ ಗೌರವ ರಕ್ಷಣೆ: ಆದ್ದರಿಂದ, ನಮ್ಮ ಸಮುದಾಯದ ಆಂತರಿಕ ವಿಷಯಗಳಲ್ಲಿ ಒಂದಿಷ್ಟು ಕೆಂಪೇಗೌಡರ ಪಾಳೆಗಾರರ ಮೂಲ ಶಕ್ತಿಯನ್ನು ಹೊರ ತಂದು, ತಪ್ಪು ಮಾಡಿದ ಸಮುದಾಯಿಕ ವಿಚಾರದಲ್ಲಿ ತಪ್ಪು ಮಾಡಿದ ಕೆಲವರನ್ನು ಬೀದಿಗಳಲ್ಲಿ ಎಳೆದು 4 ಹೊಡೆದು ಬುದ್ಧಿ ಕಲಿಸಿ ಒಕ್ಕಲಿಗರ ಕೀರ್ತಿ ಮತ್ತು ಪ್ರತಿಷ್ಠೆಯ ಬಗ್ಗೆ ಅರಿವು ತರಬೇಕು.
ಸಂಘಟನೆ ಮತ್ತು ಪ್ರೋತ್ಸಾಹ: ಮೂಲವಕ್ಕಲುತನವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮತ್ತು ಮುಂದಿನ ಪೀಳಿಗೆಗೆ ಭರವಸೆ ನೀಡುವ ನಿಟ್ಟಿನಲ್ಲಿ ನಾವು ಸಂಘಟನಾಶೀಲರಾಗಬೇಕು.
ಈ ವಿಚಾರಗಳನ್ನು ಮಾತನಾಡುವ ಶಕ್ತಿ, ಪ್ರಸಕ್ತ ರಾಜ್ಯದಲ್ಲಿರುವ ಯಾವುದೇ ಪಕ್ಷದ, ಯಾವುದೇ ಒಕ್ಕಲಿಗನ ನಾಯಕನು ಎಂದು ಹೇಳಿಕೊಳ್ಳುವ ರಾಜಕಾರಣಿಗಳಿಗೆ ಸಾಧ್ಯವಿಲ್ಲ ಎಂಬುದನ್ನು ಮರೆಯದಿರಿ. ದಯಮಾಡಿ ಹಿನ್ನಾದರೂ ವ್ಯಕ್ತಿನಿಷ್ಠೆಯನ್ನು ಬಿಟ್ಟುಬಿಡಿ, ಸಮುದಾಯಿಕ ಐಕ್ಯತೆ ಮತ್ತು ಸಮಾಜದ ಒಳಿತಿನ ನಿಷ್ಠೆಯನ್ನು ಬೆಳೆಸಿಕೊಳ್ಳಿ.
