"ಒಕ್ಕಲಿಗಾ, ಎದ್ದೇಳು! ನಿನ್ನ ಮನೆಯ ಹಂಚು ಕಿತ್ತು ಮಾರಿಕೊಳ್ಳುತ್ತಿದ್ದರೂ ನಿನಗೆ ಇನ್ನು ಎಚ್ಚರವಿಲ್ಲವೇ?!"

ನೆನಪಿರಲಿ, ನಿಮ್ಮ ತಾಯಿಯ ಸ್ವರೂಪವಾದ ಸಮುದಾಯವನ್ನು ಮರೆತು, ಜಾತಿಯ ಬಗ್ಗೆ ಕೀಳರಿಮೆ ಬೆಳೆಸಿಕೊಂಡರೆ ನೀವು ಭಾರತಾಂಬೆಯ ಮಕ್ಕಳಾಗಿರಲು ಲಾಯಕ್ಕಿಲ್ಲ. ಸ್ವಂತ ಮನೆಯನ್ನೇ ಗೌರವಿಸದವನು, ದೇಶವನ್ನೇನು ಉದ್ದಾರ ಮಾಡುತ್ತಾನೆ? ಅಂತಸ್ತು, ಅಧಿಕಾರ ಬಂದಾಗ ಸಮುದಾಯವನ್ನು ಮರೆತು, ಕಷ್ಟ ಬಂದಾಗ ಮಾತ್ರ ಜಾತಿಯ ಹೆಸರು ಹೇಳಿಕೊಂಡು ಬರುವಂತಹ 'ದತ್ತು ಪುತ್ರ'ರ ಅವಶ್ಯಕತೆ ಈ ಸಮಾಜಕ್ಕಿಲ್ಲ.

VOKKALIGA COMMUNITY DEVELOPMENT AND UNITY FORMATION IN ACTION

Sri AGS

1/29/20261 min read

"ಒಕ್ಕಲಿಗಾ, ಎದ್ದೇಳು! ನಿನ್ನ ಮನೆಯ ಹಂಚು ಕಿತ್ತು ಮಾರಿಕೊಳ್ಳುತ್ತಿದ್ದರೂ ನಿನಗೆ ಇನ್ನು ಎಚ್ಚರವಿಲ್ಲವೇ?!"

(ಒಂದು ರಣಕಹಳೆ - ಸಮುದಾಯದ ಉಳಿವಿಗಾಗಿ)

ಪೀಠಿಕೆ: ಇದು ಮೌನ ಮುರಿಯುವ ಸಮಯ!

1906ನೇ ಇಸವಿಯಲ್ಲಿ ರಾಜ್ಯ ಒಕ್ಕಲಿಗರ ಸಂಘ ಸ್ಥಾಪನೆಯಾದಾಗ, ಕೆ.ಹೆಚ್. ರಾಮಯ್ಯನವರು ಮತ್ತು ಅವರ ಸಮಕಾಲೀನ ಹಿರಿಯರು ಹಾಕಿದ ಭದ್ರ ಬುನಾದಿ ಇಂದೇನಾಗಿದೆ? ಅಂದು ಅವರು ಸಮಾಜ ಸೇವೆಗೆ ಕಂಕಣತೊಟ್ಟು, ತಮ್ಮ ರಕ್ತವನ್ನೇ ಬೆವ್ರಾಗಿಸಿ ಈ ಸಂಸ್ಥೆಯನ್ನು ಕಟ್ಟಿದರು. ಆದರೆ ಇಂದು? ಅನ್ನ ಬೆಳೆಯುವ ಒಕ್ಕಲಿಗನಿಗೆ ನ್ಯಾಯ ಸಿಗದಿರುವುದು ಒಂದೆಡೆಯಾದರೆ, ಕೆಲವರು "ನಾನು ಒಕ್ಕಲಿಗ" ಎಂದು ಹೇಳಿಕೊಳ್ಳಲು ಹಿಂಜರಿಯುವಂತಹ ಹೀನಾಯ ಸ್ಥಿತಿಗೆ ಬಂದು ತಲುಪಿದ್ದಾರೆ. ಕಾರಣ ಸ್ಪಷ್ಟ - ನಮ್ಮನ್ನಾಳುವ ನಾಯಕರ ಭ್ರಷ್ಟತನ ಮತ್ತು ಸಮುದಾಯದ ನಿರ್ಲಕ್ಷ್ಯ!

ನೆನಪಿರಲಿ, ನಿಮ್ಮ ತಾಯಿಯ ಸ್ವರೂಪವಾದ ಸಮುದಾಯವನ್ನು ಮರೆತು, ಜಾತಿಯ ಬಗ್ಗೆ ಕೀಳರಿಮೆ ಬೆಳೆಸಿಕೊಂಡರೆ ನೀವು ಭಾರತಾಂಬೆಯ ಮಕ್ಕಳಾಗಿರಲು ಲಾಯಕ್ಕಿಲ್ಲ. ಸ್ವಂತ ಮನೆಯನ್ನೇ ಗೌರವಿಸದವನು, ದೇಶವನ್ನೇನು ಉದ್ದಾರ ಮಾಡುತ್ತಾನೆ? ಅಂತಸ್ತು, ಅಧಿಕಾರ ಬಂದಾಗ ಸಮುದಾಯವನ್ನು ಮರೆತು, ಕಷ್ಟ ಬಂದಾಗ ಮಾತ್ರ ಜಾತಿಯ ಹೆಸರು ಹೇಳಿಕೊಂಡು ಬರುವಂತಹ 'ದತ್ತು ಪುತ್ರ'ರ ಅವಶ್ಯಕತೆ ಈ ಸಮಾಜಕ್ಕಿಲ್ಲ.

ಸಂಜೇಪಾಳ್ಯದ 15,000 ಕೋಟಿ ಲೂಟಿ: ಇದು ಆಸ್ತಿಯಲ್ಲ, ನಮ್ಮ ಪೂರ್ವಜರ ರಕ್ತ!

ಸಮುದಾಯದ ಬಾಂಧವರೇ, ಕಣ್ಣು ತೆರೆಯಿರಿ! ಸಂಜೇಪಾಳ್ಯದಲ್ಲಿರುವ ನಮ್ಮ ಸಂಘಕ್ಕೆ ಸೇರಿದ ಆಸ್ತಿಯ ಮೌಲ್ಯ ಬರೋಬ್ಬರಿ 15,000 ಕೋಟಿಗೂ ಅಧಿಕ! ಪುಟ್ಟಸ್ವಾಮಿಯವರು ಎಕ್ಸಿಕ್ಯೂಟರ್ (Executor) ಆಗಿದ್ದಾಗ ಈ ಆಸ್ತಿಯನ್ನು ದೇವರಂತೆ ಕಾಪಾಡಿದ್ದರು. ಆದರೆ ಇಂದು ಏನಾಗುತ್ತಿದೆ? ಸಂಘದ ನಿರ್ದೇಶಕರ ಕುರ್ಚಿ ಮೇಲೆ ಕುಳಿತಿರುವ ಕೆಲವು "ಕುಲದ್ರೋಹಿಗಳು" ನಕಲಿ ವಿಲ್ (Fake Will) ಗಳನ್ನು ಸೃಷ್ಟಿಸಿ, ಟೆನನ್ಸಿ ಆಕ್ಟ್ (Tenancy Act) ನಿಯಮಗಳನ್ನು ಗಾಳಿಗೆ ತೂರಿ, ಅಕ್ರಮ ದಾಖಲೆಗಳನ್ನು ತಿದ್ದಿ, ನಮ್ಮ ಸಮುದಾಯದ ಆಸ್ತಿಯನ್ನು ತಮ್ಮ ಅಪ್ಪನ ಮನೆ ಆಸ್ತಿಯಂತೆ ಹಂಚಿಕೊಳ್ಳುತ್ತಿದ್ದಾರೆ.

ವಿಶೇಷವಾಗಿ, ರಂಗಮ್ಮ ಕೃಷ್ಣಪ್ಪ ಟ್ರಸ್ಟ್ ಮತ್ತು ಪ್ರಸ್ತುತ ಅದರ ಜವಾಬ್ದಾರಿ ಹೊತ್ತಿರುವ, ನಮ್ಮದೇ ಸಂಘದ ನಿರ್ದೇಶಕರೂ ಆಗಿರುವ ಪ್ರಸಕ್ತ ಸಂಘದಲ್ಲಿನ ಎಲ್ಲಾ ಜವಾಬ್ದಾರಿಯುತರೇ, ತಮ್ಮಾಜಿಯವರೇ, ನೀವೇ ಸ್ವಘೋಷಿತ ನ್ಯಾಯಾಧೀಶರಂತೆ ವರ್ತಿಸಲು ನಿಮಗೆ ಅಧಿಕಾರ ಕೊಟ್ಟವರು ಯಾರು? 96.35 ಎಕರೆ ಜಮೀನನ್ನು ಗುಳುಂ ಮಾಡಲು ಸ್ಕೆಚ್ ಹಾಕಿದ್ದೀರಾ? ಭಾರತದ ಕಾನೂನಿನ ಪ್ರಕಾರ ಪರಭಾರೆ ಮಾಡಲು ಸಾಧ್ಯವಿಲ್ಲದ ಜಮೀನಿನ ಮೇಲೆ ಕಣ್ಣು ಹಾಕಿ, ಭ್ರಷ್ಟ ಅಧಿಕಾರಿಗಳ ಜೊತೆ ಸೇರಿ, ಎಂಜಲು ಕಾಸಿಗೆ ಕೈಯೊಡ್ಡಿ ನೀವು ನಡೆಸುತ್ತಿರುವ ಈ ನಾಟಕಕ್ಕೆ ಅಂದು ಆಸ್ತಿ ನೀಡಿದ ಸಾಧ್ವಿ ರಂಗಮ್ಮನವರ ಶಾಪ ತಟ್ಟದೇ ಬಿಡದು! ಆ ತಾಯಿ ಚಾಮುಂಡಿ ನಿಮ್ಮ ಮತ್ತು ನಿಮ್ಮ ಕುಟುಂಬದ ನೆಮ್ಮದಿಯನ್ನು ಕಸಿದುಕೊಳ್ಳುವುದು ಖಂಡಿತ.

ಮಠಾಧಿಪತಿಗಳ ಮೌನಕ್ಕೆ ಧಿಕ್ಕಾರವಿರಲಿ!

ಒಂದು ಕಾಲದಲ್ಲಿ ಭೈರವೈಕ್ಯ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಘರ್ಜನೆಗೆ ಇಡೀ ನಾಡು ನಡುಗುತ್ತಿತ್ತು. ಸಮುದಾಯಕ್ಕೆ ಅನ್ಯಾಯವಾದರೆ ಅವರು ಸಿಂಹದಂತೆ ಮುನ್ನುಗ್ಗುತ್ತಿದ್ದರು. ಆದರೆ ಇಂದು? ಪ್ರಸ್ತುತ ಪೀಠಾಧಿಪತಿಗಳಾದ ನಿರ್ಮಲಾನಂದನಾಥ ಸ್ವಾಮೀಜಿಗಳು ಮೌನಕ್ಕೆ ಶರಣಾಗಿದ್ದೇಕೆ? ಭೈರವನು ನಿಮಗೆ ಧ್ವನಿ ನೀಡಿಲ್ಲವೇ? ಕೇವಲ ತೆರೆಯ ಹಿಂದೆ ಮಾತನಾಡುವುದರಿಂದ ಯಾವ ಪ್ರಯೋಜನವೂ ಇಲ್ಲ. 15,000 ಕೋಟಿ ಆಸ್ತಿ ಲೂಟಿಯಾಗುತ್ತಿದ್ದರೆ, ಬಡ ಒಕ್ಕಲಿಗರಿಗೆ ಅನ್ಯಾಯವಾಗುತ್ತಿದ್ದರೆ ಪೀಠಾಧಿಪತಿಗಳು ಬೀದಿಗಿಳಿದು ಹೋರಾಡಬೇಕು. ವಿಶ್ವಮಾನವ ಸಂದೇಶದ ಪಾಠ ಆಮೇಲೆ ಮಾಡೋಣ, ಮೊದಲು ನಮ್ಮ ಮನೆ ಉಳಿಸಿಕೊಳ್ಳೋಣ!

ವಕೀಲರ ಶುಲ್ಕದ ಹೆಸರಿನಲ್ಲಿ ಹಗಲು ದರೋಡೆ

ಸಮುದಾಯದ ಅಮಾಯಕ ಜನರೇ, ನಿಮ್ಮ ಸಂಘದ ದುಡ್ಡು ಎಲ್ಲಿ ಹೋಗುತ್ತಿದೆ ಗೊತ್ತೇ? ಕೇವಲ ವಕೀಲರ ಫೀಸ್ (Fees) ನೆಪದಲ್ಲಿ ಸಮುದಾಯದ ಕೋಟ್ಯಾಂತರ ರೂಪಾಯಿ ಪೋಲಾಗುತ್ತಿದೆ. ಎಂಜಲು ಕಾಸಿಗೆ ನಾಲಿಗೆ ಚಾಚುವ ಕೆಲವು ನಿರ್ದೇಶಕರು ಮತ್ತು ಭ್ರಷ್ಟ ಅಧಿಕಾರಿಗಳು ಸೇರಿಕೊಂಡು ನಮ್ಮ ಸಮಾಜದ ಸಮಾಧಿ ಕಟ್ಟುತ್ತಿದ್ದಾರೆ. ಇಂತಹ ಅಯೋಗ್ಯರಿಗೆ ಇನ್ನೂ ಕರುಣೆ ತೋರಿಸಬೇಕೆ? ಇವರನ್ನು ಸಮಾಜದಿಂದಲೇ ಬಹಿಷ್ಕರಿಸಬೇಡವೇ?

ಪರಿಹಾರ ಒಂದೇ - ಕ್ರಾಂತಿಯಾಗಬೇಕು!

ಇನ್ನೂ ಕಾಲ ಮಿಂಚಿಲ್ಲ, ಸಮುದಾಯದ ಬುದ್ಧಿವಂತರು, ವಕೀಲರು ಮತ್ತು ಯುವಕರು ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲೇಬೇಕಿದೆ:

  1. ಸಂಘಟನೆ ಒಡೆಯುವುದನ್ನು ನಿಲ್ಲಿಸಿ: ತಾಲೂಕು, ಜಿಲ್ಲೆ ಎಂದು ಸಣ್ಣ ಪುಟ್ಟ ಸಂಘಗಳನ್ನು ಕಟ್ಟಿ ನಮ್ಮ ಶಕ್ತಿಯನ್ನು ಕುಂದಿಸಬೇಡಿ. ನಾವೆಲ್ಲರೂ "ರಾಜ್ಯ ಒಕ್ಕಲಿಗರ ಸಂಘ"ದ ಅಡಿಯಲ್ಲಿ ಒಂದಾಗಬೇಕು.

  2. ರಾಜಕೀಯ ಗುಲಾಮಗಿರಿ ಬೇಡ: ಸಂಘದ ನಿರ್ದೇಶಕರಾದವರು ತಮ್ಮ ಅವಧಿ ಮುಗಿಯುವವರೆಗೆ ಯಾವುದೇ ರಾಜಕೀಯ ಪಕ್ಷದ ಏಜೆಂಟರಂತೆ ಕೆಲಸ ಮಾಡಬಾರದು. ಬೇಕಿದ್ದರೆ ಸಂಘದ ನಿರ್ದೇಶಕರಿಗೆ ಗೌರವಯುತ ಸಂಬಳ ನಿಗದಿ ಮಾಡೋಣ, ಆದರೆ ಅವರ ನಿಷ್ಠೆ ಮಾತ್ರ 100% ಒಕ್ಕಲಿಗ ಸಮುದಾಯಕ್ಕೆ ಸೀಮಿತವಾಗಿರಲಿ.

  3. ಕಾನೂನು ಹೋರಾಟಕ್ಕೆ ಕರೆ: ನಮ್ಮ ಸಮುದಾಯದಲ್ಲಿರುವ ಸಜ್ಜನ, ಕೆಂಪೇಗೌಡರ ಗುಣವಿರುವ ಪ್ರಾಮಾಣಿಕ ವಕೀಲರುಗಳೇ, ದಯಮಾಡಿ ಮುಂದೆ ಬನ್ನಿ. ಈ ಭ್ರಷ್ಟರ ವಿರುದ್ಧ ಹೋರಾಡಿ, ಸುಳ್ಳು ದಾಖಲೆ ಸೃಷ್ಟಿಸಿರುವವರನ್ನು ಜೈಲಿಗೆ ಕಳುಹಿಸಿ, ನಮ್ಮ ಆಸ್ತಿಯನ್ನು ಉಳಿಸಿಕೊಡಿ.

ಅಂತಿಮ ಎಚ್ಚರಿಕೆ:

ನೀತಿ ಇಲ್ಲದ ಬಾಳು, ಜಾತಿ ಅಭಿಮಾನವಿಲ್ಲದ ಬದುಕು ಶವಕ್ಕೆ ಸಮಾನ. ಒಕ್ಕಲಿಗ ಸಂಪ್ರದಾಯದಲ್ಲಿ ವ್ಯಕ್ತಿಗಿಂತ ಸಮುದಾಯವೇ ದೊಡ್ಡದು. ಯಾರೂ ಶಾಶ್ವತವಲ್ಲ, ಎಲ್ಲರೂ ಇಲ್ಲಿ ಕರ್ಮಯೋಗಿಗಳಷ್ಟೇ. ಇಂದು ನೀವು ಸುಮ್ಮನಿದ್ದರೆ, ನಾಳೆ ನಿಮ್ಮ ಮಕ್ಕಳಿಗೆ ಉಳಿಯುವುದು ಕೇವಲ ಶೂನ್ಯ ಮತ್ತು ಅವಮಾನ.

ಈ ಕೂಡಲೇ ಎಚ್ಚೆತ್ತುಕೊಳ್ಳಿ, ಲೂಟಿಕೋರರನ್ನು ಒದ್ದೋಡಿಸಿ, ಒಕ್ಕಲಿಗರ ಸಂಘವನ್ನು ಮತ್ತೆ ಬಲಿಷ್ಠಗೊಳಿಸಿ.

ಇದು ಮನವಿಯಲ್ಲ, ಒಕ್ಕಲಿಗಾ.. ಇದು ನಿನ್ನ ಉಳಿವಿಗಾಗಿ ನೀಡುತ್ತಿರುವ ಎಚ್ಚರಿಕೆ!

- ಶ್ರೀ ಅಂತರಗಂಗಾಧರನಾಥ ಸ್ವಾಮೀಜಿ