ಇತಿಹಾಸ ಮತ್ತು ಒಳಪಂಗಡಗಳ ಅರಿವು ಇದರಿಂದ ಮಾತ್ರ ಭವಿಷ್ಯದ ಯುವ ಪೀಳಿಗೆಗೆ ಒಳಿತು
ತಾವೆಲ್ಲರೂ ಇಷ್ಟು ದಿನ ಮನೋ ಸಂಕಲ್ಪಿತ ಸದ್ಭಾವನೆಯಲ್ಲಿ ಈ ತಂತ್ರಜ್ಞಾನದ ವೇದಿಕೆಯ ಮೇಲೆ ನಮ್ಮೊಂದಿಗೆ ಬಹಳ ಒಡಂಬಡಿಕೆಯನ್ನು ನಡೆಸಿ ನಮಗೂ ಇಂತಹ ಶ್ರೇಷ್ಠವಾದಂತಹ ಕಾರ್ಯ ಚಟುವಟಿಕೆ ಮಾಡಲು ಶಕ್ತಿ ತುಂಬಿದ್ದೀರಿ, ಇನ್ನು ಮುಂದೆ ನಾವು ಹೀಗೆ ಮಾತಿನಲ್ಲಿ ಮತ್ತು ಕನಿಷ್ಠ ಅವಧಿಗೆ ತಲುಪಿ ಪ್ರಯೋಜನಕಾರಿಯಾಗಿ ಸಾಗಲು ಸಾಧ್ಯವಿಲ್ಲ ಆದ್ದರಿಂದ ಭೂಮಂಡಲದ ಮೇಲಿನ ಎಲ್ಲಾ ನಮ್ಮ ಒಕ್ಕಲಿನ ಕುಲಬಾಂಧವರ ಸೇವಕರಾಗುವ ಸದಾವಕಾಶದ ವೇದಿಕೆ ನಡೆಸುತ್ತಿದ್ದೇವೆ.
VOKKALIGA COMMUNITY DEVELOPMENT AND UNITY FORMATION IN ACTION
SRI ANTHARAGANGADHARANATHA SWAMIJI
10/18/20241 min read

ಒಕ್ಕಲಿಗರ ಅಭಿವೃದ್ಧಿ ನಿಗಮ ಪ್ರತಿಷ್ಠಾನ ಇಲ್ಲಿಯವರೆಗೂ ಹಾಗೂ ಮುಂದೆಯೂ ಆತ್ಮಪೂರ್ವಕವಾಗಿ ಪ್ರಮಾಣಿಕರಿಸಿ ಹೇಳುವುದೇನೆಂದರೆ, ನಾವು ಮನಸ ವಾಚ ಕಾಯ ನಿಷ್ಠೆಯಿಂದ ಸಮುದಾಯದ ಋಣದಲ್ಲಿ ಇರುತ್ತೇವೆ ಹಾಗೂ ಇಲ್ಲಿಯವರೆಗೆ ನಮ್ಮ ಪೂರ್ವಜರು ನಮಗೆ ಉಳಿಸಿಕೊಟ್ಟಂತಹ ಬೆಲೆಕಟ್ಟಲಾಗದಂತಹ ಕೀರ್ತಿ ಪ್ರತಿಷ್ಠೆಯ ಸಾಂಪ್ರದಾಯಿಕ ಒಕ್ಕಲುತನದ ಶಕ್ತಿಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ, ಹಾಗೂ ನಮ್ಮನ್ನು ರಾಜಕೀಯದಿಂದ ವಿಭಜಿಸಲು ಪ್ರಯತ್ನಿಸುವ ಷಡ್ಯಂತ್ರಗಳನ್ನು ಬೇಧಿಸಿ ನಮ್ಮೆಲ್ಲ ಒಳಪಂಗಡಗಳ ಐಕ್ಯತೆಯನ್ನು ಬಲಿಷ್ಠ ಗೊಳಿಸುವ ಕಾರ್ಯ ಚಟುವಟಿಕೆ ಮತ್ತು ಇಲ್ಲಿಯವರೆಗೂ ಯಾರು ಸಹ ಒಕ್ಕಲುತನದಲ್ಲಿ ಬದುಕುತ್ತಿರುವ ಶಕ್ತಿಯುತ ಹಾಗೂ ಸಮಾಜದಲ್ಲಿ ಮತ್ತು ಸರ್ಕಾರದಲ್ಲಿ ಕಡೆಗಣಿಸಲ್ಪಟ್ಟಿರುವ ಒಕ್ಕಲು ಯುವಕರ ಭವಿಷ್ಯದ ನಿಟ್ಟಿನಲ್ಲಿ ಒಂದು ಸದೃಢ ಚೌಕಟ್ಟನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಮತ್ತು ನಮ್ಮ ಸಮುದಾಯದ ಅನೇಕ ಶಕ್ತಿಶಾಲಿ ಭೈರವಾನುಗ್ರಹಿತ ಸದೃಢ ಕುಲಬಾಂಧವರ ಸಹಕಾರದಿಂದ ಮತ್ತು ಸದಾ ಭವಿಷ್ಯದ ಒಕ್ಕಲುತನ ಉಳಿಯಲೆಂದು ಆಶಿಸುವ ಸಂಕಲ್ಪಿತ ವರ್ಗದ ಕ್ರಿಯಾಕರ್ಮಗಳಿಂದ, ಅತಿ ಶೀಘ್ರದಲ್ಲಿ ಸಹಕಾರದಿಂದ ಮತ್ತು ಸದಾ ಭವಿಷ್ಯದ ಒಕ್ಕಲುತನ ಉಳಿಯಲೆಂದು ಆಶಿಸುವ ಸಂಕಲ್ಪಿತ ವರ್ಗದ ಕ್ರಿಯಾಕರ್ಮಗಳಿಂದ, ಅತಿ ಶೀಘ್ರದಲ್ಲಿ ರಾಜ್ಯಾದ್ಯಂತ ಪ್ರಥಮ ಹಂತವಾಗಿ ಜಿಲ್ಲಾವಾರು ಸಮಿತಿಗಳನ್ನು ರಚಿಸುವ ಹಾಗೂ ಅವುಗಳಿಗೆ ಮಠದ ಸತ್ಸಂಗ ವ್ಯವಸ್ಥೆ ಮತ್ತು ನಮ್ಮ ಮಠಗಳಿಂದ ನಡೆಯುತ್ತಿರುವ ವಿದ್ಯಾ ಭವಿಷ್ಯತ್ ಕಾರ್ಯ ಚಟುವಟಿಕೆಗಳ ಸಂಪರ್ಕ ಕಲ್ಪಿಸಿ, ರಾಜಕೀಯ ರಹಿತ ಹಾಗೂ ಬಾಹ್ಯ ಸಮುದಾಯವಲ್ಲದ ಹೊರಗಿನ ರಾಜಕೀಯ ಭೇದನೆಯ ಜ್ಞಾನಯುಕ್ತ ಮತ್ತು ಕ್ರಿಯಾಯುಕ್ತ ಪರ್ಯಾವರಣವನ್ನು ಮಾಡುತ್ತಿದ್ದೇವೆ.
ತಾವೆಲ್ಲರೂ ಇಷ್ಟು ದಿನ ಮನೋ ಸಂಕಲ್ಪಿತ ಸದ್ಭಾವನೆಯಲ್ಲಿ ಈ ತಂತ್ರಜ್ಞಾನದ ವೇದಿಕೆಯ ಮೇಲೆ ನಮ್ಮೊಂದಿಗೆ ಬಹಳ ಒಡಂಬಡಿಕೆಯನ್ನು ನಡೆಸಿ ನಮಗೂ ಇಂತಹ ಶ್ರೇಷ್ಠವಾದಂತಹ ಕಾರ್ಯ ಚಟುವಟಿಕೆ ಮಾಡಲು ಶಕ್ತಿ ತುಂಬಿದ್ದೀರಿ, ಇನ್ನು ಮುಂದೆ ನಾವು ಹೀಗೆ ಮಾತಿನಲ್ಲಿ ಮತ್ತು ಕನಿಷ್ಠ ಅವಧಿಗೆ ತಲುಪಿ ಪ್ರಯೋಜನಕಾರಿಯಾಗಿ ಸಾಗಲು ಸಾಧ್ಯವಿಲ್ಲ ಆದ್ದರಿಂದ ಭೂಮಂಡಲದ ಮೇಲಿನ ಎಲ್ಲಾ ನಮ್ಮ ಒಕ್ಕಲಿನ ಕುಲಬಾಂಧವರ ಸೇವಕರಾಗುವ ಸದಾವಕಾಶದ ವೇದಿಕೆ ನಡೆಸುತ್ತಿದ್ದೇವೆ.
ಒಳಪಂಗಡಗಳ ಐಕ್ಯತೆ ಮತ್ತು ನಮ್ಮೆಲ್ಲರ ಇತಿಹಾಸ ಮತ್ತು ಒಳಪಂಗಡಗಳ ಅರಿವು ಮತ್ತು ಅವುಗಳ ಐಕ್ಯತೆಯಿಂದ ಮುಂದಿನ ಯುವ ಪೀಳಿಗೆಗೆ ಆಗುವ ಪ್ರಯೋಜನಗಳನ್ನು ನಾವು ತಿಳಿಯಲೇಬೇಕು.
ಜೈ ಶ್ರೀ ಗುರುದೇವ