ಎಚ್ಚೆತ್ತುಕೊಳ್ಳಿ ಒಕ್ಕಲಿಗರೆ! ಇದು ನಮ್ಮ ಅಸ್ತಿತ್ವದ ಪ್ರಶ್ನೆ!

ಸಮಯ ಮೀರುವ ಮುನ್ನ ಸತ್ಯವನ್ನು ಅರಿಯೋಣ! ನಮ್ಮ ಪೂರ್ವಜರು ನಮಗಾಗಿ ಬಿಟ್ಟುಹೋದ ಆಸ್ತಿ ಮತ್ತು ಪರಂಪರೆಯನ್ನು ಉಳಿಸಿಕೊಳ್ಳಲು ನಾವು ಇಂದು ಹೋರಾಡದಿದ್ದರೆ, ನಾಳೆ ನಮ್ಮ ಮುಂದಿನ ಪೀಳಿಗೆಗೆ ಉತ್ತರಿಸಲಾಗದ ಅಪರಾಧಿಗಳಾಗುತ್ತೇವೆ. ವೇದಿಕೆಯ ಮೇಲಿನ ಸನ್ಮಾನಗಳಿಗಿಂತ, ಸಮುದಾಯದ ಭೂಮಿ ಮತ್ತು ಹಿತಾಸಕ್ತಿಯೇ ನಮಗೆ ಮುಖ್ಯವಾಗಬೇಕು. ಈ ಕೆಳಗಿನ ಪ್ರತಿಯೊಂದು ಸಾಲು ನಿಮ್ಮ ರಕ್ತವನ್ನು ಕುದಿಸದಿದ್ದರೆ, ನಾವು ಕೆಂಪೇಗೌಡರ ವಂಶಸ್ಥರು ಎಂದು ಕರೆದುಕೊಳ್ಳಲು ಅರ್ಹರಲ್ಲ!

VOKKALIGA COMMUNITY DEVELOPMENT AND UNITY FORMATION IN ACTION

Rohann kumar K (As Said By His Divinity AGS)

1/2/20261 min read

ಎಚ್ಚೆತ್ತುಕೊಳ್ಳಿ ಒಕ್ಕಲಿಗರೆ! ಇದು ನಮ್ಮ ಅಸ್ತಿತ್ವದ ಪ್ರಶ್ನೆ!

ಸಮಯ ಮೀರುವ ಮುನ್ನ ಸತ್ಯವನ್ನು ಅರಿಯೋಣ! ನಮ್ಮ ಪೂರ್ವಜರು ನಮಗಾಗಿ ಬಿಟ್ಟುಹೋದ ಆಸ್ತಿ ಮತ್ತು ಪರಂಪರೆಯನ್ನು ಉಳಿಸಿಕೊಳ್ಳಲು ನಾವು ಇಂದು ಹೋರಾಡದಿದ್ದರೆ, ನಾಳೆ ನಮ್ಮ ಮುಂದಿನ ಪೀಳಿಗೆಗೆ ಉತ್ತರಿಸಲಾಗದ ಅಪರಾಧಿಗಳಾಗುತ್ತೇವೆ. ವೇದಿಕೆಯ ಮೇಲಿನ ಸನ್ಮಾನಗಳಿಗಿಂತ, ಸಮುದಾಯದ ಭೂಮಿ ಮತ್ತು ಹಿತಾಸಕ್ತಿಯೇ ನಮಗೆ ಮುಖ್ಯವಾಗಬೇಕು. ಈ ಕೆಳಗಿನ ಪ್ರತಿಯೊಂದು ಸಾಲು ನಿಮ್ಮ ರಕ್ತವನ್ನು ಕುದಿಸದಿದ್ದರೆ, ನಾವು ಕೆಂಪೇಗೌಡರ ವಂಶಸ್ಥರು ಎಂದು ಕರೆದುಕೊಳ್ಳಲು ಅರ್ಹರಲ್ಲ!

ಅನೇಕರು ಬಹಳ ಬಾರಿ ಮುಂಬಡ್ತಿ ಪಡೆದ ಹಾಗೂ ಸಾಧನೆ ಮಾಡಿದ ಸರ್ಕಾರಿ ಸೇವೆಯಲ್ಲಿನ ಉನ್ನತ ಶ್ರೇಣಿಯಲ್ಲಿರುವ ಅಧಿಕಾರಿಗಳಿಗೆ ಹಾರ ಹಾಕಿ ಶಾಲು ಹಾಕಿ ಗೌರವವನ್ನು ತೋರಿಸಿ ಬರುತ್ತಾರೆ. ಕೆಲವೊಮ್ಮೆ ಸಾಮಾಜಿಕ ಕ್ಷೇತ್ರದಲ್ಲಿ ರಾಜಕೀಯ ವ್ಯವಸ್ಥೆಯ ಅಡಿಯಲ್ಲಿ ಒಳ್ಳೆಯ ಉದ್ದೇಶ ಅಥವಾ ಜವಾಬ್ದಾರಿ ಪಡೆದಾಗಲೂ ಇದೇ ರೀತಿ ಹಾರ ಹಾಕಿ ಶಾಲು ಹಾಕಿ ಗೌರವವನ್ನು ತೋರಿಸಿ ಬರುತ್ತಾರೆ. ಇಲ್ಲಿ ನಾವು ಮನದಲ್ಲಿ ನಮ್ಮನ್ನು ಪ್ರಶ್ನಿಸಿಕೊಳ್ಳಬೇಕಾದ ವಿಚಾರ ಮತ್ತು ವಿಮರ್ಶೆ ಬಹಳ ಮುಖ್ಯ. ಅತಿ ಹೆಚ್ಚು ಸಮಯದಲ್ಲಿ ಒಕ್ಕಲಿಗ ಸಮುದಾಯದ ವ್ಯಾಪ್ತಿಯಲ್ಲಿ ನಡೆಯುವ ಯಾವುದೇ ಸಮುದಾಯಿಕ ಕಾರ್ಯಕ್ರಮವಾಗಲಿ ಅಥವಾ ಸಮುದಾಯದ ಕುಲಬಾಂಧವರು ಮಾಡುವ ಸಾಮಾಜಿಕ ಕಾರ್ಯಕ್ರಮವಾಗಲಿ ಅಂತಹ ವೇದಿಕೆಗಳಲ್ಲಿ ಉನ್ನತ ಅಧಿಕಾರಿಗಳನ್ನು ಹಾಗೂ ರಾಜಕೀಯ ನಾಯಕರನ್ನು ಸಮಾಜದಲ್ಲಿ ಸ್ಥಾನಮಾನಗಳನ್ನು ತೊರೆದು ಸಮುದಾಯಕ್ಕೆ ನೆರಳಾಗಿ ಇರುತ್ತೇವೆ ಎಂದು, ಒಕ್ಕಲಿಗರ ಗುರು ಸ್ಥಾನ ತುಂಬಿರುವ ಪೂಜ್ಯ ಸ್ವಾಮೀಜಿಗಳು ಆಸೀನರಾಗಿರುವ ವೇದಿಕೆಗಳಲ್ಲಿ ಅವರಿಗೆ ಸಮನಾಗಿ ಇಂತಹ ಅಧಿಕಾರಿಗಳಿಗೆ ಮತ್ತು ನಾಯಕರುಗಳಿಗೆ ನಾವು ಆಸನಗಳನ್ನು ನೀಡುತ್ತೇವೆ, ಸ್ಥಾನಮಾನ ಗೌರವಗಳನ್ನು ನೀಡುತ್ತೇವೆ.

ವಿಪರ್ಯಾಸ ಎಂದರೆ ಪ್ರತಿಯೊಬ್ಬ ಸಮುದಾಯದ ವೈಯಕ್ತಿಕ ಸಮಸ್ಯೆಗಳಿಗೆ ಸಮುದಾಯಿಕ ಭಾವನೆಯಲ್ಲಿ ನೂರಕ್ಕೆ ನೂರರಷ್ಟು ನ್ಯಾಯ ದೊರಕಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಇಡೀ ಒಕ್ಕಲಿಗರ ಸಮುದಾಯಕ್ಕೆ ವೈಯಕ್ತಿಕವಲ್ಲದ ಮತ್ತು ಮುಂದಿನ ಪೀಳಿಗೆಗೆ ನೂರಕ್ಕೆ ನೂರರಷ್ಟು ಯಾರಿಂದಲೂ ಸಾಧ್ಯವಾಗದ 10,000 ಕೋಟಿಗೂ ಹೆಚ್ಚು ಬೆಲೆ ಬಾಳುವ ಸಾಧ್ವಿ ರಂಗಮ್ಮನವರು ದಾನವಾಗಿ ನೀಡಿದ್ದ 97 ಎಕರೆ ಭೂಮಿ ತಾಯಿಯನ್ನು ಕಾಪಾಡಿಕೊಂಡು ನಾವು ನಿಜಕ್ಕೂ ಕೆಂಪೇಗೌಡರ ವಂಶಸ್ಥರು, ಇದು ನಮ್ಮ ಕೆಂಪೇಗೌಡರ ನಗರ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ನಮ್ಮೊಂದಿಗೆ ನಿಲ್ಲಬೇಕಿದ್ದ ಯಾವೊಬ್ಬ ಸನ್ಮಾನಿತರು ಈ ವಿಚಾರವಾಗಿ ತಮ್ಮ ನೈತಿಕ ಹೊಣೆಯನ್ನು ಹೊರದಿರುವುದು ನಿಜಕ್ಕೂ ಬೇಸರದ ಸಂಗತಿ.

ನಮ್ಮ ಒಕ್ಕಲಿಗರಲ್ಲಿ ಸ್ವಾಭಿಮಾನವುಳ್ಳ ಮತ್ತು ಜ್ಞಾನವುಳ್ಳ ಹಾಗೂ ತಮ್ಮ ಭೂಮಿ ತಾಯಿಯನ್ನು ತಾಯಿಯಂತೆ ರಕ್ಷಿಸಿಕೊಳ್ಳಲು ಇಚ್ಛಾಶಕ್ತಿಯುಳ್ಳ ಹಣವಂತನೇ ಇರಲಿ ಬಡವನಾಗಿರಲಿ, ಕೇವಲ ಆರ್ಥಿಕತೆಗೆ ಸೀಮಿತವಾಗದೆ ಗುಣ ಮತ್ತು ಸಂಪ್ರದಾಯದಲ್ಲಿ ಶ್ರೇಷ್ಠತೆಯುಳ್ಳ ಪ್ರತಿಯೊಬ್ಬ ಒಕ್ಕಲಿಗನು ನಾಡಪ್ರಭು ಶ್ರೀ ಕೆಂಪೇಗೌಡರ ನಿಜವಾದ ರಕ್ತ ಹಾಗೂ ನಮ್ಮ ಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿಯವರ ನಿಜವಾದ ಉತ್ತರಾಧಿಕಾರಿ... ದಯಮಾಡಿ ಇಂತಹ ವಿಮರ್ಶೆಯನ್ನು ನಾಡಿನಾದ್ಯಂತ ಇರುವ ಒಕ್ಕಲಿಗರೊಂದಿಗೆ ಹಂಚಿಕೊಳ್ಳಿ.

ಮಹಾಭಾರತದ ಉತ್ತರ ಕುಮಾರನಂತೆ ಪ್ರತಿಯೊಂದು ಮನೆಗೆ ಅಥವಾ ಅವರ ವಂಶಕ್ಕೆ ತಮ್ಮ ತಂದೆ-ತಾಯಿಯ ಶಕ್ತಿ ಎಷ್ಟೇ ಇರಲಿ, ಒಬ್ಬ ಉತ್ತರ ಕುಮಾರನಂತೆ ಹುಟ್ಟೇ ಇರುತ್ತಾನೆ. ಅಂಥವರನ್ನು ಮರೆತುಬಿಡಿ. ಬಲಿಷ್ಠ ಸಮುದಾಯದ ಉತ್ತರಾಧಿಕಾರಿಗಳನ್ನು ಈ ವಿಚಾರ ವಿಮರ್ಶೆಗೆ ತಲುಪುವಂತೆ ಮಾಡಿ. ನಂತರ ತಿಳಿಯುತ್ತದೆ ಸಮುದಾಯ ವೇದಿಕೆಗಳಲ್ಲಿ ಮತ್ತು ಸಮುದಾಯದ ಅನೇಕ ನಾಯಕರ ಬೆವರ ಹನಿಯ ದಾನ ಧರ್ಮದ ಮತ್ತು ತಮ್ಮ ಸ್ವಂತಿಕೆಯ ಕರ್ಮದ ಹಣದ ವೇದಿಕೆಗಳ ಮೇಲೆ ಆಹ್ವಾನಿತರು ಮತ್ತು ಗೌರವಕ್ಕೆ ಅರ್ಹರು ಯಾರು ಎಂದು.

ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕ ಜನಗಣತಿ, ಜಾತಿಗಣತಿ ಮತ್ತು ಉದ್ಯೋಗದಲ್ಲೂ ಸಹ ಯಾರು ಒಳ್ಳೆಯವರು ಅತಿ ಹೆಚ್ಚು ಯೋಗ್ಯರು ಎಂದು ತುಲನೆ ಮಾಡುತ್ತಿದ್ದಾರೆ. ಹೀಗಿರುವಾಗ ನಮ್ಮ ಸಮುದಾಯದ ಹೆಚ್ಚಿರುವ ಸಂಖ್ಯೆಯಲ್ಲಿ ನಮ್ಮ ವೇದಿಕೆಗಳ ಮೇಲೆ ಯಾರು ಯೋಗ್ಯರು? ನಮ್ಮ ಸಂಘಗಳಲ್ಲಿ ಯಾರು ಯೋಗ್ಯ ನಿರ್ದೇಶಕರುಗಳು? ನಮ್ಮ ಮಠಗಳಲ್ಲಿ ಯಾರು ಯೋಗ್ಯ ಉತ್ತರಾಧಿಕಾರಿಗಳು? ಎಂಬೆಲ್ಲ ದ್ವಂದ್ವ ಪ್ರಶ್ನೆಗಳಿಗೆ ಮುಂಬರುವ ದಿನಗಳ ಸಮಸ್ಯೆಗಳನ್ನು ಎದುರಿಸಲು, ಕನಿಷ್ಠ ನಮ್ಮ ಮುಂದಿನ ಯುವ ಭವಿಷ್ಯ ಸುಭದ್ರವಾಗಿರಲಿ ಎಂದು ಯೋಚಿಸುವ ನಿಟ್ಟಿನಲ್ಲಾದರೂ ಇಂದಿನಿಂದ ನಾವು ಇಂತಹ ವಿಮರ್ಶೆಗಳಿಗೆ ಎಲ್ಲರನ್ನು ತೊಡಗಿಸಬೇಕು. ಕೇವಲ ನೋಡುವುದಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಹಂಚಿಕೊಳ್ಳಬೇಕು ಮತ್ತು ನಮ್ಮ ಒಕ್ಕಲಿಗರ ಈ ಒಂದು ಮಹತ್ತರವಾದ ಹೆಜ್ಜೆಯನ್ನು ಗಮನಿಸಿ ಪ್ರತಿಯೊಂದು ಸಮುದಾಯದ ಪ್ರತಿಯೊಬ್ಬ ಜವಾಬ್ದಾರಿಯುತ ವ್ಯಕ್ತಿಯು ಇದೇ ರೀತಿ ಅವರವರ ಸಮುದಾಯಗಳನ್ನು ತಿದ್ದಿಕೊಂಡರೆ ನಾವೆಲ್ಲರೂ ನಾಡಪ್ರಭು ಶ್ರೀ ಕೆಂಪೇಗೌಡರ ಆಳ್ವಿಕೆಯಂತೆ ಇತಿಹಾಸವನ್ನು ಮತ್ತೊಮ್ಮೆ ಸೃಷ್ಟಿಸುವುದರಲ್ಲಿ ಸಂಶಯವೇ ಇಲ್ಲ.

ಸಮಯ ಎಂದರೆ ಕಾಲಭೈರವನು. ಇರುವ ಸಮಯದಲ್ಲಿ ಇಂತಹ ವಿಮರ್ಶೆಗಳನ್ನು ಮಾಡಿ ಒಳ್ಳೆಯ ಭವಿಷ್ಯವನ್ನು ರೂಪಿಸುವ ಕನಿಷ್ಠ ಪಣತೊಡದಿದ್ದರೆ, ಪ್ರತಿಕ್ಷಣವೂ ಕೊನೆ ಹಂತಕ್ಕೆ ತಲುಪಿದಾಗ "ಇರುವ ಅಯೋಗ್ಯರಲ್ಲಿ ಕನಿಷ್ಠ ಅಯೋಗ್ಯ ಯಾರು?" ಎಂಬ ಆಯ್ಕೆಗೆ ನಿಮ್ಮ ಮುಂದಿನ ಪೀಳಿಗೆಯನ್ನು ಬಲಿ ಕೊಡಬೇಕಾಗುತ್ತದೆ. ಎಚ್ಚರಿಕೆ ಎಚ್ಚರಿಕೆ ಎಚ್ಚರಿಕೆ!

ಇನ್ನಾದರೂ ನಮ್ಮ ಬೆಂಗಳೂರಿನ ಹೃದಯ ಭಾಗದ ಭೂಮಿ ತಾಯಿಯ ಸ್ವರೂಪವಾದ ನಮ್ಮ ಒಕ್ಕಲಿಗರ ಆಸ್ತಿ ಸಜ್ಜೆಪಾಳ್ಯದ ಭೂಮಿಯನ್ನು ಪಡೆಯಲೇಬೇಕು ಎಂಬ ಸಂಕಲ್ಪ ಎಲ್ಲರಲ್ಲೂ ಬರಲಿ ಹಾಗೂ ಇದನ್ನು ಮುಂದುವರೆಸುವುದರಲ್ಲಿ ಸಂಶಯವೇ ಬೇಡ, ಅದನ್ನು ಪಡೆದೇ ಪಡೆಯುತ್ತೇವೆ. ಆದರೆ ಮೇಲೆ ತಿಳಿಸಿರುವ ಎಲ್ಲಾ ವಿಚಾರಗಳನ್ನು ಅರ್ಥ ಮಾಡಿಕೊಂಡು ಸಾಕ್ಷಾತ್ ಭೈರವೇಶ್ವರನು ತಮಗೊಂದು ಧರ್ಮ ಪಥದ ಅವಕಾಶ ನೀಡಿರುವ ಇಂತಹ ಸಮಸ್ಯೆಗೆ ಉತ್ತರಿಸಲು ಮತ್ತು ಸಹಕರಿಸಲು ಯೋಗ್ಯವಿರುವ, ಆರ್ಥಿಕವಾಗಿ ಸುಭದ್ರವಾಗಿರುವ, ಅಧಿಕಾರದಲ್ಲಿ ಉನ್ನತಿಯಲ್ಲಿರುವ ಎಲ್ಲಾ ಕುಲಬಾಂಧವರು ದಯಮಾಡಿ ಈ ಒಂದು ಉದ್ದೇಶಕ್ಕೆ ಸಾಥ್ ನೀಡಬೇಕು. ಇಲ್ಲದಿದ್ದರೆ ಭೈರವನು ಮೆಚ್ಚುವುದಿಲ್ಲ ಹಾಗೂ ಮುಂದಿನ ಯುವಜನತೆಯ ಭವಿಷ್ಯದಲ್ಲಿ ತಮ್ಮ ವಂಶಸ್ಥರ ಮತ್ತು ಕುಟುಂಬಸ್ಥರ ಬೆನ್ನೆಲುಬಾಗಿ ಕುಲಬಾಂಧವ್ಯತೆ ನಿಲ್ಲುತ್ತದೆ ಎಂಬುದು ಸತ್ಯ, ಅದನ್ನು ಅರ್ಥಮಾಡಿಕೊಳ್ಳಬೇಕು.

ಜೈ ಕೆಂಪೇಗೌಡ

ಜೈ ಶ್ರೀ ಗುರುದೇವ