“ಮುಳಬಾಗಿಲು ತಾಲೂಕಿನ ಒಕ್ಕಲಿಗರ ಭವಿಷ್ಯ ಒಕ್ಕಲಿಗರ ಕೈಯಲ್ಲಿಯೇ ಇದೆ”

ಒಕ್ಕಲಿಗರಾಗಿ ಹುಟ್ಟಿದ್ದೇವೆ. ಈ ಮಾತಿನ ಅರ್ಥವನ್ನು ದಯಮಾಡಿ ಬೆಲೆ ಕಟ್ಟಲಾಗದ ಇತಿಹಾಸ ಮತ್ತು ಸಾಂಪ್ರದಾಯಿಕ ಹಿನ್ನೆಲೆಯಿಂದ ವಿಮರ್ಶಿಸಿ ಹಾಗೂ ಪ್ರಭುದ್ಧರಾಗಿ ನಮ್ಮ ಮುಂದಿನ ಯುವ ಪೀಳಿಗೆಯ ಭವಿಷ್ಯಕ್ಕೆ ಸಂಕಲ್ಪದಿಂದ ಐಕ್ಯತೆಯ ಹೆಜ್ಜೆಗೆ ಒಳಪಂಗಡಗಳ ಐಕ್ಯತೆಗೆ ಜೊತೆಗೂಡಿ.

VOKKALIGA COMMUNITY DEVELOPMENT AND UNITY FORMATION IN ACTION

Rohan kumar K Gowdru

3/5/20251 min read

ಪ್ರಸಕ್ತ ವ್ಯಕ್ತಿನಿಷ್ಠೆಯನ್ನು ಮರೆತು ಸಮಾಜದ ಮತ್ತು ಮುಂದಿನ ಭವಿಷ್ಯದ ಒಕ್ಕಲಿಗ ಸಮುದಾಯದ ಯುವ ಪೀಳಿಗೆಯ ವಿಚಾರವಾಗಿ ವೇದಿಕೆಗಳು ಸಜ್ಜುಗೊಳ್ಳಬೇಕು.

ನಮ್ಮ ಮುಳಬಾಗಿಲು ತಾಲೂಕಿನಲ್ಲಿ ಪ್ರಸಕ್ತ ಈ ಹಿಂದೆ ನಡೆದು ಬಂದ ಸಂಘಟನೆಗಳು 35 ವರ್ಷಗಳಿಂದ ಯಾವುದೇ ರೀತಿಯ ಕಡತಗಳನ್ನು ನಿರ್ವಹಣೆ ಮಾಡದೆ ಬೇಜವಾಬ್ದಾರಿತನ ತೋರಿರುವುದಕ್ಕೆ ಹಾಗೂ ನಿಷ್ಕ್ರಿಯಗೊಂಡಿರುವ ಇಂದಿನ ಪರಿಸ್ಥಿತಿಗೆ ಕಾರಣ ಕೇವಲ ಅಂದಿನಿಂದ ಇಂದಿನವರೆಗೆ ನಾವು ಒಕ್ಕಲಿಗರ ಸಂಘ ನಡೆಸುತ್ತಿದ್ದೇವೆ ಎಂದು ತಾಲೂಕಿನ ಜನರನ್ನು ನಂಬಿಸಿದ್ದ ಅಧ್ಯಕ್ಷರು ಮತ್ತು ಮಂಡಳಿಯ ನಿರ್ದೇಶಕರು ಮಾತ್ರವೇ ಅಲ್ಲ. ಬದಲಿಗೆ ನಮ್ಮ ಮಕ್ಕಳಿಗೆ ಮತ್ತು ಅವರ ಸಂಪ್ರದಾಯಿಕ ನಡಾವಳಿಕೆಗೆ ಹುಟ್ಟಿನಿಂದಲೇ ಸಂಪ್ರದಾಯದ ನೆಲೆ ಮತ್ತು ಗೌರವಾನ್ವಿತ ಮತ್ತು ಪ್ರತಿಷ್ಠೆಯುತ ಸಮುದಾಯವನ್ನಾಗಿ ಇಂದು ನಮ್ಮ ಪೂರ್ವಜರು ಬಳುವಳಿಯಾಗಿ ಕೊಟ್ಟ ಒಕ್ಕಲುತನದ ಪ್ರತಿಯೊಬ್ಬ ಒಕ್ಕಲಿಗರು ಇದಕ್ಕೆ ಜವಾಬ್ದಾರಿಯುತರು.

ನಂತರದ ಬೀಜವಾಬ್ದಾರಿತನ ಕೋಲಾರ ಜಿಲ್ಲೆಯ ಸಂಘ ಎಂದು ಹೇಳಿಕೊಂಡು 35 ವರ್ಷಗಳಿಂದ ತಾಲೂಕಿನ ಒಂದು ಸಂಘ ಹೇಗಿದೆ ಹಾಗೂ ಅದಕ್ಕೆ ಏನು ಬೇಕಿದೆ ಎಂಬುದನ್ನು ಒದಿಗಿಟ್ಟು ಕೇವಲ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಎಂಬ ಸೋಗಿನಲ್ಲಿ ಸೋಗಲಾಡಿಗಳಂತೆ ನಯವಂಚನೆ ಮಾಡಿದ ಜಿಲ್ಲಾ ಸಂಘಟನೆಯ ಪ್ರತಿಯೊಬ್ಬ ಜವಾಬ್ದಾರಿಯುತರ ಅಸಮರ್ಥತೆ ಕಾರಣವಾಗಿರುತ್ತದೆ.

ಒಕ್ಕಲಿಗರೇ ಜಾಗೃತರಾಗಿ ಇಂದು ನೀವು ಸಮುದಾಯದ ನಿಲುವನ್ನು ವ್ಯಕ್ತಪಡಿಸಿದರೆ ಅದು ಜಾತಿವಾದ ಎಂಬ ಪಟ್ಟ ಕಟ್ಟುವ ಮಟ್ಟಕ್ಕೆ ಸಮಾಜವನ್ನು ಅನ್ನ ಬೆಳೆಸಿರುವ ಒಕ್ಕಲಿಗರ ವಿರುದ್ಧವೇ ಪ್ರಚೋದಿಸುತ್ತಿರುವ ರಾಜಕೀಯ ಕುನ್ನಿಗಳ ಷಡ್ಯಂತ್ರಗಳಿಗೆ ಈಗಾಗಲೇ ನಾವು ಬಲಿಯಾಗಿದ್ದೇವೆ.

ಪ್ರಸಕ್ತ ಮೀಸಲಾತಿಯ ವಿಚಾರವಾಗಿ ಧ್ವನಿ ಎತ್ತುವ ಧೈರ್ಯ ಏಕೆ ಇಲ್ಲ ಎಂದರೆ

ಈಗಾಗಲೇ ತೋಳಗಳ ಹಿಂಡಿನಂತೆ ಅಮಾಯಕ ಒಕ್ಕಲಿಗರನ್ನು ನಂಬಿಸಿ ನಮ್ಮೊಡನೆ ಸೇರಿಕೊಂಡಿರುವ ಅದೆಷ್ಟೋ ಮಂದಿ ಒಕ್ಕಲಿಗರಲ್ಲೇ ಹುಟ್ಟಿರುವ ರಣಹೇಡಿಗಳಿದ್ದಾರೆ. ಇವರುಗಳು ಒಂದುವೇಳೆ ತಿದ್ದಿಕೊಳ್ಳದ ಪಕ್ಷದಲ್ಲಿ ಇವರಿಗೂ ಪಾಠ ಕಲಿಸುವ ಕಾಲ ಹತ್ತಿರದಲ್ಲೇ ಇದೆ.

ಬಾಡು ತಿನ್ನಲು ಮತ್ತು ಮದುವೆ ಸಮಾರಂಭಗಳಲ್ಲಿ ಮೊದಲಿಗರು ಎಂದು ಮೇಜು ಹತ್ತಲು ಬರುವ ಒಕ್ಕಲಿಗ ನಾಯಕರು ಕನಿಷ್ಠ ಮಾನವೀಯತೆ ಮತ್ತು ಆತ್ಮಸಾಕ್ಷಿಯ ಮಾರ್ಗದಿಂದ ಒಮ್ಮೆ ತಮ್ಮನ್ನು ತಾವು ವಿಮರ್ಶಿಸಿಕೊಳ್ಳಲು ಇಂದು ಸಮಾಜ ಬಯಸುತ್ತದೆ. ಈ ರೀತಿ ಅಪ್ರಯೋಜಕರ ವೈಚಾರಿಕತೆ ಹೀಗೆ ನಡೆದರೆ, ಸಮುದಾಯದ ಹಿತ ದೃಷ್ಟಿಯಿಂದ ಧ್ವನಿಯಎತ್ತಬೇಕು ಹಾಗೂ ಅವಶ್ಯಕ ಚಟುವಟಿಕೆಗಳನ್ನು ನಡೆಸಲು ಸಕ್ರಿಯರಾಗಬೇಕು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ನಾವು ಕೆಂಪೇಗೌಡರ ವಂಶಸ್ಥರು ಎಂದು ಎಲ್ಲೂ ಹೇಳಬಾರದು ಹಾಗೂ ನಿಮ್ಮ ಮುಂದಿನ ಯುವಪೀಳಿಗೆಯ ಭವಿಷ್ಯದ ಹಾದಿಗೆ ನೀವೇ ಮುಳ್ಳಾಗುತ್ತೀರಿ ಎಂಬುದನ್ನು ಎಂದಿಗೂ ಮರೆಯಬಾರದು.

ಸಮರ್ಥರಿಗೆ ಅವಕಾಶ ಕಲ್ಪಿಸುವ ಶಕ್ತಿ ಕೇವಲ ಸ್ವಾಭಿಮಾನಿ ಒಕ್ಕಲಿಗರಿಗೆ ಮಾತ್ರ ಇರುತ್ತದೆ ಎಂಬುದನ್ನು ಎಂದಿಗೂ ಮರಯಬಾರದು. ಹಣಕ್ಕಾಗಿ ಗುಣ ಕಳೆದುಕೊಳ್ಳುವ ಲಜ್ಜೆಗೆಟ್ಟ ಕೆಲವು ಜನರನ್ನು ಮೀರಿ ಶ್ರೇಷ್ಠವಾದಂತಹ ನೈಜ ಸಮರ್ಥವಾದಂತಹ ಸ್ವಾಭಿಮಾನಿ ಮತ್ತು ಸಮಾಜದ ಸಾಮರಸ್ಯ ಮತ್ತು ಸಮಾಜವನ್ನು ಕಟ್ಟುವ ನೈಜ ಗುಣಗಳುಳ್ಳ ಶ್ರೇಷ್ಠವಕ್ಕಲಿಗ ಎಂಬ ನಮ್ಮ ಹಿರಿಯರ ನಂಬಿಕೆಯನ್ನು ಎಂದಿಗೂ ನಾವು ಮರೆಯಬಾರದು.

ಮುಳಬಾಗಿಲು ತಾಲೂಕಿನ ಒಕ್ಕಲಿಗರ ಭವಿಷ್ಯ ಒಕ್ಕಲಿಗರ ಕೈಯಲ್ಲಿಯೇ ಇದೆ ಎಂಬುದನ್ನು ಎಂದಿಗೂ ಮರೆಯಬೇಡಿ. ಮತ್ತೊಮ್ಮೆ ಭ್ರಮೆಯಿಂದ ಮೈಮರೆತು ಜಿಲ್ಲೆಯಿಂದ ಮತ್ತೊಂದು ಬೀಳುವ ಆಲದ ಮರ ಬರುತ್ತದೆ ಅಥವಾ ಸ್ವಾಮೀಜಿಯವರ ಹೆಸರನ್ನು ಹೇಳಿಕೊಂಡು ನಮ್ಮ ನಂಬಿಕೆಯನ್ನು ಕೆಡಿಸುವ ಕೆಲವರು ಕುತಂತ್ರಿಗಳು ಬರುತ್ತಾರೆ ಎಂಬ ಭಾವನೆಗಳಿಂದ ಹೊರಬನ್ನಿ.

ಒಕ್ಕಲಿಗರಾಗಿ ಹುಟ್ಟಿದ್ದೇವೆ. ಈ ಮಾತಿನ ಅರ್ಥವನ್ನು ದಯಮಾಡಿ ಬೆಲೆ ಕಟ್ಟಲಾಗದ ಇತಿಹಾಸ ಮತ್ತು ಸಾಂಪ್ರದಾಯಿಕ ಹಿನ್ನೆಲೆಯಿಂದ ವಿಮರ್ಶಿಸಿ ಹಾಗೂ ಪ್ರಭುದ್ಧರಾಗಿ ನಮ್ಮ ಮುಂದಿನ ಯುವ ಪೀಳಿಗೆಯ ಭವಿಷ್ಯಕ್ಕೆ ಸಂಕಲ್ಪದಿಂದ ಐಕ್ಯತೆಯ ಹೆಜ್ಜೆಗೆ ಒಳಪಂಗಡಗಳ ಐಕ್ಯತೆಗೆ ಜೊತೆಗೂಡಿ.

ಜೈ ಶ್ರೀ ಗುರುದೇವ