ಇನ್ನಾದರೂ ಜಾಗೃತರಾಗಿ! ಎಚ್ಚರಗೊಳ್ಳಿ! ಇಲ್ಲದಿದ್ದರೆ ಒಕ್ಕಲಿಗರಿಗೆ ಉಳಿಗಾಲವಿಲ್ಲ. ಸಮುದಾಯದಿಂದ ನಾಯಕರೇ ಹೊರತು ನಾಯಕರಿಂದ ಸಮುದಾಯ ಅಲ್ಲ...
ಈಗಾಗಲೇ ಭವಿಷ್ಯದ ಸಮುದಾಯದ ವಿಚಾರವಾಗಿ ಪ್ರಜ್ಞಾ ಹೀನರಾಗಿರುವ ಒಕ್ಕಲಿಗ ಸಮಾಜದ ವರ್ತನೆಯಿಂದ, ನಮ್ಮ ಒಕ್ಕಲಿಗರನ್ನು ರಾಜಕೀಯ ಪ್ರೇರಿತರಾಗಿ ಹಾಗೂ ಸಮಾಜದಲ್ಲಿ ಶಕ್ತಿ ಹೀನರನ್ನಾಗಿ ಮಾಡುವ ಸಂಚಿನ ಒಂದು ರೂಪವಾಗಿ, ನಮ್ಮ ಒಳಪಂಗಡಗಳ ಐಕ್ಯತೆಗೆ ಅಡ್ಡಿಪಡಿಸುತ್ತಾ- ಇವರು ಗಂಗಟಗಾರರು ಇವರು ಕುಂಚಟಿಗರು ಇವರು ರೆಡ್ಡಿಗರು ಇವರು ಹೊಸದೇವರು ಇವರು ಹಳ್ಳಿಕಾರರು ಹೀಗೆ ಹೇಳುತ್ತಾ ನಮ್ಮಲ್ಲಿರುವ ಅನೇಕ ಉಪ ಪಂಗಡಗಳನ್ನು ವಿಭಜಿಸಿ ನಮ್ಮ ಒಕ್ಕಲಿಗ ಸಮುದಾಯದ ಸಹೃದಯಿ ಸಮುದಾಯಿಕ ಭಾವನೆಯಿಂದ ಬೆಳೆದಿರುವ ಅನೇಕ ನಾಯಕರುಗಳನ್ನು ಬುದ್ಧಿಹೀನರನ್ನಾಗಿ ಮಾಡಿ ಅವರನ್ನು ವಿಶ್ವಮಾನವರು ಎಂದು ಹೇಳಿಕೊಳ್ಳುವ ರೀತಿಯಲ್ಲಿ ಬೀದಿಗಿಟ್ಟು, ನೈಜವಾದಂತಹ ಸಮಸ್ತ ವಿಶ್ವಕ್ಕೆ ಅನ್ನ ನೀಡುತ್ತಿದ್ದ ತಮ್ಮ ಬುದ್ಧಿಯನ್ನು ಹೀನತೆಗೆ ಅಟ್ಟಿ, ಯಾವುದೇ ವೇದಿಕೆಯ ಮೇಲೆ ತಾವು ಹೆಮ್ಮೆಯ ಒಕ್ಕಲಿಗರು ಎಂದು ಹೇಳಿಕೊಳ್ಳದಂತಹ ಪರಿಸ್ಥಿತಿಗೆ ಅವರನ್ನು ದೂಡಿ... ಕೊನೆಗೆ ಅಧಿಕಾರದ ಆಸೆಗೆ ಅವರು, ಅನೇಕ ಕಡೆಗಳಲ್ಲಿ ನಾವು ಒಕ್ಕಲಿಗರೆ ಅಲ್ಲ… ನಾವು ಅನ್ಯ ಧರ್ಮಕ್ಕೆ ಹೋಗುತ್ತೇವೆ… ಅಥವಾ ನಾವು ನಿಮ್ಮಲ್ಲೇ ಒಬ್ಬರು ಎಂಬಂತಹ ರಣಹೇಡಿ ಮಾತುಗಳನ್ನಾಡುವಂತೆ ಮಾಡುತ್ತಿರುವುದು... ಮರೆಮಾಚದಂತಹ ವಾಸ್ತವ.
VOKKALIGA COMMUNITY DEVELOPMENT AND UNITY FORMATION IN ACTION
Rohan Gowdru
11/5/20241 min read


ತಲೆಮಾರುಗಳಿಂದ ಹುಟ್ಟಿನಿಂದಲೇ ತಮ್ಮ ಸಾಂಪ್ರದಾಯಿಕ ಹಿನ್ನೆಲೆ ಮತ್ತು ಸಮಾಜದ ಬಗ್ಗೆ ಕಾಳಜಿ ಹಾಗೂ ಎಲ್ಲಾ ಸಂಪ್ರದಾಯಿಕ ಜಾತಿಭೇದ ಭಾವಗಳ ಭಾವನೆಯಿಂದ ಕುಗ್ಗದೆ ಸಮಾಜಕ್ಕಾಗಿ ಅನ್ನ ಬೆಳೆಯುವ ವಿಶ್ವದ ಏಕೈಕ ಮರ್ಯಾದ ಪೂರ್ವಕ ಸಮುದಾಯವೇ ಒಕ್ಕಲಿಗ ಸಮುದಾಯ.
ಇಂತಹ ಸಾಂಪ್ರದಾಯಿಕ ಹಿರಿಮೆಯನ್ನು ಮತ್ತು ಹೆಮ್ಮೆಯ ನಾಡು ಕಟ್ಟಿದ ನಾಡಪ್ರಭು ಕೆಂಪೇಗೌಡರ ಹಿರಿಮೆಯನ್ನು ಹಾಗೂ ಸಮಾಜಕ್ಕೆ ವಿದ್ಯಾಯೋಗವನ್ನು ಆಶೀರ್ವದಿಸಿದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಜಿ ಹಾಗೂ ಸಾಮರಸ್ಯ ಮತ್ತು ನಿಜವಾದ ಸಮಾಜಕ್ಕಾಗಿ ನಮ್ಮೆಲ್ಲರಿಗೆ ಕಾಪಾಡಿಕೊಂಡು ಹೋಗಲು ಹಾಗೂ ಇಂದಿನ ಕಾಲಘಟ್ಟಕ್ಕೆ ಅಂದೇ ಭವಿಷ್ಯದ ಒಕ್ಕಲಿಗರ ಹಿತಕಾಗಿ ಸಂಘಟಿತ ಬುನಾದಿಯನ್ನು ಹಾಕಿದ ಶ್ರೀ ಕೆ ಹೆಚ್ ರಾಮಯ್ಯನವರು ಹಾಗೂ ಎಲ್ಲ ಹಿರಿಯರು ನೀಡಿದ ಬಳುವಳಿಯಾಗಿ ಇಂದು ನಾವು ಹೆಮ್ಮೆಯ ಒಕ್ಕಲಿಗರು ಎಂದು ಸಮಾಜದಲ್ಲಿ ಒಳ್ಳೆಯ ಗೌರವ ಸ್ಥಾನವನ್ನು ಹುಟ್ಟಿನಿಂದಲೇ ಪಡೆಯುವ ಯೋಗದಾನವಾಗಿದೆ.
ತಮ್ಮೆಲ್ಲರ ಸ್ವಾರ್ಥವನ್ನು ಮತ್ತು ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಸಮಾಜಕ್ಕಾಗಿ ಮತ್ತು ನಮ್ಮವರು ಎಂಬ ಮಹಾಜ್ಞಾನದ ಸಮುದಾಯಕ್ಕಾಗಿ, ನಮಗೆ ಇಲ್ಲಿಯವರೆಗೂ ಆಶೀರ್ವದಿಸಿದ ಗೌರವ ಮತ್ತು ಮರ್ಯಾದೆಯನ್ನು ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡಬೇಕು? ಬೇಡವೋ? ಎಂದು ಒಮ್ಮೆ ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿ ಹಾಗೂ ವಿಮರ್ಶಿಸಿ.
ಇಂತಹ ವಿಚಾರಗಳನ್ನು ಮಾತನಾಡಲು ಅದೇಕೋ ಹೆಚ್ಚಿನ ಬುದ್ದಿವಂತರಿಗೆ ಹಾಗೂ ಸಮಾಜ ಸೇವಕರಿಗೆ ನಾಲಿಗೆ ಹೊರಡುವುದಿಲ್ಲ...
ತಮ್ಮಿಂದ ಸಮಾಜಕ್ಕೆ 5 ಪೈಸೆ ಕೆಲಸವಾದರೆ ಅವರನ್ನು ಅವರೇ ಸಮಾಜ ಸೇವಕರು ಮತ್ತು ನಾಯಕರು ಎಂದು ಹೇಳಿಕೊಂಡು ರಾಜಕೀಯ ಮತ್ತು ಇತರೆ ಕ್ಷೇತ್ರಗಳಲ್ಲಿ ಜೀವನ ನಡೆಸುತ್ತಿರುವ ಅದೆಷ್ಟೋ ಮಂದಿಗೆ ಅವರಿಗೆ ತಿಳಿಯದೆ ನಮ್ಮವರು ತಾನೆ ಎಂಬುವ ನಮ್ಮತನದ ಭಾವನೆಯಲ್ಲಿ ಸಹಕರಿಸುತ್ತಿರುವ ಅಸಂಖ್ಯಾ ಸಹೃದಯಿ ಒಕ್ಕಲಿಗರ ಮುಕ್ತತೆಗೆ ಸಾಕ್ಷಿಯೇ ಬೇಕಿಲ್ಲ...
ಒಮ್ಮೆ ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ!
ನೀವು ಹಣದಿಂದ ದೊಡ್ಡವರು ಎನಿಸಿಕೊಂಡರೆ? ನಿಮಗಿಂತ ದೊಡ್ಡವರು ಅನೇಕರು ಹಣವಂತರು ಪ್ರತಿ ಊರಿನಲ್ಲೂ ಇರುತ್ತಾರೆ! ಹಾಗಿರುವಾಗ ನಿಮ್ಮನ್ನು ಸಮುದಾಯ ಏಕೆ ಗುರುತಿಸಬೇಕು?
ನೀವು ಸಮಾಜ ಸೇವೆಯನ್ನು ಮಾಡುತ್ತ, ಸಮಾಜದಲ್ಲಿ ನಿಮ್ಮನ್ನು ಗೌರವದಿಂದ ಜನ ನೋಡಲು ಕಾರಣ ನಿಮ್ಮ ಸಮಾಜ ಸೇವೆಯ. ಅಥವಾ, ಸಮಾಜದಲ್ಲಿ ನಿಮ್ಮನ್ನು ಸಮಾಜ ಸೇವೆ ಮಾಡಲು ಅವಕಾಶ ಕಲ್ಪಿಸಿದ ನಿಮ್ಮ ಪೂರ್ವಜರ ಹಿನ್ನೆಲೆಯೋ?
ಇನ್ನು ಸಣ್ಣ ಪ್ರಮಾಣದಲ್ಲಿ ಹೇಳುವುದೇ ಬೇಡ, ಇಂತಹ ವಿಮರ್ಶೆ ಕದ್ದು ಮುಚ್ಚಿ ಮಾಡುವಂತಹ ವಿಷಯ ಅಲ್ಲವೇ ಅಲ್ಲ... ನೇರವಾಗಿ ಮಾತನಾಡುವುದು ಅನಿವಾರ್ಯ, ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ- ಒಕ್ಕಲಿಗರು ಎಂದರೆ ಹಣದಿಂದಲೇ ಬಲಿತು, ಬೆಳೆದು, ಸಮಾಜದಲ್ಲಿ ಹಣ ಇರುವ ಒಕ್ಕಲಿಗರಿಗೆ ಹುಟ್ಟಿದ ಜನರಿರುತ್ತಾರೆ ಹೊರತು! ನಿಜವಾದ ಕೆಂಪೇಗೌಡರ ಅಸ್ಮಿತೆಗಳನ್ನು ಹಾಗೂ ಒಕ್ಕಲಿಗರ ಪೌರುಷವನ್ನು ಹೊಂದಿರುವ ಒಕ್ಕಲು ಸಿಂಹಗಳಲ್ಲ ಎಂಬುದನ್ನು ಜಾಗೃತವಾಗಿ ಮರೆಯದಿರಿ.
ಈ ವಿಷಯ ಮುಂದುವರಿಸಿ ಹೇಳುವುದಾದರೆ, ಒಂದು ವೇಳೆ ಎಚ್. ಡಿ. ಕುಮಾರಸ್ವಾಮಿ ಅವರು ಒಕ್ಕಲಿಗರೇ ಅಲ್ಲದೆ ಮುಸಲ್ಮಾನರಾಗಿ ಅಥವಾ ವಿಶ್ವಮಾನವರಾಗಿ ಹುಟ್ಟಿದ್ದಿದ್ದರೆ, ಇಂದು ಅವರಿಗೆ ಸ್ಥಾನಮಾನ ಇರುತ್ತಿತ್ತೆ? ಅಥವಾ ಇಂದು ಅವರಿಗೆ ರಾಷ್ಟ್ರೀಯ ಪಕ್ಷದಲ್ಲಿ ಸ್ಥಾನಮಾನ ಸಿಗಲು, ಅವರು ಒಳ್ಳೆಯ ರಾಜಕಾರಣಿ ಎಂದು! ಅಥವಾ ಅವರ ಹಿಂದೆ ಒಕ್ಕಲಿಗ ಸಮುದಾಯ ಇದೆ ಎಂದು! ಈ ರೀತಿ ಯಾವ ಆಧಾರದ ಮೇಲೆ ಹೊರಗಿನ ಸಮಾಜ ಅವರಿಗೆ ಸ್ಥಾನಮಾನ ಕೊಟ್ಟಿದೆ ಎಂದು ಒಮ್ಮೆ ಯೋಚಿಸಿ.
ಅದೇ ರೀತಿ ಇಂದು ಡಿ. ಕೆ. ಶಿವಕುಮಾರ್ ರವರು ಅಥವಾ ಆರ್. ಅಶೋಕ್ ರವರು ಒಕ್ಕಲಿಗರೇ ಅಲ್ಲದಿದ್ದರೆ ಅಥವಾ ವಿಶ್ವಮಾನವರೇ ಆಗಿದ್ದ ಪಕ್ಷದಲ್ಲಿ ಅವರಿಗೆ ಕಾಂಗ್ರೆಸ್ ಅಥವಾ ಬಿಜೆಪಿ ಈಗಿರುವ ಸ್ಥಾನಮಾನ ಕೊಡುತ್ತಿತ್ತೆ?
ಇಂತಹ ವಿಚಾರಗಳನ್ನು ಮಾತನಾಡುವಾಗ ತೆರೆಮರೆ ಹಿಂದೆ ವಯಕ್ತಿಕ ಸ್ವಾರ್ಥಗಳನ್ನು ಅಥವಾ ಯಾರಿಗೋ ಬಕೆಟ್ ಹಿಡಿಯುವ ಜಾಯಮಾನವನ್ನು ಎಂದಿಗೂ ನಾವು ಪ್ರದರ್ಶಿಸಬಾರದು...
ಈಗಾಗಲೇ ಭವಿಷ್ಯದ ಸಮುದಾಯದ ವಿಚಾರವಾಗಿ ಪ್ರಜ್ಞಾ ಹೀನರಾಗಿರುವ ಒಕ್ಕಲಿಗ ಸಮಾಜದ ವರ್ತನೆಯಿಂದ, ನಮ್ಮ ಒಕ್ಕಲಿಗರನ್ನು ರಾಜಕೀಯ ಪ್ರೇರಿತರಾಗಿ ಹಾಗೂ ಸಮಾಜದಲ್ಲಿ ಶಕ್ತಿ ಹೀನರನ್ನಾಗಿ ಮಾಡುವ ಸಂಚಿನ ಒಂದು ರೂಪವಾಗಿ, ನಮ್ಮ ಒಳಪಂಗಡಗಳ ಐಕ್ಯತೆಗೆ ಅಡ್ಡಿಪಡಿಸುತ್ತಾ- ಇವರು ಗಂಗಟಗಾರರು ಇವರು ಕುಂಚಟಿಗರು ಇವರು ರೆಡ್ಡಿಗರು ಇವರು ಹೊಸದೇವರು ಇವರು ಹಳ್ಳಿಕಾರರು ಹೀಗೆ ಹೇಳುತ್ತಾ ನಮ್ಮಲ್ಲಿರುವ ಅನೇಕ ಉಪ ಪಂಗಡಗಳನ್ನು ವಿಭಜಿಸಿ ನಮ್ಮ ಒಕ್ಕಲಿಗ ಸಮುದಾಯದ ಸಹೃದಯಿ ಸಮುದಾಯಿಕ ಭಾವನೆಯಿಂದ ಬೆಳೆದಿರುವ ಅನೇಕ ನಾಯಕರುಗಳನ್ನು ಬುದ್ಧಿಹೀನರನ್ನಾಗಿ ಮಾಡಿ ಅವರನ್ನು ವಿಶ್ವಮಾನವರು ಎಂದು ಹೇಳಿಕೊಳ್ಳುವ ರೀತಿಯಲ್ಲಿ ಬೀದಿಗಿಟ್ಟು, ನೈಜವಾದಂತಹ ಸಮಸ್ತ ವಿಶ್ವಕ್ಕೆ ಅನ್ನ ನೀಡುತ್ತಿದ್ದ ತಮ್ಮ ಬುದ್ಧಿಯನ್ನು ಹೀನತೆಗೆ ಅಟ್ಟಿ, ಯಾವುದೇ ವೇದಿಕೆಯ ಮೇಲೆ ತಾವು ಹೆಮ್ಮೆಯ ಒಕ್ಕಲಿಗರು ಎಂದು ಹೇಳಿಕೊಳ್ಳದಂತಹ ಪರಿಸ್ಥಿತಿಗೆ ಅವರನ್ನು ದೂಡಿ... ಕೊನೆಗೆ ಅಧಿಕಾರದ ಆಸೆಗೆ ಅವರು, ಅನೇಕ ಕಡೆಗಳಲ್ಲಿ ನಾವು ಒಕ್ಕಲಿಗರೆ ಅಲ್ಲ… ನಾವು ಅನ್ಯ ಧರ್ಮಕ್ಕೆ ಹೋಗುತ್ತೇವೆ… ಅಥವಾ ನಾವು ನಿಮ್ಮಲ್ಲೇ ಒಬ್ಬರು ಎಂಬಂತಹ ರಣಹೇಡಿ ಮಾತುಗಳನ್ನಾಡುವಂತೆ ಮಾಡುತ್ತಿರುವುದು... ಮರೆಮಾಚದಂತಹ ವಾಸ್ತವ.
ಇಂದು ನಿಮ್ಮನ್ನು ನೋಡಿ ಚಪ್ಪಾಳೆ ತಟ್ಟುತ್ತಿರುವ ಹಾಗೂ ಮುಂದೆ ನಿಮ್ಮ ಮಕ್ಕಳಿಗೆ ಚಪ್ಪಲಿಯಲ್ಲಿ ಹೊಡೆಯುವ ರಾಜಕೀಯ ತಂತ್ರಗಾರಿಕೆ ಉಳ್ಳ ಕೆಲವು ನರಿ ಬುದ್ಧಿಯುಳ್ಳ ಜನರಿರುತ್ತಾರೆ ಬಹಳ ಎಚ್ಚರಿಕೆ! ಎಚ್ಚರಿಕೆ!
ಸದ್ಯ ಈಗಿರುವ ವಾಸ್ತವದ ವಿಷಯ ಹೇಳುವುದಾದರೆ, ಅನೇಕರು ಸಮುದಾಯದ ಅನೇಕ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿ, ಸಮುದಾಯಕ್ಕೆ ಒಳ್ಳೆ ಕೀರ್ತಿ - ಸ್ಥಾನಮಾನಗಳನ್ನು ನೀಡಿರುವುದು ಹಾಗೂ ಸಮುದಾಯಿಕ ಸಂಘಟನೆಗಳ ಜೊತೆ ಕೈಜೋಡಿಸಿ ಹೆಮ್ಮೆಯ ಒಕ್ಕಲಿಗರು ಎಂದು ಎದೆತಟ್ಟುವಂತಹ ನೈಜ ವಾಸ್ತವಂಶದಲ್ಲಿ ಇರುವಂತಹ ಸಹೃದಯಿಗಳು ಆದರೆ...! ಇದೇ ರೀತಿಯಲ್ಲಿ ಕೆಲವರು ಅಧಿಕಾರ ಮತ್ತು ಹಣದ ಅಮಲಿನಲ್ಲಿ ಹಾಗೂ ತಮಗಿರುವ ಮರ್ಯಾದೆ ಮತ್ತು ಗೌರವ, ಅದರ ಹಿನ್ನೆಲೆ ಮತ್ತು ಇತಿಹಾಸದ ಋಣವನ್ನು ಮರೆತು, ಸಮುದಾಯಕ್ಕಿಂತ ತಾವೇ ದೊಡ್ಡವರು! ಎಂದು ಎಲ್ಲಿಯೂ ತಮ್ಮತನವನ್ನು ಹೇಳಿಕೊಳ್ಳದಂತಹ ಹಾಗೂ ಹೇಳಿದರು ಸಹ ನಮ್ಮ ಸಮುದಾಯವನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ರಾಜಕೀಯ ಪ್ರೇರಿತವಾಗಿ ಹೇಳುವಂತಹ ಕುಚ್ಚು ಬುದ್ಧಿಯ ಮಂದಿಯೂ ಇರುತ್ತಾರೆ.
ಕುಲಬಾಂಧವರೇ- ಸಹೋದರ- ಸಹೋದರಿಯರೇ ಈ ಕೂಡಲೇ ಜಾಗೃತರಾಗಿ, ಒಂದು ವೇಳೆ ನೀವು ಹಣವಂತರಾಗಿದ್ದರೆ, ನಿಮ್ಮ ಹಣ ಇರುವವರೆಗೆ ಮಾತ್ರ ಸಮಾಜದಲ್ಲಿ ನೀವು ದೊಡ್ಡವರಾಗಿರುತ್ತೀರಿ. ಅದೇ ಹಣ ನಿಮ್ಮೊಂದಿಗೆ ಇಲ್ಲದ ದಿನ ಸಮಾಜದಲ್ಲಿ ನೀವು ಬಡವರಾಗಿ ಅಥವಾ ಆರ್ಥಿಕವಾಗಿ ಹಿಂದುಳಿದವರಾಗಿ ಉಳಿಯುತ್ತೀರಿ... ಆದರೆ ನೀವು ಹಣವಂತರಾಗಿಯು ಜೊತೆಗೆ ಸಮುದಾಯಿಕ ಭಾವನೆಯುಳ್ಳ ಹೆಮ್ಮೆಯ ಒಕ್ಕಲಿಗ ಗುಣವಂತರಾಗಿಯು ಇದ್ದ ಪಕ್ಷದಲ್ಲಿ, ನೀವೆಂದಿಗೂ ಒಬ್ಬಂಟಿಯಾಗಿರುವುದಿಲ್ಲ ಎಂಬುದನ್ನು ಮರೆಯದಿರಿ.
ಅದೇ ರೀತಿ ಆರ್ಥಿಕತೆಯ ಆಧಾರದಲ್ಲಿ ಏನೇ ಇರಲಿ ಸಮಾಜದ ಪ್ರತಿಯೊಬ್ಬರು ಮೇಲು - ಕೇಳು ಎನ್ನದೆ, ಹೇಗೆ ಭೈರವನು ಎಲ್ಲರನ್ನು ಆಶೀರ್ವದಿಸುತ್ತಾನೋ ಅದೇ ರೀತಿ ಸಮಾಜದಲ್ಲಿ ಸಮುದಾಯಿಕ ಭಾವನೆಯನ್ನು ನೈಜವಾಗಿ ಉಳ್ಳ ವ್ಯಕ್ತಿತ್ವಗಳನ್ನು ರಾಜಕೀಯ ಕ್ಷೇತ್ರದಲ್ಲಾಗಲಿ, ವ್ಯವಹಾರಿಕ ಕ್ಷೇತ್ರದಲ್ಲಿ, ಇನ್ನು ಯಾವುದೇ ಕ್ಷೇತ್ರದಲ್ಲಾಗಲಿ, ನಮ್ಮ ಕೈಲಾದಷ್ಟು ಸಹಾಯವನ್ನು ಮಾಡುವುದು ಹಾಗೂ ಅಂತಹವರನ್ನು ಗುರುತಿಸುವುದು ಮತ್ತು ಬೆಳೆಸುವುದು. ಇದು ನಮ್ಮ ಕರ್ತವ್ಯವಾಗಿರುತ್ತದೆ ಎಂಬುದನ್ನು ಎಂದಿಗೂ ಮರೆಯದಿರಿ.
ನಮ್ಮ ಸಮುದಾಯದಲ್ಲೂ ಸಹ ಯುವ-ಸಮೂಹ ಮತ್ತು ಯೋಗ್ಯತೆವುಳ್ಳ - ಗುಣವಂತರು ಇರುತ್ತಾರೆ, ಅವರಿಗೆ ಅವರ ಭವಿಷ್ಯದ ವಿಚಾರವಾಗಿ ವಿಮರ್ಶಿಸುವ ಮತ್ತು ಮಾತನಾಡುವ ವೇದಿಕೆಗಳು ಇಲ್ಲಿಯವರೆಗೆ ಆಗಿರುವುದಿಲ್ಲ? ಇನ್ನಾದರೂ… ನಮ್ಮ ಸಮುದಾಯದ ಎಲ್ಲರೂ, ಎಲ್ಲ ಕ್ಷೇತ್ರಗಳಲ್ಲಿ, ಅಂದರೆ ರಾಜಕೀಯ ಕ್ಷೇತ್ರಗಳಲ್ಲೂ ಪಾಲ್ಗೊಳ್ಳುವಿಕೆಯನ್ನು ಈ ಕ್ಷಣದಿಂದ ತೊಡಗಿಸಿಕೊಳ್ಳಬೇಕು ಹಾಗೂ ಪ್ರಸಕ್ತ ಇರುವ ಜೆಡಿಎಸ್ ನ ಕುಮಾರಸ್ವಾಮಿಯವರೇ ಇರಲಿ, ಕಾಂಗ್ರೆಸ್ಸಿನ ಡಿಕೆ ಶಿವಕುಮಾರ್ ಅವರೇ ಇರಲಿ , ಬಿಜೆಪಿಯ ಆರ್ ಅಶೋಕ್ ರವರೇ ಇರಲಿ, ಇನ್ನೂ ಅನೇಕರು ಸೇರಿದಂತೆ- ಮೊದಲಿಗೆ ನೀವು ಬಲಿಷ್ಠರಾಗಿದ್ದೀರಿ ಮತ್ತು ನಿಮ್ಮ ಬಲಿಷ್ಠತೆಗೆ ಸಮುದಾಯ ಬಹಳ ಹೆಮ್ಮೆಪಡುತ್ತದೆ… ಅಂತೆಯೇ ಸಮುದಾಯ ನಿಮ್ಮಿಂದ ಸಮಾಜದಲ್ಲಿ ಒಕ್ಕಲಿಗರು ಇರುತ್ತಾರೆ ಎಂಬ ಅರಿವು ನಿಮಗಿರಲಿ ಎಂದು ಬಯಸುತ್ತದೆ, ಎಂಬುದನ್ನು ಮರೆಯದಿರಿ.
ಯಾರೇ ಆಗಲಿ ತಾವು ಬದುಕಬೇಕು ತಮ್ಮವರನ್ನು ಬದುಕಿಸಬೇಕು, ಅಥವಾ ಬದುಕಿಸಲು ಪ್ರಯತ್ನಿಸಬೇಕು. ಅಂತೆಯೇ ಪ್ರಸಕ್ತ ರಾಜಕೀಯದಲ್ಲಿರುವ ನಾಯಕರು ತಮ್ಮ ರಾಜಕೀಯ ನೆಲೆಯ ಶಕ್ತಿಯುತ ಹಿನ್ನೆಲೆಗೆ ಬುನಾದಿಯಾಗಿರುವ ಒಕ್ಕಲುತನದ ಶ್ರೇಷ್ಠತೆಯನ್ನು ಅರಿತು ಸಮುದಾಯಕ್ಕೆ ಈ ಕೂಡಲೇ ಸ್ಪಂದಿಸಬೇಕು ಮತ್ತು ನಾಚಿಕೆ ಬಿಟ್ಟು ನಮ್ಮತನವನ್ನು ಎತ್ತಿ ಹಿಡಿಯಬೇಕು, ತಮ್ಮ ಮಕ್ಕಳನ್ನು ಮಾತ್ರ ರಾಜಕೀಯ ನಾಯಕರನ್ನಾಗಿ ನೋಡಿಕೊಳ್ಳುವ ವೈಯಕ್ತಿಕ ಸ್ವಾರ್ಥಗಳನ್ನು ಬಿಟ್ಟು, ಹಿಂದಿನ ನಮ್ಮ ನಾಯಕರ ಹಾದಿಯಲ್ಲಿ ಪ್ರತಿ ಹಳ್ಳಿಯಲ್ಲಿ, ಪ್ರತಿ ಪಂಚಾಯತಿಯಲ್ಲಿ, ಪ್ರತಿ ಹೋಬಳಿಯಲ್ಲಿ, ಪ್ರತಿ ತಾಲೂಕಿನಲ್ಲಿ, ಪ್ರತಿ ಜಿಲ್ಲೆ ಮತ್ತು ಎಲ್ಲೆಡೆ ಅಲ್ಲಿನ ಸ್ಥಳೀಯ ಸಮುದಾಯದ ಯುವಕರನ್ನು ಅಥವಾ ಸಮುದಾಯದ ಭಾವನೆಯುಳ್ಳ ಹಿರಿಯರನ್ನು ಸಾಧ್ಯವಾದ ಕ್ಷೇತ್ರಗಳಲ್ಲಿ ಬೆಳೆಸಬೇಕು ಹಾಗೂ ರಾಜಕೀಯಕ್ಕೆ ಆಹ್ವಾನಿಸಬೇಕು ಮತ್ತು ಬೆಂಬಲಿಸಬೇಕು. ಇದನ್ನು ಮಾಡುವುದನ್ನು ಬಿಟ್ಟು ಸೂಟ್ಕೇಸ್ಗಳಿಗೆ ಮತ್ತು ನಿಮ್ಮ ವೈಯಕ್ತಿಕ ವ್ಯಾಮೋಹ ಮತ್ತು ದುರಾಸೆಗಾಗಿ ಒಕ್ಕಲಿಗರು ಎಂದು ನಂಬಿಸಿ ಸಮುದಾಯದ ನೆರಳನ್ನು ಪಡೆದುಕೊಂಡು ಹಳ್ಳಿಗಳಿಂದ ಹಿಡಿದು, ಪಂಚಾಯಿತಿ, ಹೋಬಳಿ ಅಥವಾ ಎಲ್ಲೇ ಆದರೂ ಸಮುದಾಯದ ಅರಿವೇ ಇಲ್ಲದ ಹಾಗೂ ಹಣವೊಂದಿದ್ದರೆ ಏನು ಬೇಕಾದರೂ ಮಾಡಬಹುದು, ಎಂಬ ಪರಿಜ್ಞಾನವಿಲ್ಲದ ಲಜ್ಜೆಗಟ್ಟ ಜನರನ್ನು ಟಿಕೆಟ್ ಗಳನ್ನು ನೀಡಿ ಪ್ರೋತ್ಸಾಹಿಸಿ ಸ್ಥಳೀಯ ಸಮುದಾಯಿಕ ಭಾವನೆಗಳನ್ನು ನಂಬಿಸಿ ಕುತ್ತಿಗೆ ಕೊಯಬಾರದು.
ಇದಿಷ್ಟು ನಾವೆಲ್ಲರೂ ಸೂಕ್ಷ್ಮವಾಗಿ ಅರಿಯಬೇಕಾದ ವಿಚಾರಗಳಾಗಿವೆ.
ನಮ್ಮ ಸಮುದಾಯದ ಎಲ್ಲರೂ ದಯಮಾಡಿ ಜ್ಞಾನವಂತರಾಗಬೇಕು ಹಾಗೂ ಜಾತಿವಾದಿಗಳಾಗಬಾರದು . ಏಕೆಂದರೆ ಜಾತಿ ಎಂಬುದು ಸಂವಿಧಾನ ನಮಗೆ ಕೊಟ್ಟಿರುವ ಹೆಸರಷ್ಟೇ ನಮ್ಮ ಶ್ರೇಷ್ಠತೆ ನಮ್ಮ ಸಂಪ್ರದಾಯದಲ್ಲಿ ಇರುತ್ತದೆ ಹಾಗೂ ನಾವು ಅನ್ಯರನ್ನು ಸಾಮರಸ್ಯತೆಯಿಂದ ಸಮಾಜಮುಖಿಯಾಗಿ ಗೌರವಿಸಬೇಕು ಹಾಗೂ ನಮ್ಮನ್ನು ಗೌರವಿಸದ, ನಮ್ಮ ಮೇಲೆ ರಾಜಕೀಯ ಶಡ್ಯಂತ್ರ ಮಾಡುವ, ಹೊಲಸು ಬುದ್ಧಿಯ ಜನರನ್ನು ಸಂಘಟಿತರಾಗಿ ದೂರ ಇಡಬೇಕು ಹಾಗೂ ಮಟ್ಟ ಹಾಕಬೇಕು.
ನಮ್ಮ ಈಗಿನ ದುಸ್ಥಿತಿಗೆ, ಮತ್ತು ಸಮುದಾಯದ ಐಕ್ಯತಾಯಿಹೀನತೆಗೆ, ನಾವೇ ಕಾರಣ ಎಂಬುದನ್ನು ಮರೆಯಬಾರದು. ಇದರ ಪರಿಣಾಮ ಮುಂದೊಂದು ದಿನ ಇಂದು ನಿಮಗೆ 500 1000 ಸಿಗಬಹುದು, ಆದರೆ ನಿಮ್ಮ ಮಕ್ಕಳ ಭವಿಷ್ಯ ಬೀದಿಗೆ ಬರುತ್ತದೆ! ಎಂಬುದನ್ನು ಮರೆಯದಿರಿ. ನಮ್ಮ ಸ್ವಾಭಿಮಾನ ಮತ್ತು ಗೌರವ ಸಮಾಜದಲ್ಲಿ ನಮ್ಮ ಹಿರಿಯರು ಕೊಟ್ಟಿರುವ ಆಶೀರ್ವಾದ ಹೊರತು, ಈಗಿರುವ ನಾಯಕರು ಎಂಬ ಹೆಸರಿನ ನಾಲಾಯಕರುಗಳು ಕೊಡುವ ಹಣದಿಂದ ಬಂದಿರುವ ವಿಷಯ ಅಲ್ಲ, ಇನ್ನಾದರೂ ಸಮುದಾಯಕ್ಕೆ ಭಾವನೆಗಳನ್ನು ಬೆಳೆಸಿ ಪ್ರತಿ ತಾಲೂಕಿನಲ್ಲಿರುವ ಕೆಲವು ತಲೆಹಿಡುಕ, ಕುಲದ್ರೋಹಿ ಜನರನ್ನು ಗುರುತಿಸಿ, ಅವರ ಮನ ಪರಿವರ್ತನೆಯಾಗಲು ಭೈರವನನ್ನು ಪ್ರಾರ್ಥಿಸಿ ಹಾಗೂ ಸಂಘಟಿತರಾಗಿ ತಿಳಿಹೇಳಿ ಅವಕಾಶ ಕೊಡಬೇಕು. ತಿಳಿದುಕೊಳ್ಳದಿದ್ದರೆ ದೆವ್ವ ಮೆಟ್ಟಿದರೆ ಚಪ್ಪಲಿ ಏಟು ಎಂಬಂತೆ, ಅಂತಹವರನ್ನು ಸಂಘಟಿತರಾಗಿ ರಾಜಕೀಯ ಮತ್ತು ಯಾವುದೇ ರೀತಿಯ ಕ್ಷೇತ್ರಗಳಿಂದ ದೂರ ಇಟ್ಟುಬಿಡಿ, ಇಲ್ಲದಿದ್ದರೆ ನಮ್ಮ ಸಮುದಾಯ ಎಂಬ ಸಮಾಜಕ್ಕೆ, ಹಾಲಿನಂತಹ ಶಕ್ತಿ ಕೊಡುವ ಒಕ್ಕಲುತನಕ್ಕೆ ಇಂಥವರೇ ಹುಳಿಯಾಗಿ, ಹಾಲನ್ನು ಹೊಡೆಯುತ್ತಾರೆ. ಅದಕ್ಕೆ ಕಾರಣ ನಿಮ್ಮ ಮೌನ ಆಗಿರುತ್ತದೆ, ಮತ್ತು ಅದರ ಪರಿಣಾಮ ನಿಮ್ಮ ಮಕ್ಕಳೇ ನೋಡಬೇಕಾಗುತ್ತದೆ...
ಜಾಗೃತರಾಗಿ ಎಚ್ಚರಿಕೆ! ಎಚ್ಚರಿಕೆ!
ಜೈ ಶ್ರೀ ನಾಡಪ್ರಭು ಶ್ರೀ ಕೆಂಪೇಗೌಡ
|| ಜೈ ಶ್ರೀ ಗುರುದೇವ ||