ದೇವೇಗೌಡರು ಒಕ್ಕಲಿಗರೇ ಅಲ್ಲ?
ದೇವೇಗೌಡರು ಒಕ್ಕಲಿಗರೇ ಅಲ್ಲ? - ಶ್ರೀ ಸುಬ್ರಹ್ಮಣ್ಯಂ ಸ್ವಾಮಿ, ಒಕ್ಕಲಿಗ ನಾಯಕರಿಗೆ ಸ್ಪಷ್ಟನೆ ಕೊಡುವ ಜವಾಬ್ದಾರಿ ಇಲ್ಲವೇ? ಈ ವಿಚಾರವಾಗಿ ನಿರ್ಮಲಾನಂದ ಸ್ವಾಮೀಜಿ ರವರು ಸಮುದಾಯಕ್ಕೆ ಏನು ಹೇಳುತ್ತಾರೆ...! ಕುಲಬಾಂಧವರೇ ನೀವೇ ಕೇಳಿ?
|| ಜೈ ಶ್ರೀ ಗುರುದೇವ || -ಶ್ರೀ ಅಂತರ ಗಂಗಾಧರನಾಥ ಸ್ವಾಮೀಜಿ
12/7/20241 min read


ಪ್ರಸಕ್ತ ಒಕ್ಕಲಿಗರ ಸಂಘಗಳು ಹಾಗೂ ಮಠ ಮತ್ತು ಆಸಕ್ತರಿಂದ ಉತ್ಸಾಹಭರಿತವಾಗಿ ನಡೆದುಕೊಂಡು ಹೋಗುತ್ತಿರುವ ಅನೇಕ ಚಟುವಟಿಕೆಗಳು ಎಲ್ಲಕ್ಕೂ ಮೇರಿ ಒಕ್ಕಲಿಗರನ್ನು ಸಬಲೀಕರಣ ಮಾಡುವ ನಿಟ್ಟಿನಲ್ಲಿ ಉದ್ಯಮಶೀಲತೆಯನ್ನು ಬೆಳೆಸಲು ನಡೆಯುತ್ತಿರುವ ಚಟುವಟಿಕೆಗಳು ಮತ್ತು ಮಠಗಳಿಂದ ಸಲಹೆಗಳನ್ನು ಪಡೆಯುತ್ತಾ ಮಹಿಳಾ ಸಂಘಟನೆಯಾಗಿ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಹೆಸರಿನಲ್ಲಿ ಮತ್ತು ನಮ್ಮೆಲ್ಲರ ಶಕ್ತಿಯ ಚಿಲುಮೆಯಾದ ಚುಂಚಶ್ರೀ ಪರಮ ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಆಶಯಗಳನ್ನು ಹೊತ್ತು ನಡೆಯುತ್ತಿರುವ ಮಹಿಳಾ ಸಂಘಟನೆಯ ಚುಂಚಾದ್ರಿ ಮಹಿಳಾ ಸಂಘಟನೆಗಳು.
ಇಲ್ಲಿ ನಾವು ಕೆಲವು ಅಂಶಗಳನ್ನು ಗಮನಿಸಿ ಅರ್ಥ ಮಾಡಿಕೊಳ್ಳಲೇಬೇಕಾದ ವಿಷಯ ಏನೆಂದರೆ ಈ ಮೇಲಿನ ಎಲ್ಲಾ ಚಟುವಟಿಕೆಗಳಿಗೆ ಮೂಲಭೂತ ಶಕ್ತಿ ಎಂದರೆ ನಮ್ಮ ಪೂರ್ವಜರು ಹಾಗೂ ಹಿರಿಯರು ನಮಗೆ ಬಳುವಳಿಯಾಗಿ ಕೊಟ್ಟಿರುವ ಸಾಂಪ್ರದಾಯಿಕ ಶಕ್ತಿ ಅಂದರೆ ಒಕ್ಕಲುತನದ ಹೆಮ್ಮೆಯ ಶಕ್ತಿ. ಇಲ್ಲಿಯವರೆಗೂ ನಮ್ಮ ಒಕ್ಕಲಿಗರಿಗೆ ಒಳ್ಳೆಯ ಗೌರವ ಮರ್ಯಾದೆ ಇದೆ ಎಂದರೆ ಅದಕ್ಕೆ ಕಾರಣ ಹಿಂದಿನ ನಮ್ಮ ಹಿರಿಯರ ಶ್ರೇಷ್ಠ ಸಾಂಪ್ರದಾಯಿಕ ನಡೆ. ಅದರಿಂದ ಸಮಾಜಕ್ಕೆ ಅವರು ನೀಡಿದ ಬೆಲೆಕಟ್ಟಲಾದಂತಹ ಸೇವೆ. ಪ್ರಸಕ್ತ ಈ ಎಲ್ಲ ಸೇವೆಗಳು ಮತ್ತು ಅವರು ನಮಗೆ ಧಕ್ಕಿಸಿದ ಕೀರ್ತಿ ಇಲ್ಲಿಯವರೆಗೂ ನಾವು ಹೆಮ್ಮೆಯ ಒಕ್ಕಲಿಗರು ಎಂದು ಹೇಳಿಕೊಳ್ಳಲು ಸಾಧ್ಯವಾಗಿದೆ.
ಈ ಎಲ್ಲಾ ವಿಷಯಗಳ ಮಧ್ಯೆ ಬೇಜಾರಿನ ಸಂಗತಿ ಎಂದರೆ ಈ ಹಿಂದೆ ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವಾ ಮನೋಭಾವವುಳ್ಳ ಸಂಘಟನಾಕಾರರ ಶ್ರಮದಿಂದ ಜನರಲ್ಲಿ ನಂಬಿಕೆಯನ್ನು ಬೆಳೆಸಲಾಗುತ್ತಿತ್ತು ಹಾಗೂ ನಮ್ಮ ಪರಮ ಶ್ರೇಷ್ಠ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಆಶಯದಂತೆ ಒಳಪಂಗಡಗಳ ಐಕ್ಯತೆಗಾಗಿ ಅಂದು ಮಠ ಮತ್ತು ಸಂಘಟನೆಗಳು ಒಂದಾಗಿ ನಡೆಯುತ್ತಿದ್ದವು. ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಮುದಾಯವನ್ನು ಯಾರು ಪ್ರತಿನಿಧಿಸಬೇಕು ಎಂಬ ವಿಚಾರಗಳನ್ನು ಸ್ವಯಂ ತಳಮಟ್ಟದಲ್ಲಿ ಹಳ್ಳಿ ಹಳ್ಳಿಗಳಲ್ಲಿನ ಒಕ್ಕಲುತನದ ಸೊಗಡಿನ ಹೆಮ್ಮೆಯ ಸಾಂಪ್ರದಾಯಿಕ ಕುಲಬಾಂಧವರು ಸಂಘಟಿತರಾಗಿ ನಿರ್ಧರಿಸುತ್ತಿದ್ದರು. ಬೇರೆ ಯಾವುದೇ ಸಮುದಾಯಗಳ ನಾಯಕತ್ವವನ್ನಾಗಲಿ, ರಾಜ್ಯದ ಸಾರ್ವಜನಿಕ ಹಿತಾಸಕ್ತಿಯ ಚುಕ್ಕಾಣಿಯನ್ನು ಹಿಡಿಯುವಲ್ಲಿ ಸರ್ವ ಜಾತೀಯ ಸಾಮರಸ್ಯವನ್ನು ಎತ್ತಿ ಹಿಡಿಯುತ್ತಿದ್ದ ಹಾಗೂ ನಿಸ್ವಾರ್ಥಕಾಯಕಗಳನ್ನು ಜಾತ್ಯತೀತವಾಗಿ ನಡೆಸುವ ಕೀರ್ತಿ ಒಕ್ಕಲಿಗರದಾಗಿತ್ತು. ನಿಜವಾದ ಒಕ್ಕಲಿಗನೆಂದರೆ ಸಮಗ್ರ ಒಕ್ಕಲಿಗ ಒಳಪಂಗಡಗಳ ಐಕ್ಯತೆಯ ಜವಾಬ್ದಾರಿಯನ್ನು ವಹಿಸಿ ಸಾಮಾಜಿಕ ನ್ಯಾಯಕ್ಕಾಗಿ ಜಾತ್ಯತೀತ ನಾಯಕತ್ವಗಳನ್ನು ಗುರುತಿಸುವ ಹಾಗೂ ಅವಶ್ಯಕತೆ ಬಿದ್ದಲ್ಲಿ ತಾನೆ ನಾಯಕನಾಗುವ ನೈಜತೆ ಒಕ್ಕಲು ಕುಲದಲ್ಲಿ ಅಡಗಿತ್ತು.
ಪ್ರಸಕ್ತ ನಮ್ಮ ಸಮುದಾಯದ ಸಮರ್ಪಕ ಶಕ್ತಿಗೆ ಕೆಲವರು ನಮ್ಮದೇ ಸಮುದಾಯದ ಸ್ವಾರ್ಥಯುಕ್ತ ಆಸೆಗಳು ಹಾಗೂ ಅಧರ್ಮಯುಕ್ತ ಜೀವನಶೈಲಿಯು ಮತ್ತು ಇದಕ್ಕೆ ಪೂರಕವಾಗುವಂತೆ ಇಂದಿನ ಪ್ರಸಕ್ತ ಮಠದ ದೊಡ್ಡ ಜವಾಬ್ದಾರಿಯನ್ನು ವಹಿಸಿರುವ ದೊಡ್ಡವರು, ಅಂದಿನ ನಮ್ಮ ಗುರು ಶ್ರೇಷ್ಠರ ಆಶಯಗಳ ಪ್ರಥಮ ವಿಷಯವಾಗಿದ್ದ ಒಕ್ಕಲಿಗ ಒಳಪಂಗಡಗಳ ಐಕ್ಯತೆಯನ್ನು ಕಡೆಗಣಿಸಿರುವುದು ಒಂದು ಕಾರಣ. ಅಷ್ಟೇ ಅಲ್ಲದೆ ನಮ್ಮ ಗುರು ಹಿರಿಯರು ನಮಗೆ ಕೊಟ್ಟ ಹಿರಿಮೆಯನ್ನು ಮತ್ತು ನಾವು ನಡೆದು ಬಂದ ಹಾದಿಯನ್ನು ಮರೆತು ಯಾವುದೋ ಕನಿಷ್ಠ ಲಾಭಗಳಿಗಾಗಿ ಮತ್ತು ಸಮಾಜದಲ್ಲಿ ಒಳ್ಳೆಯ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಳ್ಳಲು ಹಾಗೂ ಅನ್ಯರ ಹೊಗಳಿಕೆಗೆ ಗುರಿಯಾಗಿ ನಮ್ಮತನವನ್ನೇ ಹೇಳಿಕೊಳ್ಳದಷ್ಟು ಹಿಂಜರಿಯುವಂತಹ ಹಾಗೂ ಒಕ್ಕಲಿಗರನ್ನು ತಿಳಿಯದ ಅಲ್ಪರು ಜಾತಿವಾದಿ ಎಂದು ಬಿಂಬಿಸಲು ವೇದಿಕೆಗಳನ್ನು ಮಾಡಿದಾಗ ಅಂತಹ ವೇದಿಕೆಗಳಲ್ಲಿ ನಮ್ಮ ಹಿರಿಮೆಯನ್ನು ಅವರಿಗೆ ಅರ್ಥ ಮಾಡಿಸುವ ಬದಲು ಅವರ ಉಪಚಾರಗಳಿಗೆ ಮಣಿದು ನಮ್ಮತನವನ್ನು ಮರೆಮಾಚುವುದು ಒಂದು ಪ್ರಮುಖ ಪ್ರಸಕ್ತ ಕಾಲಮಾನದ ಸಮಸ್ಯೆಯಾಗಿದೆ.
ಇನ್ನಾದರೂ ಮಠ ಮತ್ತು ಸ್ಯಾರಿಗಳು ಒಕ್ಕಲಿಗರ ಹಿರಿಮೆಯನ್ನು ಹಾಗೂ ಒಕ್ಕಲುತನವನ್ನು ಎತ್ತಿ ಹಿಡಿದು ಕಾಪಾಡುವ ನಿಟ್ಟಿನಲ್ಲಿ ಕನಿಷ್ಠ ದ್ವನಿಗೂಡದಿದ್ದರೆ ಏಕೆ ನಾವು ಅಂತಹ ನಿಲುವುಗಳನ್ನು ಹಾಗೂ ಅಂತಹ ಯಾವುದೇ ಮಠ-ಮತ್ಯಾದಿ ವ್ಯಕ್ತಿಗಳನ್ನು ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಗೌರವಿಸಬೇಕು? ಅವರು ವಿಶ್ವಮಾನವರೇ ಆಗುವುದಾದರೆ, ನಾವು ಸಹ ವಿಶ್ವದ ಅನೇಕ ಮಠಗಳನ್ನು ಹಾಗೂ ಗುರುಶ್ರೇಷ್ಠರನ್ನು ಗೌರವಿಸುವಂತೆ ಸೀಮಿತವಾದಂತಹ ಗೌರವತಿಗಳನ್ನು ಕೊಟ್ಟರೆ ಸಾಕಲ್ಲವೇ! ಇದೊಂದು ನಿರ್ಧಾರ ಬರಿ ನಮ್ಮ ವೈಯಕ್ತಿಕ ಅಥವಾ ಸಮುದಾಯಿಕ ಆಗಿರುವುದಿಲ್ಲ ಏಕೆಂದರೆ ಇಂದಿನ ನಮ್ಮ ನಡೆ ಮುಂದಿನ ನಮ್ಮ ಪೀಳಿಗೆಯ ಭವಿಷ್ಯದ ಬುನಾದಿಗೆ ಮೂಲ ಶಕ್ತಿಯಾಗುತ್ತದೆ. ಅಂತಹ ಶಕ್ತಿಯನ್ನು ನಾವು ಎಲ್ಲಿ ಕೇಂದ್ರೀಕರಿಸುತ್ತಿದ್ದೇವೆ ಹಾಗೂ ನಾವು ಕೇಂದ್ರೀಕರಿಸುತ್ತಿರುವ ಸ್ಥಳ ನಮ್ಮ ಮುಂದಿನ ಪೀಳಿಗೆಗೆ ಪೂರಕವಾಗಿರುತ್ತದೆಯೇ ಎಂದು ಯೋಚಿಸುವುದು ತಪ್ಪೇ?
ಇನ್ನು ಪ್ರಸಕ್ತ ಸಂವಿಧಾನದ ಅಡಿಯಲ್ಲಿ ಪ್ರಜಾ ವ್ಯವಸ್ಥೆಯಲ್ಲಿ ನ್ಯಾಯಯುತವಾದ ಮತ್ತು ಧರ್ಮಯುಕ್ತವಾದ ಆಲೋಚನೆಗಳಿಗೆ ಜ್ಞಾನವಂತರಾದ ಅನೇಕರು ಮಂಡಿಸುವ ವಿಚಾರಗಳನ್ನು ಕನಿಷ್ಠ ಮರ್ಯಾದೆಯಿಂದ ಕೇಳುವ ಸೌಜನ್ಯತೆ ಇಲ್ಲದಂತಹ ಪ್ರಕೃತಿ ಸೃಷ್ಟಿಯಾಗಿದೆ. ಇದಕ್ಕೆ ಮೂಲ ಕಾರಣ ಸಂಘಟನಾ ಹೀನತೆ ಹಾಗೂ ಪ್ರಸಕ್ತ ಒಳ್ಳೆಯ ಶ್ರೇಷ್ಠತೆಯುಳ್ಳ ಸಂಘಟನಾ ಶಕ್ತಿ ಮತ್ತು ಧರ್ಮಶಕ್ತಿಗೆ ವಿರುದ್ಧವಾಗಿ ಅದನ್ನು ಬಳಸಿಕೊಂಡು ತಮ್ಮ ಸ್ವಂತಿಕೆಗಾಗಿ ತಮ್ಮ ಕುಟುಂಬಗಳನ್ನು ಬೆಳೆಸಿಕೊಳ್ಳುತ್ತಿರುವ ದುರ್ಜನರನ್ನು ಒಕ್ಕಲುತನ ಎಂಬ ಹೆಸರಿಗಷ್ಟೇ ಸೀಮಿತರಾಗಿರುವ ಕೆಲವರನ್ನು ನಮ್ಮ ಹಿರಿಯರು ಮತ್ತು ಪೂರ್ವಜರು ನಮಗೆ ಕೊಟ್ಟಿರುವ ಸಾಂಪ್ರದಾಯಿಕ ನಿಲುವುಗಳ ಶಕ್ತಿಯ ನಂಬಿಕೆಯನ್ನು ಬಳಸಿಕೊಳ್ಳಲು ಆಸ್ಪದ ಮಾಡಿಕೊಟ್ಟ ನಾವು ಮತ್ತು ನೀವು ಅಂದರೆ ಸಮಗ್ರ ಪ್ರತಿಯೊಬ್ಬ ಹಳ್ಳಿಹಳ್ಳಿಯಲ್ಲಿನ ಒಕ್ಕಲಿಗನ ಅಜಾಗರು ಕಥೆಯ ಮತ್ತು ಬೇಜವಾಬ್ದಾರಿತನದ ಪಾಲ್ಗೊಳ್ಳುವಿಕೆಯ ಲೋಪವೇ ಕಾರಣವಾಗಿದೆ.
ಇನ್ನು ನಮ್ಮಲ್ಲಿರುವ ನಾಯಕರು ಎಂದು ಸಮುದಾಯದ ಹೆಸರಿನಲ್ಲಿ ರಾಜಕೀಯ ನಡೆಸುತ್ತಿರುವ ನಮ್ಮವರೇ ಕೆಲವರು ಬುದ್ಧಿ ಕಲಿಯಲೇಬೇಕಾದ ಸಮಯ ಪ್ರಸಕ್ತ ಒದಗಿ ಬಂದಿದೆ. ಒಂದು ವೇಳೆ ಇವರು ಹೀಗೆ ನಡೆದ ಪಕ್ಷದಲ್ಲಿ ಮಠಗಳು ಮತ್ತು ಸಂಘಟನಾ ಶಕ್ತಿಗಳು ಸ್ವಾರ್ಥಯುಕ್ತ ಹಣದಿಂದಲೇ ತಾವು ದೊಡ್ಡವರು ಎಂದು ಮೆರೆಯುತ್ತಿರುವ ಅಹಂಕಾರಿಗಳನ್ನು ಬದಿಗಿಟ್ಟು ಸೃಜನರನ್ನು ಮತ್ತು ನಿಜವಾದ ಹಣ ಮತ್ತು ಗುಣ ಎರಡು ಉಳ್ಳ ಸೇವಾ ಮನೋಭಾವವುಳ್ಳ ಸಮುದಾಯಿಕ ನಾಯಕರನ್ನು ಬೆಳೆಸಬೇಕು ಮತ್ತು ಹುಟ್ಟು ಹಾಕಬೇಕು ಎಂಬ ನಿರ್ಧಾರಕ್ಕೆ ಬರಲೇಬೇಕಾಗಿದೆ.
ಇದಕ್ಕೆ ನೈಜ ಉದಾಹರಣೆ ಎಂದರೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದ ನ್ಯಾಯವಾದಿ ಹಾಗೂ ಸಮಾಜ ಸುಧಾರಣೆಗಾಗಿ ರಾಷ್ಟ್ರೀಯ ಮೌಲ್ಯಗಳನ್ನು ನಡೆಸಿಕೊಳ್ಳುತ್ತಿರುವ ಶ್ರೀ ಸುಬ್ರಹ್ಮಣ್ಯಂ ಸ್ವಾಮಿ ರವರು ಇಷ್ಟು ದಿನ ಒಕ್ಕಲಿಗರು ನಂಬಿದ್ದ ಒಕ್ಕಲಿಗರ ನಾಯಕ ಎಂದು ಎಲ್ಲೂ ಹೇಳಿಕೊಳ್ಳದ ಸಮುದಾಯದ ಯುವಕರಿಗೆ ಯುವನಾಯಕರು ಎಂಬ ಕೀರ್ತಿಯನ್ನು ತಮ್ಮ ಮಗನಿಗೂ ಕೊಟ್ಟಿದ್ದ ಸನ್ಮಾನ್ಯ ಎಚ್ ಡಿ ದೇವೇಗೌಡರವರು ಒಕ್ಕಲಿಗರ ಅಲ್ಲ ಹಾಗೂ ಅವರು ಒಕ್ಕಲಿಗ ಸಮುದಾಯವನ್ನು ಮೂರ್ಖರನ್ನಾಗಿಸಿ ಸಮಾಜದಲ್ಲಿ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ಮತ್ತು ಪತ್ರಿಕೆಗಳಲ್ಲಿ ದೆಹಲಿಯಿಂದ ಸದ್ದು ಮಾಡಿರುತ್ತಾರೆ. ಇಂತಹ ವಿಚಾರಗಳನ್ನು ಅರಿತರೂ ಸಹ ಹಾಗೂ ತಮ್ಮ ಮೇಲೆ ಇಂತಹ ಸಮುದಾಯಿಕ ಅಸ್ತಿತ್ವದ ಪ್ರಶ್ನೆ ಉದ್ಭವಿಸಿದಾಗ ಅದನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ಹೇಳದಿದ್ದರೂ ಪರವಾಗಿಲ್ಲ ಕನಿಷ್ಠ ಸಮುದಾಯದ ಅವರನ್ನು ನಂಬಿದ್ದ ಅನೇಕ ಕುಲಬಾಂಧವರಿಗೆ, ಇಂತಹ ವಿಚಾರ ಸುಳ್ಳು ಎಂದು ಸಾಬೀತು ಮಾಡುವ ಯಾವುದೇ ಪುರಾವೆಗಳು ನಮ್ಮ ಒಕ್ಕಲಿಗ ಸಮುದಾಯಕ್ಕೆ ದೊರಕದಿರುವುದು ಒಂದು ದೊಡ್ಡ ಆಘಾತಕಾರಿ ವಿಷಯವಾಗಿದೆ. ಸದ್ಯ ಈಗಲೂ ಸಹ ಇಂತಹ ಪ್ರಶ್ನಾರ್ತ ವಿಚಾರವೂ ಕೆಲವು ಭಾಗಗಳಲ್ಲಿ ಸಮುದಾಯದ ನಿಷ್ಠಾವಂತ ಸಾಂಪ್ರದಾಯಿಕ ಒಕ್ಕಲಿಗರನ್ನು ಯಾರಾದರೂ ಕೇಳಿದಾಗ ಅವರ ಬಳಿ ಪುರಾವೆಗಳು ಮತ್ತು ಉತ್ತರ ಇರುವುದಿಲ್ಲ. ಕನಿಷ್ಠ ಇಂತಹ ದೊಡ್ಡ ಪ್ರಶ್ನೆಗೆ ಎಚ್ ಡಿ ದೇವೇಗೌಡರ ಪುತ್ರರಾದ ಕುಮಾರಸ್ವಾಮಿಯವರು ಉತ್ತರಿಸದೆ ಇರುವುದು ಹಾಗೂ ಪ್ರಕರವಾದ ಮಾಹಿತಿ ಕನಿಷ್ಠ ತಮ್ಮನ್ನು ನಂಬಿರುವ ಒಕ್ಕಲಿಗ ಕುಲಬಾಂಧವರಿಗೆ ಕೊಡದಿರುವುದು ಸಮಾಜದಲ್ಲಿ ಸತ್ಯಾಸತ್ಯತೆ ಏನು ಎಂದು ತಿಳಿಯಲು ಯಾರೇ ಒಬ್ಬ ರಾಜಕೀಯ ರಹಿತ ನಿಷ್ಠಾವಂತ ಕುಲಬಾಂಧವರಿಗೆ ಅನಿಸುತ್ತದೆ.
ಈ ರೀತಿಯ ದ್ವಂದ್ವಗಳು ಹುಟ್ಟಿದಾಗ ಅದನ್ನು ಸಮುದಾಯಿಕ ಗೊಂದಲವಾಗಿ ಇನ್ನೊಬ್ಬರ ಮುಂದೆ ತಲೆತಗ್ಗಿಸುವಂತೆ ಆಗುವ ಮೊದಲು, ಇಂತಹ ವಿಚಾರವನ್ನು ಪ್ರಶ್ನಿಸಬೇಕಾದ ರಾಜಕೀಯ ಪ್ರಮುಖರಾಗಲಿ ಅಥವಾ ಸಮುದಾಯದ ಕೀರ್ತಿ ಮತ್ತು ಅದರ ಶಕ್ತಿಯನ್ನು ಪಡೆಯುತ್ತಿರುವ ಮಠ ಮಂದಿರ ಮುಂತಾದ ಕ್ಷೇತ್ರಗಳಲ್ಲಿರುವ ಸೇವಕರ್ತ ಮಹೋದಯರಾಗಲಿ ಕೆಲವೊಂದು ಬಾರಿ ವೈಯಕ್ತಿಕ ಅಥವಾ ಸಮುದಾಯಿಕ ಲಾಭಗಳನ್ನು ಬದಿಗಿಟ್ಟು ನಮ್ಮ ಗುರು ಶ್ರೇಷ್ಠರು ಮತ್ತು ಹಿರಿಯರು ನೀಡಿದ ಸಾಂಪ್ರದಾಯಿಕ ಪ್ರತಿಷ್ಠೆಯನ್ನು ಎತ್ತಿ ಹಿಡಿಯುತ್ತಾ ಇಂತಹ ವಿಚಾರಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ಸತ್ಯಾಸತ್ಯತೆಗಳನ್ನು ಸಮುದಾಯಿಕ ಹಿರಿಯರು ಮತ್ತು ಸಾಂಪ್ರದಾಯಿಕ ಬದ್ಧ ನಿಜ ವಕ್ಕಲಿಗರಿಗೆ ಗೊಂದಲ ನಿವಾರಿಸುವಂತಹ ಮಾರ್ಗದರ್ಶನ ನೀಡಬೇಕು.
ಪ್ರಸಕ್ತ ಒಕ್ಕಲಿಗರ ಶಕ್ತಿಯಿಂದ ಸ್ವಾಭಿಮಾನದ ಮನಸ್ಥಿತಿಯುಳ್ಳ ಹೆಮ್ಮೆಯ ಕೆಂಪೇಗೌಡರ ಆಸ್ಮಿತೆಯ ನಂಬಿರುವಂತಹ ಅದೆಷ್ಟೋ ಲೆಕ್ಕವಿಲ್ಲದಷ್ಟು ಮಂದಿ ಒಕ್ಕಲಿಗರಿಂದ ನಾಯಕರಾಗಿರುವ ಇಂದಿನ ಶಕ್ತಿಯುತರು ಎಂದು ಅನಿಸಿಕೊಳ್ಳುವ ಯಾರೇ ಆಗಲಿ ತಮ್ಮ ತಮ್ಮ ಜವಾಬ್ದಾರಿ ಎಂದು ಅರಿತು ಕನಿಷ್ಠ ಸೌಜನ್ಯತೆಯಿಂದ ಪ್ರತಿಯೊಂದು ತಾಲೂಕು ಗ್ರಾಮಮಟ್ಟಗಳಲ್ಲಿ ಸಂಪ್ರದಾಯ ಬದ್ಧ ನಾಯಕತ್ವಗಳನ್ನು ಬೆಳೆಸಲು ಶ್ರಮಿಸಬೇಕು. ಪ್ರಸಕ್ತ ದುರ್ವಿಧಿ ಏನೆಂದರೆ, ಬರೀ ಹಣದಿಂದ ನಾಲ್ಕು ದಿನಗಳ ಮೋಜಿನ ಮಸ್ತಿಗೆ ಸಮುದಾಯದ ಕೆಲವು ನಾಯಕರನ್ನು ದಿಕ್ಕು ತಪ್ಪಿಸಿ ಬಡವರನ್ನು ಕಡೆಗಣಿಸಿ ತಮ್ಮ ಮನೆ ಮಕ್ಕಳು ಮಡದಿ, ಉದ್ದಾರಾದರೆ ಸಾಕು ಅವರ ವಂಶ ಇದ್ದರೆ ಸಾಕು ಯಾರು ಏನೇ ಆದರೂ ಪರವಾಗಿಲ್ಲ ಎಂಬ ಶಾಪಗ್ರಸ್ತ ಮನಸ್ಥಿತಿಯ ಕಾರ್ಮೋಡವು ಕೆಲವರ ಮೇಲೆ ಬಹಳ ಸ್ಪಷ್ಟವಾಗಿ ಮೂಡಿರುವುದು ಆಘಾತಕಾರಿ ಸಂಗತಿಯಾಗಿದೆ.
ಆತ್ಮೀಯ ಕುಲಬಾಂಧವರೇ, ಈ ಎಲ್ಲ ವಿಮರ್ಶೆಗಳ ಹಿಂದಿನ ಶ್ರಮ ಹಾಗೂ ಆಶಯ ಏನೆಂದರೆ ಇಲ್ಲಿಯವರೆಗೂ ಆಗಿರುವ ನಷ್ಟ ಕಷ್ಟಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಆದರೆ ಇದೇ ರೀತಿ ನಾವು ಮೋಸ ಹೋಗುವುದನ್ನು ಮುಂದುವರಿಸಬಾರದು ಬದಲಿಗೆ ಅವಶ್ಯಕತೆ ಇರುವ ಎಲ್ಲಾ ರೀತಿಯ ಪರ್ಯಾಯ ವ್ಯವಸ್ಥೆಗಳನ್ನು ಈಗಿನಿಂದಲೇ ನಾವು ವ್ಯವಸ್ಥಿತವಾಗಿ ರೂಪುರೇಷೆಗಳನ್ನು ಹಾಕಿಕೊಂಡು ನಡೆಸಿಕೊಳ್ಳಬೇಕು.
ಮುಂಬರುವ ದಿನಗಳಲ್ಲಿ ಒಕ್ಕಲಿಗರು ಎಂದರೆ ಹಿಂದಿನ ನಮ್ಮ ಪರಂಪರಾಗದ ಗೌರವಗಳು ನಮಗೆ ಮರು ಸೃಷ್ಟಿಯಾಗಿ ನಮ್ಮ ಮುಂದಿನ ಮಕ್ಕಳಿಗೆ ತಲುಪಬೇಕು. ಒಬ್ಬರ ಮೇಲೆ ಒಬ್ಬರು ಚಾಡಿ ಹೇಳಿಕೊಂಡು ಜೀವನ ಸಾಗಿಸುವುದಕ್ಕಿಂತ ಯಾರೋ ಒಬ್ಬರು ಒಂದಷ್ಟು ಮಂದಿ ಕನಿಷ್ಠ ಮುಂದಿನ ಮಕ್ಕಳಿಗಾಗಿಯಾದರೂ ಪಣತೊಡಬೇಕು.
ಸಮುದಾಯದಲ್ಲಿನ ಒಳ್ಳೆಯ ಸುಸ್ಥಿತಿಯಲ್ಲಿರುವ ಸಹೃದಯಗಳು ಹೃದಯ ಶ್ರೀಮಂತಿಕೆಯಿಂದ ತಮ್ಮ ಶ್ರಮದ ಹಣವನ್ನು ಯೋಚನೆ ಮಾಡಿ ಮುಂದಿನ ಭವಿಷ್ಯಕ್ಕಾಗಿ ಸ್ಪಂದನೆಯೊಂದಿಗೆ ನೀಡಿ ಕೈಜೋಡಿಸಬೇಕು.
ಸಮುದಾಯದ ಕೃತಜ್ಞತೆಗೆ ಪ್ರತಿಯೊಬ್ಬರು ಪ್ರಶ್ನಿಸುವಂತೆ ಆಗಬೇಕು ಹಾಗೂ ತಪ್ಪುಗಳನ್ನು ಆಗದೇ ಇರುವಂತೆ ನಡೆಸಿಕೊಂಡು ಸೃಜನ ನಾಯಕತ್ವಗಳನ್ನು ಇನ್ನು ಈ ಕೂಡಲೇ ಬೆಳೆಸುವಂತಹ ಮನೋಭಾವಗಳನ್ನು ಉಳಿಸಿಕೊಳ್ಳಬೇಕು.
ನಾವು ಬಲಿಷ್ಠ ಸಮುದಾಯದವರು. ನಮ್ಮ ಒಳಪಂಗಡಗಳ ಐಕ್ಯತೆ ಆದರೆ ಪ್ರತಿಯೊಬ್ಬ ಕನಿಷ್ಠ ಸಹಕಾರ ಕೊಟ್ಟರು ಸಾಕು. ನಾವೆಲ್ಲರೂ ಬಲಿಷ್ಠರು ಎಂದು ಯಾರನ್ನು ಬೇಕಾದರೂ ಸವಾಲೆ ಎಸೆವುವಂತಹ ಆತ್ಮಸ್ಥೈರ್ಯ ಪ್ರತಿಯೊಬ್ಬರಲ್ಲೂ ಮೂಡಬೇಕು. ಹಣದಿಂದ ನಾವೇ ದೊಡ್ಡವರು ಎಂಬ ಅಹಂಕಾರದ ಭಾವನೆ ನಮ್ಮವರೇ ಆದ ಅನೇಕರಲ್ಲಿ ಇದ್ದರೂ ಅಂತಹ ದುಷ್ಟ ಆಲೋಚನೆಗಳು ಪ್ರತಿಯೊಬ್ಬರಿಂದ ದೂರ ಆಗಬೇಕು. ಇದೇ ಕಾರಣಕ್ಕಾಗಿ ನಮ್ಮಲ್ಲಿರುವ ಯಾರೇ ಆಗಲಿ ಅವರು ಎಷ್ಟೇ ಎತ್ತರಕ್ಕೆ ಬೆಳೆಯಲಿ ಅಂತಹವರು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ನಾವೆಲ್ಲರೂ ಹೆಮ್ಮೆಯಿಂದ ಪ್ರಾರ್ಥಿಸುವಂತವರಾಗಬೇಕು. ಅದರಲ್ಲೂ ಸೃಜನರನ್ನು ನಾಯಕತ್ವ ತೆಗೆದುಕೊಳ್ಳುವಂತೆ ನಾವು ನಿರ್ಧರಿಸುವಂತಾಗಬೇಕು.