ಒಕ್ಕಲುತನದ ಮೇಲೆ ಇಲ್ಲದ ಗೌರವ ಒಕ್ಕಲಿಗರ ಮೇಲೆ ಹೇಗೆ ತಾನೇ ಬರುತ್ತದೆ?

ಪ್ರಸ್ತುತ ಹಿಂದಿನಿಂದಲೂ ಇಲ್ಲಿಯವರೆಗೆ ಅದೆಷ್ಟೋ ಮಂದಿ ಒಕ್ಕಲಿಗರು ಎಂಬ ಸಂಪ್ರದಾಯದಲ್ಲಿ ಹುಟ್ಟಿದ ಮಾತ್ರಕ್ಕೆ... ನಮ್ಮ ಹೆಮ್ಮೆಯ ಒಕ್ಕಲು ಸಂಪ್ರದಾಯದ ಬುನಾದಿಯ ಮೇಲೆ, ನಮ್ಮ ಸಮುದಾಯದ ಒಕ್ಕಲುತನವನ್ನು ಮತ್ತು ಸಂಪ್ರದಾಯವನ್ನು ಕಾಪಾಡಿಕೊಂಡು ಬರುತ್ತಿರುವ ಕುಲಬಾಂಧವರನ್ನು ನಂಬಿಸಿ ಈಗಲೂ ಸಹ ರಾಜಕೀಯದಲ್ಲಿ ಇರಬಹುದು ಸಮಾಜ ಮುಖದಲ್ಲೇ ಇರಬಹುದು ಬಹಳ ಎತ್ತರಕ್ಕೆ ಬೆಳೆದಿದ್ದಾರೆ ಹಾಗೂ ಮತ್ತು ಸ್ವಾರ್ಥ ಪೂರ್ವಕವಾಗಿ ಅವರ ಮಕ್ಕಳನ್ನು ಮೊಮ್ಮಕ್ಕಳನ್ನು ಮತ್ತು ಅನ್ಯ ಸಮುದಾಯದ ಸಹೋದರ ನಾಗರಿಕರನ್ನು ಅತಿ ಹೆಚ್ಚು ಗಮನವಹಿಸಿ ಬೆಳೆಸುತ್ತಿದ್ದಾರೆ, ಇವರು ಎಲ್ಲರನ್ನೂ ಬೆಳೆಸಲು ಹಾಗೂ ಇವರೇ ಸ್ವಯಂ ಬೆಳೆಯಲು ಕಾರಣೀಭೂತವಾದ ತಮ್ಮ ಶ್ರೇಷ್ಠವಾದಂತಹ ಪರಂಪರೆ ಮತ್ತು ಸಂಪ್ರದಾಯವುಳ್ಳ ಒಕ್ಕಲುತನವನ್ನು ಮತ್ತು ಅದರ ಹಿರಿಮೆಯನ್ನು ಕನಿಷ್ಠ ಸಮಾಜದಲ್ಲಿ ಪ್ರತಿಷ್ಠಿತವಾಗಿಡಲು ಇಂತಹ ಮಹನೀಯರು ಏನು ಮಾಡಿದ್ದಾರೆ ಎಂಬ ವಿಮರ್ಶೆಯನ್ನು ಇಲ್ಲಿ ಸ್ವಲ್ಪ ತಿಳಿದುಕೊಳ್ಳೋಣ...

VOKKALIGA COMMUNITY DEVELOPMENT AND UNITY FORMATION IN ACTION

ಶ್ರೀ ಅಂತರಗಂಗಾಧರನಾಥ ಸ್ವಾಮೀಜಿ

11/17/20241 min read

ಒಕ್ಕಲುತನದ ಮೇಲೆ ಇಲ್ಲದ ಗೌರವ ಒಕ್ಕಲಿಗರ ಮೇಲೆ ಹೇಗೆ ತಾನೇ ಬರುತ್ತದೆ?

ಪ್ರಸ್ತುತ ಹಿಂದಿನಿಂದಲೂ ಇಲ್ಲಿಯವರೆಗೆ ಅದೆಷ್ಟೋ ಮಂದಿ ಒಕ್ಕಲಿಗರು ಎಂಬ ಸಂಪ್ರದಾಯದಲ್ಲಿ ಹುಟ್ಟಿದ ಮಾತ್ರಕ್ಕೆ... ನಮ್ಮ ಹೆಮ್ಮೆಯ ಒಕ್ಕಲು ಸಂಪ್ರದಾಯದ ಬುನಾದಿಯ ಮೇಲೆ, ನಮ್ಮ ಸಮುದಾಯದ ಒಕ್ಕಲುತನವನ್ನು ಮತ್ತು ಸಂಪ್ರದಾಯವನ್ನು ಕಾಪಾಡಿಕೊಂಡು ಬರುತ್ತಿರುವ ಕುಲಬಾಂಧವರನ್ನು ನಂಬಿಸಿ ಈಗಲೂ ಸಹ ರಾಜಕೀಯದಲ್ಲಿ ಇರಬಹುದು ಸಮಾಜ ಮುಖದಲ್ಲೇ ಇರಬಹುದು ಬಹಳ ಎತ್ತರಕ್ಕೆ ಬೆಳೆದಿದ್ದಾರೆ ಹಾಗೂ ಮತ್ತು ಸ್ವಾರ್ಥ ಪೂರ್ವಕವಾಗಿ ಅವರ ಮಕ್ಕಳನ್ನು ಮೊಮ್ಮಕ್ಕಳನ್ನು ಮತ್ತು ಅನ್ಯ ಸಮುದಾಯದ ಸಹೋದರ ನಾಗರಿಕರನ್ನು ಅತಿ ಹೆಚ್ಚು ಗಮನವಹಿಸಿ ಬೆಳೆಸುತ್ತಿದ್ದಾರೆ, ಇವರು ಎಲ್ಲರನ್ನೂ ಬೆಳೆಸಲು ಹಾಗೂ ಇವರೇ ಸ್ವಯಂ ಬೆಳೆಯಲು ಕಾರಣೀಭೂತವಾದ ತಮ್ಮ ಶ್ರೇಷ್ಠವಾದಂತಹ ಪರಂಪರೆ ಮತ್ತು ಸಂಪ್ರದಾಯವುಳ್ಳ ಒಕ್ಕಲುತನವನ್ನು ಮತ್ತು ಅದರ ಹಿರಿಮೆಯನ್ನು ಕನಿಷ್ಠ ಸಮಾಜದಲ್ಲಿ ಪ್ರತಿಷ್ಠಿತವಾಗಿಡಲು ಇಂತಹ ಮಹನೀಯರು ಏನು ಮಾಡಿದ್ದಾರೆ ಎಂಬ ವಿಮರ್ಶೆಯನ್ನು ಇಲ್ಲಿ ಸ್ವಲ್ಪ ತಿಳಿದುಕೊಳ್ಳೋಣ...

ಇಂತಹ ವ್ಯಕ್ತಿತ್ವಗಳು ಪಂಚಾಯಿತಿ ಹೋಬಳಿ ತಾಲೂಕು ರಾಜ್ಯ ಹಾಗೂ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇಂದಿಗೂ ಸಮುದಾಯವನ್ನು ಮತ್ತು ಅದರ ಪ್ರತಿಷ್ಠೆಯನ್ನು ಕಾಪಾಡುತ್ತಿರುವ ಒಕ್ಕಲುತನದ ನಿಜವಾದ ಸಂಪ್ರದಾಯಸ್ಥರ ನಂಬಿಕೆಯನ್ನು ಗಳಿಸಿಕೊಂಡು ಮೋಸ ಮಾಡುತ್ತಿರುವುದು ಹೆಚ್ಚಿನ ಪ್ರಸಂಗಗಳಲ್ಲಿ ಕಾಣುತ್ತಿದೆ.

ಇನ್ನಾದರೂ ಇಂತಹ ಅರಿವೇ ಇಲ್ಲದೆ ಕುಲದ್ರೋಹವನ್ನು ಕರ್ತವ್ಯ ಎಂಬಂತೆ ಮಾಡುತ್ತಿರುವ ಕೆಲವು ಕುಲಗೇಡಿಗಳಿಗೆ ಕನಿಷ್ಠ ಬುದ್ಧಿ ಬರುವವರೆಗೂ ಸಮುದಾಯದ ನಿಜವಾದ ಕುಲಬಾಂಧವರು ಒಂದಾಗಿ ಇವರುಗಳನ್ನು ಕಟ್ಟುಹಾಕಿ ಇನ್ನಾದರೂ ಅಮಾಯಕ ಸಮುದಾಯದ ನಂಬಿಕೆಯನ್ನು ಹಾಳು ಮಾಡುತ್ತಿರುವ ವಿಚಾರವಾಗಿ ಜಾಗೃತರಾಗಿ ನಿಲ್ಲಲೇ ಬೇಕು?

ನಮ್ಮ ಇತಿಹಾಸವೇ ಹೇಳುವಂತೆ ಇಲ್ಲಿಯವರೆಗೂ, ನಮ್ಮ ಹಿರಿಯರಿಂದ ಸಮಾಜವಾಗಲಿ ಅಥವಾ ಅನ್ಯ ಸಮುದಾಯಗಳಿಗಾಗಲಿ, ಒಕ್ಕಲುತನದಿಂದ ಜಾತ್ಯತೀತವಾಗಿ ಮತ್ತು ಜೀವರಾಶಿಗಳನ್ನೆಲ್ಲ ಒಂದೇ ಎಂಬ ಭಾವನೆಯಲ್ಲಿ ಅನ್ನವನ್ನು ಬೆಳೆದುಕೊಂಡು, ಇಡೀ ಮನುಕುಲವನ್ನು ತಂಪಾಗಿ ಇಡುವಂತೆ ಭೂಮಿ ತಾಯಿಯನ್ನು ಪೂಜಿಸುತ್ತಾ, ಜೀವನ ನಡೆಸುತ್ತಾ ಬಂದಿರುವ ಸಂಪ್ರದಾಯವೇ… ಒಕ್ಕಲಿಗ ಸಂಪ್ರದಾಯ. ಇದೊಂದು ಜಾತಿಗೆ ಸೀಮಿತವಲ್ಲ! ಬದಲಿಗೆ ಅನೇಕ ಒಳಪಂಗಡಗಳನ್ನು ತನ್ನಲ್ಲಿ ಇರಿಸಿಕೊಂಡಿರುವ “ಮಾತೃ ಸ್ವರೂಪಿ ಕರುಣಾಮಯಿ ತಾಯಿಯೇ ಒಕ್ಕಲು ಧರ್ಮ”. ಇಂತಹ ಶ್ರೇಷ್ಠವಾದ ಧರ್ಮದಲ್ಲಿ ಕೆಲವೊಮ್ಮೆ ಕಪಟಿಗಳು ಮತ್ತು ವೈಯಕ್ತಿಕ ದುರಾಸೆಯುಳ್ಳ, ರಾಜಕೀಯದ ಆಸೆಗಾಗಿ ಹೆತ್ತ ತಾಯಿಯನ್ನೇ ಮಾರಿಕೊಂಡು, ತಾವು ಬೆಳೆಯಬೇಕು ಎಂಬ ಹಂಬಲವುಳ್ಳ ಕಲಿಯುಗದ ನೀಚ ಸಂತಾನಗಳು, ಒಕ್ಕಲಿಗ ಧರ್ಮವನ್ನು ಹಾಗೂ ಅದರ ಪ್ರಭುದ್ಧ ಸಂಪ್ರದಾಯವನ್ನು ಗೌರವಿಸದೆ, ಸಮುದಾಯ ಸಮಾಜಕ್ಕೆ ಅರಣ್ಯ ಸಂಪತ್ತುಗಳನ್ನು ತಮ್ಮ ಪ್ರಬುದ್ಧ ಒಕ್ಕಲು ಮಕ್ಕಳ ಸಮಾಜಮುಖಿ ಚಟುವಟಿಕೆಗಳ ಮುಖಾಂತರ ಹಾಗೂ ದೇಶ ಸೇವೆಗೆಂದು ಸಭೂತಿಯನ್ನು ನೀಡಿ ದಾನ ಧರ್ಮ ಪ್ರಭುದ್ಧತೆಯುಳ್ಳ ಹೆಮ್ಮೆಯ ಒಕ್ಕಲಿಗರು ಹಳ್ಳಿಹಳ್ಳಿಯಲ್ಲಿ ಗೌಡರಾಗಿ ಸತ್ಕಾರ್ಯಗಳನ್ನು ಲೆಕ್ಕವಿಲ್ಲದಷ್ಟು ಮಾಡಿದ್ದರು ಅಂತಹ ಅವರ ಹೆಸರನ್ನು ಹೇಳಿ ಹೆಮ್ಮೆಯ ಒಕ್ಕಲುತವನ್ನು ಎತ್ತಿ ಹಿಡಿದು ಎಲ್ಲರನ್ನೂ ಸಾಮರಸ್ಯದಿಂದ ಕಾಣುವ ನೈಜ ಸಂಪ್ರದಾಯವಾದ ಒಕ್ಕಲಿಗ ಸಂಪ್ರದಾಯವನ್ನು ಗೌರವಿಸದೆ, ಬರೀ ಒಕ್ಕಲಿಗರಲ್ಲಿ ಹುಟ್ಟಿಕೊಂಡಿರುವ ಅನೈತಿಕ ಸಂತಾನಗಳಾದ ಅಧರ್ಮಿಯ ವೈಯಕ್ತಿಕ ಸ್ವಾತವುಳ್ಳ ಕೆಲವರನ್ನು ಗಣನೆಗೆ ತೆಗೆದುಕೊಂಡು ಇಡಿ ಒಕ್ಕಲಿಗ ಸಂಪ್ರದಾಯವೇ ಇವರಿಂದ ಪ್ರತಿನಿಧಿಸಲ್ಪಡುತ್ತಿದೆ ಎಂಬಂತಹ ರಾಜಕೀಯ ವ್ಯವಸ್ಥೆಯನ್ನು ಸೃಷ್ಟಿ ಮಾಡಿ ನಮ್ಮ ಹೆಮ್ಮೆಯ ಒಕ್ಕಲಿಗರನ್ನು ಅವಮಾನಿಸುವ ದೃಷ್ಟಿಯಿಂದಲೇ ಷಡ್ಯಂತ್ರಗಳನ್ನು ರಚಿಸುತ್ತಿರುವ ಕೆಲವು ಅನ್ಯ ನಮ್ಮ ಗೌರವ ಮತ್ತು ಪ್ರತಿಷ್ಠೆಯುಳ್ಳ ಸಹ ಸಂಪ್ರದಾಯಸ್ಥರ ಸಮುದಾಯಗಳಲ್ಲಿಯೂ (ಅಂದರೆ ನಮ್ಮ ಸಮಾಜದಲ್ಲಿನ ಬೇರೆಯ ಸಂಪ್ರದಾಯ ಅಥವಾ ಜಾತಿಯವರು) ಸಹ ನಮ್ಮ ಸಮುದಾಯದಲ್ಲಿರುವ ಕಿಡಿಗೇಡಿಗಳಂತೆ ಇಲ್ಲಿಯೂ ಅಂತಹುದೇ ಜನರಿಂದ ಸಾಮರಸ್ಯ ಕಟ್ಟುವ ವಿಚಾರಗಳನ್ನು ಬಿಟ್ಟು ಜಾತಿವಾದವನ್ನು ಮಾಡಿ ಸಮಾಜದಲ್ಲಿ ಅಭಿವೃದ್ಧಿಯನ್ನು ಬದಿಗಿಟ್ಟು ಸ್ವಾರ್ಥಪರ ರಾಜಕೀಯ ಮತ್ತು ಜಾತಿ ಜಾತಿಗಳ ಮಧ್ಯೆ ವಿಷಬೀಜಗಳನ್ನು ಬಿದ್ಧಿಸಿ ಸಂಪ್ರದಾಯಗಳನ್ನು ಹಾಳು ಮಾಡುತ್ತಾ ತಮ್ಮ ಸ್ವಾರ್ಥಕ್ಕಾಗಿ ತಮ್ಮ ತಾಯಿಯನ್ನೇ ಮಾರುವ ಪ್ರಾಣಿ ವರ್ಗಕ್ಕೆ ಹುಟ್ಟಿದ ಮನುಕುಲದ ಕಿಡಿಗೇಡಿಗಳು ಪ್ರಸಕ್ತ ಹೆಚ್ಚುತ್ತಿರುವುದು ಬಹಳ ಯೋಚಿಸಲೇಬೇಕಾದ ವಿಷಯ.

ಇಂತಹ ನಿಟ್ಟಿನಲ್ಲಿ ಭೂಮಿಯನ್ನು ಆರಾಧಿಸುವ ಹಾಗೂ ಎಲ್ಲರಿಗೂ ಅನ್ನ ಬೆಳೆಯುವ ಜಾತ್ಯತೀತ ಮತ್ತು ಸಾಮರಸ್ಯ ಉತ್ತೇಜಕ ಸಂಪ್ರದಾಯವಾದ ನಮ್ಮ ಎಲ್ಲ ಕುಲಬಾಂಧವರು ಕನಿಷ್ಠ ನಮ್ಮ ಪೂರ್ವಜರ ಗೌರವವನ್ನು ಗುರುತಿಸಿಕೊಂಡು ಇನ್ನಾದರೂ ಒಳಪಂಗಡಗಳ ಐಕ್ಯತೆಗೆ ಇಚ್ಛಾ ಪೂರ್ವಕವಾಗಿ ಮಾತ್ರ ಹೆಜ್ಜೆಯನ್ನು ಇಡಲೇಬೇಕು. ಈ ವಿಚಾರವಾಗಿ ನಮ್ಮ ಸಮುದಾಯದ ನಿಜವಾದ ಸದ್ವಿಚಾರಿ ಸಮುದಾಯ ಯೋಗಿ ಸ್ವಾಮೀಜಿ ರವರುಗಳು ಕೆಲವರನ್ನ ನಾವು ಭೇಟಿ ಮಾಡಲು ಬಹಳ ನೋವು ಮತ್ತು ಉತ್ಸುಕತೆಯಿಂದ ಒಳಪಂಗಡಗಳ ಐಕ್ಯತೆ ವಿಚಾರವನ್ನು ಬಹಳ ಸೂಕ್ಷ್ಮವಾಗಿ ಪರಿಗಣಿಸಿ ನಮ್ಮೊಡನೆ ಇದ್ದೇವೆ ಎಂದು ಆಶೀರ್ವದಿಸಿದರು, ಬರುವುದಿಲ್ಲ ಆ ಸ್ವಾಮೀಜಿಗಳ ಪರಿಚಯವನ್ನು ಸಮಾಜಕ್ಕೆ ಮಾಡುವ ಜವಾಬ್ದಾರಿಯು ನಮ್ಮ ಒಕ್ಕಲಿಗರ ಅಭಿವೃದ್ಧಿ ನಿಗಮ ಪ್ರತಿಷ್ಠಾನಕ್ಕೆ ಇದ್ದೇ ಇರುತ್ತದೆ.

ಇನ್ನು ಪ್ರತಿ ತಾಲೂಕುಗಳಲ್ಲಿ ಈ ವಿಚಾರವಾಗಿ ನಾವು ಏಕೆ ಧ್ವನಿ ಎತ್ತಲೇಬೇಕು? ಎಂಬ ಪ್ರಶ್ನಾರ್ಥಕ! ನಮ್ಮ ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ಬಳಸಬೇಕಾದ ನಿಜವಾದ ಆಲೋಚನೆಯನ್ನು, ನಾವು ಇನ್ನು ಮಂಡಿಸಲೇಬೇಕಾದ ಅನಿವಾರ್ಯತೆ ಒದಗಿ ಬಂದಿದೆ...

ಅಂದು ಒಕ್ಕಲಿಗರ ಮಕ್ಕಳ ಭವಿಷ್ಯಕ್ಕಾಗಿ ಸ್ಥಾಪನೆಗೊಂಡ ಒಕ್ಕಲಿಗರ ಸಂಘ ಇಂದು ತನ್ನ ಉದ್ದೇಶವನ್ನು ಮತ್ತು ಮಾರ್ಗವನ್ನೇ ಬದಲಾಯಿಸಿ ಲಾಭದಾಯಕ ಉದ್ದೇಶಗಳಿಗಾಗಿ ಸಾಗುತ್ತಿರುವುದು ಕಣ್ಣಿಗೆ ಕಾಣುವಂತಹ ಪರಿಸ್ಥಿತಿಯಾಗಿದೆ ಹಾಗೂ ಈ ವಿಚಾರವಾಗಿ ಎಲ್ಲರೂ ಬರಿ ಮಾತಿಗಷ್ಟೇ ಹೋರಾಟ ಮಾಡಿದರು, ಪ್ರಯೋಜನ ಮಾತ್ರ ಏನು ಇರುವುದಿಲ್ಲ ಎಂಬ ವಾಸ್ತವ ಮನದಟ್ಟು ಮಾಡುವ ಮಟ್ಟಕ್ಕೆ ಬೆಳೆದಿದೆ, ಆದರೆ ಇದು ಪ್ರಸಕ್ತ ಹಣ ಇರುವ ಮತ್ತು ಸ್ವಾರ್ಥಪರ ರಾಜಕೀಯದ, ಹೆಣ ತಿಂದು ಬದುಕುತ್ತಿರುವ ಕೆಲವರಿಂದಲೇ ಪ್ರಚಾರಕ್ಕೆ ಒಳಪಡುತ್ತಿರುವ ಬೇಜವಾಬ್ದಾರಿತನದ ಪರಮಾವಧಿಯೇ ಹೊರತು ಇಲ್ಲಿಯ ತನಕ ನಮ್ಮ ಸಮುದಾಯದ ನಿಜವಾದ ಸಂಪ್ರದಾಯಸ್ಥರು ಇನ್ನೂ ಈ ವಿಚಾರವಾಗಿ ಯೋಚನೆ ಮಾಡದಿರುವುದೇ ಇದಕ್ಕೆ ಕಾರಣವಾಗಿದೆ...

ಇನ್ನು ಈ ವಿಚಾರವಾಗಿಯೂ ಸಹ ನಾವು ಗಮನಕೊಡಲೇಬೇಕು ಹಾಗೂ ಇದೇನು ದೊಡ್ಡ ವಿಷಯವೇನು ಅಲ್ಲ! ಪ್ರಸಕ್ತ ನಮ್ಮ ಸಮುದಾಯದ ಕೆಲವು ಹುಲಿ ಸಿಂಹಗಳಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಹಿರಿಯರು ಮತ್ತು ಯುವಸಮೋಹಕ್ಕೆ ಮೋಡಿ ಮಾಡಿರುವ ಪ್ರಸಕ್ತ ಅಯೋಗ್ಯ ರಾಜಕೀಯ ಮತ್ತು ವೈಯಕ್ತಿಕ ಸ್ವಾರ್ಥ ಉಳ್ಳ ದುರಾಲೋಚನೆ ಉಳ್ಳ ಹಣಗಾಹಿಗಳು, ನಮ್ಮ ಸಂಪ್ರದಾಯದ ಘನತೆ ಗೌರವವನ್ನು ತಿಳಿಯದ ಪಾಪಿಗಳು, ನಮ್ಮ ಸಮುದಾಯದ ಸಾಧನೆಗೈದಿರುವ ಹೆಮ್ಮೆಯ ಹುಲಿ ಸಿಂಹಗಳನ್ನು ಸರ್ಕಸ್ಸಿನಲ್ಲಿ ಇರಿಸಿದ್ದಾರೆ ಅಂದ ಮಾತ್ರಕ್ಕೆ ಅದು ಹುಲಿ ಸಿಂಹಗಳೇ ಹೊರತು ನಾಯಿ ನರಿಗಳಲ್ಲ. ಇಂತಹ ಹುಲಿ ಸಿಂಹಗಳು ನಮ್ಮ ಸಮುದಾಯದ ಕೀರ್ತಿ ಪ್ರತಿಷ್ಠೆಯ ನಿಜವಾದ ಸ್ವಾಭಿಮಾನಿ ಶಕ್ತಿಯನ್ನು ಅರಿತರೆ ಹಾಗೂ ಮುಂದೆ ಬರಬಹುದಾದ ಅತಿ ದೊಡ್ಡ ಆಘಾತಕಾರಿ ಸಮಸ್ಯೆ ಎಂದರೆ ನಮ್ಮ ಮುಂದಿನ ಮಕ್ಕಳ ಭವಿಷ್ಯದ ಗೌರವ ಮರ್ಯಾದೆಯ ಸಮಾಜ... ಇಂತಹ ವಿಚಾರಗಳನ್ನು ಆತ್ಮಸಾಕ್ಷಿಯಿಂದ ಅರಿತರೆ ಸಾಕು, ಇಡೀ ರಾಷ್ಟ್ರದಲ್ಲಿರುವ ಅಂತರಾಷ್ಟ್ರೀಯ ಮಟ್ಟದಲ್ಲಿ ಸರಸ್ವತಿ ಅನುಗ್ರಹಿತ ಒಕ್ಕಲಿಗ ಕುಲಬಾಂಧವರು ಒಮ್ಮೆ ಕಾನೂನು ಹೋರಾಟ ನಡೆಸಿದರೆ ಸಾಕು ಪ್ರಸಕ್ತ ಇರುವ ಒಕ್ಕಲಿಗ ನಾಯಕರು ಎಂದು ಹೇಳಿಕೊಳ್ಳುವ ರಣಹೇಡಿಗಳು ಮಂಡಿಯೂರಿ ಬುದ್ದಿ ಕಲಿಯುವ ಕಾಲ ಬರುವುದು ಬಹಳ ಸಮಯ ವ್ಯಾಪ್ತಿಗೆ ಬರುವಂತಹ ವಿಚಾರವಲ್ಲ.

ಈ ಮೇಲ್ಕಂಡ ವಿಚಾರಗಳ ಮುಂದುವರೆದ ವಿಮರ್ಶೆಯನ್ನು ಸಂಘಟಿತರಾಗಿ ಪ್ರತಿ ತಾಲೂಕು ಹೋಬಳಿ ಪಂಚಾಯಿತಿ ಮತ್ತು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗುವ ಶ್ರೇಷ್ಠ ಕಾರ್ಯವನ್ನು ನಮ್ಮ ಸ್ವಾಮೀಜಿರವರು ನಮಗೆ ನೀಡಿರುವುದು ಬಹಳ ಆಶೀರ್ವಾದದಿಂದ ಕೂಡಿದ ಹೆಮ್ಮೆಯ ವಿಚಾರ, ದಯಮಾಡಿ ಜಾಗೃತರಾಗಿ ಮತ್ತು ದಯಮಾಡಿ ಮೋಸ ಹೋಗದಿರಿ.

ಅತಿ ಶೀಘ್ರದಲ್ಲೇ ನಮ್ಮ ಒಕ್ಕಲಿಗರ ಅಭಿವೃದ್ಧಿ ನಿಗಮ ಪ್ರತಿಷ್ಠಾನ ಹಲವಾರು ಸವಾಲುಗಳನ್ನು ಗೆದ್ದು ಬಲಿಷ್ಠ ಒಕ್ಕಲಿಗ ಸಂಪ್ರದಾಯಗಳ ಒಳಪಂಗಡಗಳ ಐಕ್ಯತೆಯೊಂದಿಗೆ ನಿಮ್ಮ ಮುಂದೆ ಹಾಗೂ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ವಿಶ್ವ ವ್ಯಾಪಿ ಚಾಲನೆಗೊಳ್ಳಲಿದೆ.

ಜೈ ಶ್ರೀ ಗುರುದೇವ