ಕಾಯಕವೇ ಕೈಲಾಸ: ಜ್ಞಾನ, ಕರ್ಮ, ಮತ್ತು ಧರ್ಮದ ಕುರಿತು ಪೂಜ್ಯ ಮಂಗಳನಾಥ ಸ್ವಾಮೀಜಿಗಳ ವಿಚಾರಧಾರೆಯ ವಿಶ್ಲೇಷಣೆ
ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಒಂದಾದ ಬಿಜಿಎಸ್ ಮಠದ ಪರಮಪೂಜ್ಯ ವಿದ್ಯಾ ಗುರು ಶ್ರೀ ಮಂಗಳನಾಥ ಸ್ವಾಮೀಜಿಗಳು, ಸಮಾಜಕ್ಕೆ ಅತ್ಯಮೂಲ್ಯ ಸಂದೇಶವನ್ನು ನೀಡಿದರು. ಕಾಯಕವೇ ಕೈಲಾಸ ಎಂಬ ತತ್ವವನ್ನು ಅನುಸರಿಸಿ, ಶ್ರದ್ಧೆಯಿಂದ ಕರ್ತವ್ಯದಲ್ಲಿ ತೊಡಗಿರುವ ವ್ಯಕ್ತಿಯೊಬ್ಬನ ಉದಾಹರಣೆಯನ್ನು ನೀಡುತ್ತಾ, ಅವರು ನಿಜವಾದ ಸಂಪತ್ತು ಎಂದರೇನು ಎಂಬುದನ್ನು ವಿವರಿಸಿದರು. ಚಿನ್ನಾಭರಣಗಳು, ಆಸ್ತಿಪಾಸ್ತಿಗಳಂತಹ ಭೌತಿಕ ವಸ್ತುಗಳ ವ್ಯಾಮೋಹವು ಮನುಷ್ಯನ ನೆಮ್ಮದಿಯನ್ನು ಹೇಗೆ ಹಾಳುಮಾಡುತ್ತದೆ ಎಂಬುದನ್ನು ತಿಳಿಸುತ್ತಾ, ನೀರು, ಅನ್ನ ಮತ್ತು ಒಳ್ಳೆಯ ಮಾತುಗಳೇ ನಿಜವಾದ ಸಂಪತ್ತು ಎಂದು ಬೋಧಿಸಿದರು. ಅಲ್ಲದೆ, ಧರ್ಮದ ಬಗ್ಗೆ ಮನುಷ್ಯನಿಗಿರುವ ನಂಬಿಕೆಯ ಕೊರತೆ ಮತ್ತು ಮಾಧ್ಯಮಗಳ ನಕಾರಾತ್ಮಕ ಪ್ರಸಾರಗಳ ಬಗ್ಗೆ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು. ಒಟ್ಟಿನಲ್ಲಿ, ಆಧುನಿಕ ಸಮಾಜದಲ್ಲಿ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಅಗತ್ಯವನ್ನು ಈ ಲೇಖನವು ಎತ್ತಿ ತೋರಿಸುತ್ತದೆ.
VOKKALIGA COMMUNITY DEVELOPMENT AND UNITY FORMATION IN ACTION
RG BGS
8/30/20251 min read


ಸಮಾಜದ ಉನ್ನತಿಗಾಗಿ ಪರಮಪೂಜ್ಯ ಶ್ರೀಗಳ ದೂರದೃಷ್ಟಿ ಮತ್ತು ನಿಸ್ವಾರ್ಥ ಸೇವೆ
"ಕಾಯಕವೇ ಕೈಲಾಸ" ಎಂಬ ಶರಣ ಸಾಹಿತ್ಯದ ನುಡಿಯು ಸಮಾಜದ ವಾಸ್ತವದಲ್ಲಿ ಧರ್ಮ ಮತ್ತು ಕರ್ಮಗಳ ವಿಚಿತ್ರ ಬಂಧನಗಳ ಪಯಣದಲ್ಲಿ ಸಾಗುತ್ತಿರುವ ನಮಗೆ ದಾರಿದೀಪವಾಗಿದೆ. ಪ್ರಕೃತಿ ಮತ್ತು ಸಮಾಜವನ್ನು ತಮ್ಮದಾಗಿಸಿಕೊಂಡು, ತಾವೇ ಒಂದು ಸಮಾಜವನ್ನು ಕಾಯುವ ಪ್ರಕೃತಿಯಂತೆ ಚಿಂತಿಸಿ, ಭಕ್ತಿ ಮಾರ್ಗದಲ್ಲಿ ಅನೇಕ ಸಕಾರಾತ್ಮಕ ವಿಶ್ಲೇಷಣೆಗಳನ್ನು ಮಂಥನ ಮಾಡಿ, ನಂತರ ಸಾಮಾನ್ಯರಂತೆ ಕಾಯಕದಲ್ಲಿ ತೊಡಗಿ, ಗುರು ದಕ್ಷಿಣಾಮೂರ್ತೇಶ್ವರರು ಶಿವಗಣಗಳಿಗೆ ಮತ್ತು ಅವರ ಶಿಷ್ಯವೃಂದಕ್ಕೆ ಜ್ಞಾನ ಸಾಧನೆಯ ದೀಕ್ಷೆ ಕೊಡುವಂತೆ, ನಮ್ಮ ಪರಮ ಪೂಜ್ಯ ಭೈರವೈಕ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಕರ್ಮ ಯೋಗದ ಧರ್ಮ ಫಲವಾದ ಸಾಕ್ಷಾತ್ ಆಂಜನೇಯ ಸ್ವಾಮಿಯ ಕ್ಷೇತ್ರವಾದ ಬಿಜಿಎಸ್ ಶಾಖಾಮಠದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಭಕ್ತವೃಂದವನ್ನು ಪ್ರಕೃತಿಯಂತೆ ಕಾಯುತ್ತಿರುವ, ಗುರುಗಳಂತೆ ಮಾರ್ಗದರ್ಶಿಸುತ್ತಿರುವ ಪರಮಪೂಜ್ಯ ವಿದ್ಯಾ ಗುರು ಶ್ರೀ ಮಂಗಳನಾಥ ಸ್ವಾಮೀಜಿ ಹೇಳುವ ಮಾತುಗಳು ನಿಜಕ್ಕೂ ಕಾಲಭೈರವನ ತ್ರಿಕಾಲ ಮಾರ್ಗಸೂಚಿಯಂತೆ ಭಕ್ತರನ್ನು ಸದಾ ಕಾಲ ಎಚ್ಚರಿಸುತ್ತಿರುತ್ತದೆ.
ಇಷ್ಟೆಲ್ಲಾ ಹೇಳಲೇಬೇಕಾದ ಅನಿವಾರ್ಯತೆ ಮೂಡಲು ಕಾರಣವೇನೆಂದರೆ, ನಮ್ಮ ಪರಮಪೂಜ್ಯ ವಿದ್ಯಾ ಗುರುಗಳು ತಮ್ಮ ಕರ್ಮ ಯೋಗದ ಧರ್ಮ ಜಾಗೃತ ಗಮನಿಕೆಯಲ್ಲಿ ಬರುವ ಶ್ರೀನಿವಾಸಪುರದ ಬಿಜಿಎಸ್ ಭೈರವೇಶ್ವರ ವಿದ್ಯಾಸಂಸ್ಥೆಯಲ್ಲಿ ಹೊಸದೊಂದು ಕಟ್ಟಡ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ, ಪೂಜ್ಯಶ್ರೀಗಳು ಕಟ್ಟಡದ ಪರಿಪೂರ್ಣ ಹಂತವನ್ನು ಬಹಳ ಅನುಗ್ರಹಿತವಾಗಿ ಎಲ್ಲರನ್ನು ಜಾಗೃತರನ್ನಾಗಿಸಿ ವೀಕ್ಷಿಸಿ ಮಾತನಾಡುವ ಸಂದರ್ಭದಲ್ಲಿ, ಅಲ್ಲಿದ್ದ ಆಡಳಿತ ಸೇವಕರಿಗೆ ಮತ್ತು ಭಕ್ತವೃಂದಕ್ಕೆ ಜ್ಞಾನ ಹಂಚುವ ನಿಟ್ಟಿನಲ್ಲಿ ಮನುಷ್ಯ ಹೇಗೆ ಆಸೆ ವ್ಯಮೋಹಗಳಿಂದ ಹೊರಗಿರುವಾಗ ನೆಮ್ಮದಿಯಿಂದ ಇರುತ್ತಾನೆ ಮತ್ತು ಆಸೆ ವ್ಯಮೋಹಗಳಿಗೆ ಒಳಗಾಗಿ ಹೇಗೆ ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ ಎಂದು ಹೇಳುತ್ತಾ ಹೀಗೆ ಹೇಳುತ್ತಾರೆ:
"ನೋಡಿ, ನಮ್ಮ ಶಿಷ್ಯರಾದ ಗೌಡರೊಬ್ಬರು ರಾತ್ರಿ ಹಗಲು ಎನ್ನದೆ ತಮ್ಮ ಕರ್ಮಗಳಲ್ಲಿ ತೊಡಗಿರುತ್ತಾರೆ. ಬಹಳ ಸಂತೋಷ, ಅವರಿಗೆ ಭೈರವ ಅನುಗ್ರಹ ಸದಾ ಇರಲಿ. ಆದರೆ ಒಂದು ಕೆಲಸವನ್ನು ಮಾಡೋಣ, ಅವರಿಗೆ ಒಂದು ಸಾಮಾನ್ಯ ಮನುಷ್ಯರು ಶ್ರೇಷ್ಠ ಎನ್ನುವ ಬಂಗಾರದ ಹಾರವನ್ನು ಕೊಡಿಸೋಣ. ನಂತರ ಅವರು ಈಗ ಹೇಗೆ ನೆಮ್ಮದಿಯಿಂದ ನಮ್ಮ ಕರ್ಮಗಳಲ್ಲಿ ಸೇವೆ ಮಾಡುತ್ತಿದ್ದಾರೆ ಅದೇ ರೀತಿ ಸೇವೆ ಮಾಡಲು ಸಾಧ್ಯವೇ? ಎಂದು ನೋಡೋಣ... ಆ ಬಂಗಾರವನ್ನು ನೋಡಿಕೊಳ್ಳುವುದೇ ಅವರಿಗೆ ಒಂದು ಜವಾಬ್ದಾರಿ ಆಗಿಬಿಡುತ್ತದೆ. ನಂತರ ಅವರು ರಾತ್ರಿ ಹಗಲು ಎನ್ನದೆ ಅವರನ್ನು ಅವರೇ ನಿರ್ಬಂಧಿಸಿಕೊಳ್ಳುತ್ತಾರೆ ಮತ್ತು ಸಮಾಜದ ಮೇಲಿನ ನಂಬಿಕೆ ಕಡಿಮೆಯಾಗುತ್ತದೆ" ಎಂದು ಹೇಳುತ್ತಾ, ನಿಜವಾದ ಬಂಗಾರ ಎಂದರೆ ಜ್ಞಾನದಿಂದ ಕರ್ಮಗಳಲ್ಲಿ ತೊಡಗಿ ಧರ್ಮವನ್ನು ಅನುಸರಿಸಿ ನೋಡಿದಾಗ ಮೂರು ವಸ್ತುಗಳು ಕಂಡುಬರುತ್ತದೆ: ಒಂದು ನೀರು, ಮತ್ತೊಂದು ಅನ್ನ, ಹಾಗೂ ಇನ್ನೊಂದು ಒಳ್ಳೆಯ ಮಾತು. ಇವೇ ನಿಜವಾದ ಭಗವಂತನ ಕೃಪೆಯ ಬಂಗಾರ ಆಗಿರುತ್ತದೆ.
ಆದರೆ ಅಜ್ಞಾನದಿಂದ ಕೂಡಿದ ಮನುಷ್ಯನಿಗೆ ಕಲ್ಲು ಮಣ್ಣಿನಿಂದ ಹೊರಬರುವ ವಸ್ತುವೇ ಬಂಗಾರ ಎಂಬುವ ವ್ಯಾಮೋಹದ ಸೆಳೆತಕ್ಕೆ ಸಿಲುಕಿ ಅವನನ್ನು ಮೂರ್ಖನನ್ನಾಗಿ ಮಾಡಿಸುತ್ತದೆ. ಆದ್ದರಿಂದ ಮೂರ್ಖರು ಕಲ್ಲು ಮಣ್ಣಿನಿಂದ ಬಂದಿರುವ ವಸ್ತುವನ್ನು ಬಂಗಾರ ಎಂದು ಹೇಳುತ್ತಾರೆ. ಆದರೆ ಜ್ಞಾನವಂತರಿಗೆ ನಿಜವಾದ ಬಂಗಾರ ಯಾವುದು ಎಂದು ಭಗವಂತನು ಪ್ರಾಪ್ತಿಸಿರುತ್ತಾನೆ ಎಂದು ಬಹಳ ಆಳದಲ್ಲಿ ಮತ್ತು ಸರಳ ರೀತಿಯಲ್ಲಿ ಇಂದಿನ ಸಮಾಜಕ್ಕೆ ಬೇಕಾಗುವ ಮೌಲ್ಯವನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಟ್ಟಡದ ಎತ್ತರ ಮತ್ತು ಅದಕ್ಕೆ ನೀಡಿರುವ ಬಲಿಷ್ಠತೆಯನ್ನು ಗಮನಿಸಿ, "ಇಂದಿನ ಸಮಾಜದಲ್ಲಿ ಮನುಷ್ಯ ಧರ್ಮಭ್ರಷ್ಟನಾಗಿ, ಪ್ರಸಕ್ತ ನಮ್ಮ ಸುತ್ತಮುತ್ತಲು ಇರುವ ಧರ್ಮ ಪ್ರಚಾರವನ್ನು ಮಾಡದೆ ಧರ್ಮವೇ ಇಲ್ಲ ಎಂಬ ಭ್ರಾಂತಿಯಲ್ಲಿ ಪರಸ್ಪರ ನಂಬಿಕೆಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಹಾಗೂ ಮನುಷ್ಯನಿಂದಲೇ ಮನುಷ್ಯನಿಗೆ ತೊಂದರೆ ಎಂಬಂತೆ ಕಬ್ಬಿಣ ಮತ್ತು ಮಣ್ಣಿನ ಗೋಡೆಗಳನ್ನು ನಿರ್ಮಿಸಿ, ಅವುಗಳನ್ನೇ ರಕ್ಷಣಾ ವ್ಯವಸ್ಥೆ ಎಂದು ಜೀವನ ನಡೆಸುವ ದುಸ್ಥಿತಿ ಕಲಿಯುಗದಲ್ಲಿ ಕಂಡು ಬರುತ್ತಿರುವುದು ನಿಜಕ್ಕೂ ಮನುಷ್ಯನ ನಂಬಿಕೆ ಶೂನ್ಯತೆ ಕಡೆಗೆ ಸಾಗುತ್ತಿದೆ" ಎಂದು ಬೇಸರ ಪಟ್ಟರು.
ಸಮಾಜದಲ್ಲಿ ಮಾಧ್ಯಮಗಳು ಹೇಗೆ ಮನುಷ್ಯ ಪಕ್ಕದಲ್ಲೇ ಇರುವ ಪ್ರಕೃತಿಯನ್ನು ಮರೆತು ಅದಕ್ಕೆ ಗೌರವ ಕೊಡದೆ, ಅನಿವಾರ್ಯವಲ್ಲದ ಆವಿಷ್ಕಾರಗಳನ್ನು ಆಸೆ ವ್ಯಮೋಹಗಳಿಂದ ಅಪ್ಪಿಕೊಳ್ಳುತ್ತಿದ್ದಾನೋ, ಅದೇ ರೀತಿ ಇಂದಿನ ಸಮಾಜದ ಕಣ್ಣಾಗಿ ಇರಬೇಕಾದ ಮಾಧ್ಯಮಗಳು ನಕಾರಾತ್ಮಕ ವಿಷಯಗಳನ್ನು ಅತಿ ಹೆಚ್ಚು ಪ್ರಸಾರ ಮಾಡುತ್ತಿವೆ ಮತ್ತು ಸಕಾರಾತ್ಮಕ ವಿಷಯಗಳನ್ನು ಕಡೆಗಣಿಸಿವೆ. ಇದು ನಿಜಕ್ಕೂ ಸಮಾಜಕ್ಕೆ ಬಹಳ ಆಘಾತಕಾರಿ.
ಭೈರವನು ಎಲ್ಲರಿಗೂ ಒಳಿತನ್ನು ಕೊಟ್ಟು ಜ್ಞಾನದ ಮಹತ್ವವನ್ನು ಪ್ರತಿಯೊಬ್ಬರೂ ತಿಳಿಯುವಂತೆ ಅನುಗ್ರಹಿಸಲಿ ಎಂದು ಹೇಳಿದರು.