ಒಕ್ಕಲಿಗರೇ ಜಾಗೃತರಾಗಿ...ಒಕ್ಕಲಿಗ ಧರ್ಮ

ಅನ್ಯರ ಹೊಗಳಿಕೆಗೆ ಹಿಗ್ಗಿ ಕುಳಿತಿರುವ ನಮ್ಮವರು ಹಾಗೂ ನಮ್ಮವರ ನೆರಳಲ್ಲೇ ಬೆಳೆದು ನಮ್ಮವರನ್ನೇ ಹೊಗಳಿ ನಮ್ಮವರನ್ನು ರಾಜಕೀಯ ಮತ್ತು ಇತರೆ ಹೆಸರುಗಳಲ್ಲಿ ವಿಭಜಿಸಿ ಲಾಭ ಪಡೆಯುವ ಅನ್ಯರು.

VOKKALIGA COMMUNITY DEVELOPMENT AND UNITY FORMATION IN ACTION

Sri Antharagangadharanatha Swamiji

5/8/20241 min read

ಒಕ್ಕಲಿಗರೇ ಜಾಗೃತರಾಗಿ...

ಶತಶತಮಾನಗಳ ಇತಿಹಾಸವಿದ್ದರೂ ದಾಖಲೆ ಪುರಾವೆಗಳು ಯಥೇಚ್ಛವಾಗಿ ಹಾದಿ ಬೀದಿಯಲ್ಲಿ ಬಿದ್ದಿದ್ದರು ಗಂಗರು ರಾಷ್ಟ್ರಕೂಟರು ಮತ್ತೆ ಅನೇಕ ಮಹನೀಯರ ಬೆವರು ಮತ್ತು ರಕ್ತ ಹರಿದರೂ... ಸದಾಕಾಲ ಸಮಾಜ ಮತ್ತು ಪ್ರಕೃತಿ ಎನ್ನುತ್ತಾ ಭೂಮಿ ತಾಯಿಯ ಸೇವಿಸುತ್ತಾ ದಾಸೋಹವನ್ನೇ ಮಾಡುತ್ತಾ ಜಾತಿ ಧರ್ಮಗಳ ಆಚೆ ಪ್ರಾಕೃತಿಕವಾಗಿ ಮನುಕುಲಕ್ಕೆ ಅನ್ನವನ್ನೇ ನೀಡಿದರು... ಒಕ್ಕಲುತನ ಎಂಬುದು ಧರ್ಮಕ್ಕಿಂತ ಕೆಳಗೆ ಜಾತಿಯ ಭಾವನೆಗಳ ಎತ್ತರಕ್ಕೆ ಬಳಕೆಯ ವಸ್ತುವಾಗಿರುವುದು ಬಹಳ ನೋವಿನ ಸಂಗತಿ!

ಸದ್ಯ ಸಮಾಜದಲ್ಲಿ ಅತಿ ಹೆಚ್ಚು ವರ್ಷಾನುಗಟ್ಟಲೆ ದಶಕಗಳಿಂದ ಭೂಮಿ ತಾಯಿಯ ಮಕ್ಕಳಾಗಿ ಒಕ್ಕಲಿಗರು ಎಂದು ಹೆಮ್ಮೆಯಿಂದ ನಾಡಪ್ರಭು ಶ್ರೀ ಕೆಂಪೇಗೌಡರ ವಂಶಸ್ಥರು ಎಂದು ಗೌರವ ಹೆಮ್ಮೆಯನ್ನು ಹುಟ್ಟಿನಿಂದಲೇ ಪಡೆದು ಸಮಾಜಕ್ಕೆ ಪೂರಕವಾದ ಅಂತಹ ಜೀವನ ನಡೆಸುವ ಒಕ್ಕಲಿಗರನ್ನು ಇಂದು ಸಮಾಜದಲ್ಲಿ ಹೇಗೆ ಕಾಣುತ್ತಿದ್ದಾರೆ ಹಾಗೂ ಬಿಂಬಿಸುತ್ತಿದ್ದಾರೆ ಎಂದು ಒಮ್ಮೆ ಯೋಚಿಸಿ, ಇದು ನ್ಯಾಯವೇ, ಹೀಗೆ ಇದ್ದರೆ ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಏನು ಇನ್ನಾದರೂ ಒಕ್ಕಲಿಗರು ಐಕ್ಯತೆಯ ಬಗ್ಗೆ ಗಮನ ಕೊಡದಿದ್ದರೆ ಮುಂದಿನ ಪರಿಸ್ಥಿತಿಯನ್ನು ಯಾರಿಂದಲೂ ಸುಧಾರಿಸಲು ಸಾಧ್ಯವಿಲ್ಲ

ಹಸುವಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ, ಇಂದು ಸಮಾಜದಲ್ಲಿ ತಪ್ಪು ಮಾಡಿದಾಗ ಅವನು ಒಕ್ಕಲಿಗ ಹಾಗೂ ಅವರು ಒಕ್ಕಲಿಗರು ಹಾಗೂ ಸಮಾಜಮುಖಿ ಕೆಲಸ ಮಾಡಿದಾಗ ಅವನು ಜಾತ್ಯಾತೀತನು ಅಥವಾ ವಿಶ್ವಮಾನವನು, ಈ ಕಥೆಯು ಇಷ್ಟಕ್ಕೆ ಮುಗಿಯುವುದಿಲ್ಲ, ಹಳ್ಳಿಗಳಲ್ಲಿ ಎಲ್ಲರ ಕಷ್ಟಗಳಿಗೆ ಎದೆಯೊಡ್ಡಿ ನಿಲ್ಲುವುದು ಒಕ್ಕಲಿಗನೇ ಏಕೆಂದರೆ ಪ್ರತಿ ಗ್ರಾಮೀಣ ಪ್ರದೇಶಗಳಲ್ಲಿ ಒಕ್ಕಲುತನದ ಅವಲಂಬಿತರೇ ಹೆಚ್ಚು, ವಿಪರ್ಯಾಸ ಎಂದರೆ, ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಕೆಲವೊಮ್ಮೆ ಯಾರೋ ಒಬ್ಬರು ಅಟ್ರಾಸಿಟಿ ಕೇಸ್ ಗಳು ನಡೆದಾಗ ಅದನ್ನು ಕುಳಿತು ಸರಿ ಮಾಡಿ ಐಕ್ಯತೆಯನ್ನು ಮೂಡಿಸಿ ಸಮರಸ್ಯವನ್ನು ಎತ್ತಿ ಹಿಡಿಯುವ ಮನೋಭಾವವು ಅನ್ಯ ಸಂಪ್ರದಾಯಸ್ಥರಲ್ಲಿ ತುಂಬಾ ಕಡಿಮೆಯಾಗಿ ಕಾಣುತ್ತಿದೆ ಹಾಗೂ ಕೆಲವೊಮ್ಮೆ ನ್ಯಾಯಾಲಯಗಳಲ್ಲಿ ತಪ್ಪು ಅಟ್ರಾಸಿಟಿಗಳನ್ನು ಫೈಲ್ ಮಾಡಿದ್ದಾಗಿಯೂ ಇಂತಹ ವಿಷಯಗಳು ಹೊರಗೆ ಬರುವುದಿಲ್ಲ. ಸಂವಿಧಾನದಲ್ಲಿರುವ ತಮಗಿರುವ ಹಕ್ಕನ್ನು ಕೇಳುವುದನ್ನೇ ಮರೆತಿರುವ ಒಕ್ಕಲಿಗರಿಗೆ, ಏನು ತಾನೆ ಹೇಳಲಾಗುತ್ತದೆ...

ಒಂದು ವೇಳೆ ಯಾವುದಾದರೂ ಒಂದು ಸಂಘಟನೆ ಒಕ್ಕಲಿಗರ ಐಕ್ಯತೆಗಾಗಿ ಧ್ವನಿ ಎತ್ತಿದರೆ, ಅಂತಹ ಸಂಘಟನೆಗಳನ್ನು ತಳಮಟ್ಟದಲ್ಲೇ ತುಳಿದು ಹಾಕಲು ಅನೇಕರು ಸಹಕರಿಸುತ್ತಾರೆ ಮತ್ತು ಅದನ್ನು ಕಂಡರೂ ಸಹ ನಮ್ಮವರೇ ಸುಮ್ಮನಿರುತ್ತಾರೆ.

ಅನೇಕ ಸಾಧನೆಗಳನ್ನು ಸಮುದಾಯಕ್ಕೆ ಮತ್ತು ಸಂಪ್ರದಾಯಕ್ಕೆ ಮುಕುಟವಾಗಿ ಕೊಟ್ಟು ಅತ್ಯುನ್ನತ ಸ್ಥಾನಮಾನ ಕಲ್ಪಿಸಿ ಕೊಟ್ಟಿರುವ ನಮ್ಮ ಪೂರ್ವ ಇತಿಹಾಸ ಹಾಗೂ ನಾಡಪ್ರಭುಗಳು ಎಂಬ ಕೀರ್ತಿ ಶಿಖರ ಪಡೆದ ನಮ್ಮ ಕುಲ ತಿಲಕ ಕೆಂಪೇಗೌಡರ ಹೆಮ್ಮೆ, ಇಷ್ಟೆಲ್ಲ ಇದ್ದರೂ ಸಹ ಸಮಾಜದಲ್ಲಿ ನಾನು ಹೆಮ್ಮೆಯ ಒಕ್ಕಲಿಗ ಎಂದು ಘರ್ಜಿಸಲು ಜಾತಿವಾದ ಎಂಬ ಲೇಪನವನ್ನು ಎಳ್ಳಷ್ಟು ಅನ್ವಯಿಸದ ನಮ್ಮ ಒಕ್ಕಲಿಗ ಕುಲಬಾಂಧವರಿಗೆ ಲೇಪಿಸಿ ಸಮುದಾಯಕ್ಕೆ ಅನುಚಿತ ವಾತಾವರಣವನ್ನು ಸೃಷ್ಟಿಸಿರುವುದು ಬೇರೆ ಯಾರು ಅಲ್ಲ ಬದಲಿಗೆ, ಅನ್ಯರ ಹೊಗಳಿಕೆಗೆ ಹಿಗ್ಗಿ ಕುಳಿತಿರುವ ನಮ್ಮವರು ಹಾಗೂ ನಮ್ಮವರ ನೆರಳಲ್ಲೇ ಬೆಳೆದು ನಮ್ಮವರನ್ನೇ ಹೊಗಳಿ ನಮ್ಮವರನ್ನು ರಾಜಕೀಯ ಮತ್ತು ಇತರೆ ಹೆಸರುಗಳಲ್ಲಿ ವಿಭಜಿಸಿ ಲಾಭ ಪಡೆಯುವ ಅನ್ಯರು.