ಒಕ್ಕಲಿಗ ಸಮುದಾಯದ ವಿಮರ್ಶೆ Article 01: Vokkaliga Community? Can we survive? Lets understand the reason...
Stay updated with our daily news articles on a variety of topics. Explore insightful and informative content on our blog page every day. ನಾವು ಬಹಳ ಹಿಂದಿನಿಂದ ಸಂಘಟನಾ ದೃಷ್ಟಿಯಲ್ಲಿ ಒಂದು ಸಲಹೆಯನ್ನು ಸಾರುತ್ತಲೆ ಬಂದೆವು, ಅದೇನೆಂದರೆ ಯಾವುದೇ ಕಾರಣಕ್ಕೂ ಒಂದು ರಾಜಕೀಯ ಪಕ್ಷಕ್ಕೆ ಒಂದು ಸಮುದಾಯವನ್ನು ಮೀಸಲಿಡಬಾರದು ಎಂದು. ಅದೇ ರೀತಿ ಒಂದು ಸಮುದಾಯದಲ್ಲಿ ನಾಯಕತ್ವವನ್ನು ಬೆಳೆಸಬೇಕೆ ಹೊರತು... ಸಮುದಾಯದ ಬಗ್ಗೆ ಕಾಳಜಿಯೇ ಇಲ್ಲದ ಅಯೋಗ್ಯರನ್ನಲ್ಲ ಎಂಬುದನ್ನು ಮರೆಯಬಾರದು.
VOKKALIGA COMMUNITY DEVELOPMENT AND UNITY FORMATION IN ACTION
ಲೇಖನ: ಶ್ರೀ ಅಂತರಗಂಗಾಧರನಾಥ ಸ್ವಾಮೀಜಿ
5/8/20241 min read


Needful News Articles
ನಾವು ಬಹಳ ಹಿಂದಿನಿಂದ ಸಂಘಟನಾ ದೃಷ್ಟಿಯಲ್ಲಿ ಒಂದು ಸಲಹೆಯನ್ನು ಸಾರುತ್ತಲೆ ಬಂದೆವು, ಅದೇನೆಂದರೆ ಯಾವುದೇ ಕಾರಣಕ್ಕೂ ಒಂದು ರಾಜಕೀಯ ಪಕ್ಷಕ್ಕೆ ಒಂದು ಸಮುದಾಯವನ್ನು ಮೀಸಲಿಡಬಾರದು ಎಂದು. ಅದೇ ರೀತಿ ಒಂದು ಸಮುದಾಯದಲ್ಲಿ ನಾಯಕತ್ವವನ್ನು ಬೆಳೆಸಬೇಕೆ ಹೊರತು... ಸಮುದಾಯದ ಬಗ್ಗೆ ಕಾಳಜಿಯೇ ಇಲ್ಲದ ಅಯೋಗ್ಯರನ್ನಲ್ಲ ಎಂಬುದನ್ನು ಮರೆಯಬಾರದು.
ಮುಳಬಾಗಿಲು ತಾಲೂಕಿನ ಒಕ್ಕಲಿಗ ಸಮುದಾಯದ ವಿಮರ್ಶೆಯನ್ನು ಮಾಡಲೇಬೇಕು, ಮೊದಲನೆಯದಾಗಿ ಇಲ್ಲಿ ಬಹಳಷ್ಟು ಒಕ್ಕಲಿಗರಿಗೆ ನಮ್ಮ ಇತಿಹಾಸ ಪರಂಪರೆ ಅಂದರೆ-ಒಕ್ಕಲಿಗರ ಇತಿಹಾಸ ಮತ್ತು ಪರಂಪರೆಯ ಪರಿಚಯವೇ ಇರುವುದಿಲ್ಲ ಎಂಬುದು ಶೇಕಡ 90ರಷ್ಟು ಸರಿ, ಅಂತೆಯೇ ಇದೊಂದು ಬಹಳ ಬೇಸರದ ಸಂಗತಿಯೂ ಹೌದು... ಇದಕ್ಕೆ ಮೂಲ ಕಾರಣ ಒಂದಂತೂ ಸತ್ಯ, ಒಂದು ಕಡೆ ಮಠಾಧೀಶರುಗಳು ಹಾಗೂ ಸಮುದಾಯದ ಸಂಘಟನಾ ಚಟುವಟಿಕೆಯನ್ನು ತೋರಬೇಕಾದ ಕೆಲವು ಸಂಘಟನೆಗಳ ಜವಾಬ್ದಾರಿಯಾಗಿದ್ದ ಕೆಲಸವಾದ, ನಮ್ಮ ಪರಂಪರೆ ಮತ್ತು ಇತಿಹಾಸದ ಅರಿವನ್ನು ಮೂಡಿಸುವ ಹಾಗೂ ಒಳಪಂಗಡಗಳ ಐಕ್ಯತೆಯನ್ನು ಮೂಡಿಸುವ ಚಟುವಟಿಕೆಗಳನ್ನು ಕನಿಷ್ಠ ಮಾಡದಿದ್ದರೆ ಹೋಯಿತು, ಆದರೆ ಅದರ ವಿಮರ್ಶೆ ಅಥವಾ ಅದರ ಅರಿವಿನ ಕಾರ್ಯಗಾರಗಳನ್ನು ಮಾಡುವ ಸಂಕಲ್ಪವು ಸಹ ಇಲ್ಲದಿರುವುದು ಮತ್ತೊಂದು ಬೇಸರದ ಸಂಗತಿ.
ಇನ್ನು ವಿಷಯಕ್ಕೆ ಬರುವುದಾದರೆ, ಸದ್ಯ ನಮ್ಮ ಹಿರಿಯರು ಮತ್ತು ನಮ್ಮ ಅನೇಕ ಗಣ್ಯರು ಇಲ್ಲಿಯವರೆಗೂ ನಮಗೆ ಬಹಳ ಮರ್ಯಾದೆ ಮತ್ತು ಕೀರ್ತಿಗೆ ಪ್ರೇರಣೆಯಾದ ಸಂಸ್ಕಾರವನ್ನು ಬೆಳೆಸಿ ಉಳಿಸಿಕೊಟ್ಟರುಸಹ, ನಾವು ಸಮುದಾಯಕ್ಕೆ ಇನ್ನು ಏನು ಮಾಡಬೇಕು ಎಂಬ ಕಾಳಜಿ ಇಲ್ಲದೆ? ಇನ್ನೂ ಸಮುದಾಯದಿಂದ ನಾವು ಏನು ಪಡೆಯಬೇಕು ಎಂದಷ್ಟೇ ಯೋಚಿಸುವ, ನಾಯಕರು ಎಂದು ಹೇಳಿಕೊಳ್ಳುವ ನಾಲಾಯಕರುಗಳೇ ಹೆಚ್ಚು...
ಇದಕ್ಕೆ ಪೂರಕವೆಂಬಂತೆ, ಜಾತ್ಯಾತೀತವಾಗಿ ಹಳ್ಳಿಗಳಲ್ಲಿ ಸಹಬಾಳ್ವೆ ಮತ್ತು ಸಾಮರಸ್ಯವನ್ನು ಎತ್ತಿ ಹಿಡಿದು ನಿಜವಾದ ಒಕ್ಕಲುತನದ ಸೊಗಡನ್ನು ಎಲ್ಲಾ ಜಾತಿ ಧರ್ಮ ಮತಗಳಆಚೆ ನಮ್ಮ ಮೂಲ ಸಂಸ್ಕಾರವನ್ನು ಎತ್ತಿ ಹಿಡಿಯುವ ನಿಜವಾದ ಒಕ್ಕಲಿಗರು ಮೌನವಹಿಸಿರುವುದು ಬಹಳ ಆಘಾತಕಾರಿ ವಿಷಯವಾಗಿದೆ.
ಮುಳಬಾಗಿಲು ತಾಲೂಕಿನ ಅನೇಕ ಸಮುದಾಯಗಳ ಪಟ್ಟಿಯಲ್ಲಿ ಅತಿ ಹೆಚ್ಚು ಸಂಖ್ಯೆ ಇರುವ ಒಕ್ಕಲಿಗ ಸಮುದಾಯ ಮೂಲೆಗುಂಪಾಗಲು ಬಹಳಷ್ಟು ವಿಷಯಗಳು ಅಡಗಿವೆ. ಈ ಹಿಂದೆ ತಾಲೂಕಿನಲ್ಲಿ " ಒಕ್ಕಲಿಗರ ಸಂಘ" ಎಂಬ ಸಂಘವು ಅಸ್ತಿತ್ವಕ್ಕೆ ಬಂದು 35 ವರ್ಷಗಳಾದರೂ ಯಾವುದೇ ರೀತಿಯ ನಿರ್ವಹಣೆ ಮಾಡದೆ ನವೀಕರಣ ಗೊಳ್ಳದೆ ಹಾಳಾಗಿರುವುದು ಬಹಳ ದೊಡ್ಡ ಹಾಗೂ ನಾಚಿಕೆಯ ಸತ್ಯ, ಇನ್ನು ಇಲ್ಲಿಯತನಕ ಒಕ್ಕಲಿಗ ನಾಯಕರು ಎಂದು ಹೇಳಿಕೊಳ್ಳುವ ಕೆಲವು ನಾಯಕರು ಒಕ್ಕಲಿಗರ ಹೆಸರನ್ನು ಬಳಸಿಕೊಂಡು ಹಳ್ಳಿಗಳಲ್ಲಿ ಮತ್ತು ಪಂಚಾಯಿತಿಗಳಲ್ಲಿ ಪ್ರಸಕ್ತ ಇರುವ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪಕ್ಷಗಳಲ್ಲಿ ಪ್ರಮುಖರು ಎಂದು ಹೇಳಿಕೊಂಡು, ಜಾತಿಯ ಲಾಭ ಪಡೆದು ಪ್ರಸಕ್ತ ಮೀಸಲು ಕ್ಷೇತ್ರವಾಗಿರುವ ಮುಳಬಾಗಿಲಿನಲ್ಲಿ ಅಮಾಯಕ ಒಕ್ಕಲಿಗರ ನಾಯಕರು ಎಂದು ಹೇಳಿಕೊಂಡು ಲಕ್ಷಗಟ್ಟಲೆ ಹಣಗಳನ್ನು ಇಲ್ಲಿ ಬರುವ ಅಭ್ಯರ್ಥಿಗಳ ಬಳಿ ಭಿಕ್ಷೆಯತ್ತಿ ತಿಂದು ತೇಗಿ ತಾವು ಒಕ್ಕಲಿಗರು ಎಂಬುದನ್ನೇ ಮರೆತು ಬೆಳೆದರೂ ಸಹ, ಇಲ್ಲಿಯ ತನಕ ತಾಲೂಕಿನ ಅಮಾಯಕ ಒಕ್ಕಲಿಗರು ಇಂತಹ ನಾಯಕರನ್ನೇ ಬೆಳೆಯಲು ಬಿಟ್ಟಿರುವುದು ಬಹಳ ಆಶ್ಚರ್ಯಕರ ಸಂಗತಿ. ಅಲ್ಲದೆ ಇಲ್ಲಿಯ ತನಕ ರಾಜಕೀಯದ ಹೆಸರನ್ನು ಹೇಳಿಕೊಂಡು, ರಾಜಕೀಯದಲ್ಲಿ ಬೇಳೆ ಬೇಯಿಸಲು ಮಾತ್ರ ಜಾತಿಯನ್ನು ಬಳಸಿಕೊಂಡು ಪ್ರಸಕ್ತ ಮೆರೆಯುತ್ತಿರುವ ಕೆಲವು ನಾಲ್ಕೇ ನಾಲ್ಕು ರಾಜಕೀಯ ಪ್ರಮುಖರು ಇಲ್ಲಿಯ ತನಕ ಹೆಮ್ಮೆಯಿಂದ ನಾವು ಒಕ್ಕಲಿಗರು ಎಂಬ ಹೆಮ್ಮೆ ನಮಗಿದೆ ಹಾಗೂ ನಾವು ಒಕ್ಕಲುತನದ ಬಡ ಹಾಗೂ ಅವಶ್ಯಕತೆ ಇರುವ ಸಮುದಾಯದ ಜನರೊಂದಿಗೆ ಇರುತ್ತೇವೆ ಎಂದು ಇಲ್ಲಿಯ ತನಕ ಹೇಳಿರುವ ಯಾವುದೇ ಮಾಹಿತಿ ತಾಲೂಕಿನಲ್ಲಿ ಇಲ್ಲ.
ಇದನ್ನು ಮುಂದುವರಿಸಿ ನೋಡಿದಾಗ ಒಮ್ಮೆ ಕೆಂಪೇಗೌಡರ ಜಯಂತಿಯನ್ನು ತಾಲೂಕಿನ ಅತ್ಯಂತ ಬಹಳ ಶ್ರೇಷ್ಠತೆಯಿಂದ ಮಾಡಿದ್ದರೂ ಸಹ! ತದನಂತರ ಖರ್ಚಿನ ಹಣಕಾಸಿನ ಲೆಕ್ಕಪತ್ರಗಳ ವಂಚನೆಯ ವ್ಯಾಮೋಹಕ್ಕೆ ಸಮುದಾಯದ ಮರ್ಯಾದೆಯನ್ನು ಹರಾಜಿಗಿಟ್ಟು, ಕೆಲವರು ಮುಳಬಾಗಿಲು ತಾಲೂಕಿನಲ್ಲಿ ದೊಡ್ಡವರು ಎಂದು ಬೆಳೆದಿರುವುದು ಬೇಜಾರಿನ ಸಂಗತಿ ಅಲ್ಲದಿದ್ದರೂ... ಇಲ್ಲಿಯವರೆಗೂ ಸಮುದಾಯಕ್ಕೆ ಇವರಿಂದ ಯಾವುದೇ ಪ್ರಯೋಜನ ಇಲ್ಲ ಎಂಬುದು ನಿಜಕ್ಕೂ ಬೇಜಾರಿನ ಸಂಗತಿ. ಇನ್ನೂ ಒಮ್ಮೆ ಸಾರ್ವಜನಿಕ ವಲಯದ ಹಣವನ್ನು ಲೂಟಿ ಮಾಡುವ ತಂತ್ರ ತಿಳಿದ ನಂತರ, ಇಲ್ಲಿಯವರೆಗೂ ಲೆಕ್ಕಾಚಾರವೇ ಇಲ್ಲದೆ ಜನರನ್ನು ಮುಟ್ಟಾಳರನ್ನಾಗಿ ಮಾಡಿ, ತಾಲೂಕಿನಲ್ಲಿ ಬಲಿಷ್ಠರು ಎಂದು ಹೇಳಿಕೊಳ್ಳುವ ಹೇಡಿಗಳೆ ಹೆಚ್ಚಿನ ಮಂದಿ ಕಾಣಿಸಲು... ತಾಲೂಕಿನ ನಿಜವಾದ ಅನ್ನ ತಿನ್ನುವ ಹಾಗೂ ಅನ್ನ ಬೆಳೆಯುವ ಒಕ್ಕಲಿಗರ ಮೌನವೇ ಕಾರಣ ಎಂಬುದು ತಾಯಿ ಚಾಮುಂಡಿಯ ಸತ್ಯ ಬೇರೆಯ ಮಾತಿಲ್ಲ.
ಸದ್ಯ ಈಗಿನ ಮುಳಬಾಗಿಲು ತಾಲೂಕಿನ ಒಕ್ಕಲಿಗರ ಪರಿಸ್ಥಿತಿ ಹೇಗಿದೆ ಎಂದರೆ, ಒಂದು ಅಟ್ರಾಸಿಟಿ ಆದಾಗ ಅದರಲ್ಲಿನ ತಪ್ಪಿನ ಉದ್ದೇಶವನ್ನು ಅಥವಾ ಪೂರ್ಣ ವಿವರವನ್ನು ಕೇಳಲು ಠಾಣೆಗೆ ಹೋಗುವ ಧೈರ್ಯವಿರಲಿ? ಪ್ರಸಕ್ತ ತಾಲೂಕಿನಲ್ಲಿ ತಮ್ಮವರೆ ಆದ ಕುಲದ್ರೋಹಿ ಕೆಲವು ಒಕ್ಕಲಿಗರು ಸಮುದಾಯವನ್ನು ಬಳಸಿಕೊಂಡು ಸಮಾಜದಲ್ಲಿ ಸಂಘವನ್ನು ದಿಕ್ಕು ತಪ್ಪಿಸಿ ಒಕ್ಕಲಿಗರ ಮರ್ಯಾದೆಯನ್ನು ಲೆಕ್ಕಿಸದೆ ನಾಯಕರು ಎಂದು ಹೇಳಿಕೊಂಡು ಬರೀ ರಾಜಕೀಯ ಮಾಡುತ್ತಾ ಸಮಸ್ತ ಕುಲಬಾಂಧವರನ್ನು ಹೇಡಿಗಳು ಎಂಬಂತೆ ನಡೆಸಿಕೊಳ್ಳುತ್ತಿರುವುದು ಹಾಗೂ ಇದನ್ನು ಧೈರ್ಯವಾಗಿ ಪ್ರಶ್ನಿಸಲು ಆಗದೆ ಧೈರ್ಯವಿಲ್ಲದಿರುವವರಂತೆ ಹಿಂದೆ ಮುಂದೆ ಬರಿ ಮಾತಿಗಷ್ಟೇ ಸೀಮಿತವಾಗಿರುವ ಉತ್ತರವೇ ಹೆಚ್ಚು ಎಂಬುದಕ್ಕೆ ನಿದರ್ಶನವೆಂಬಂತೆ, ನಮಗೆ ಏಕೆ? ಅವರು ನಮ್ಮವರೇ? ಎಲ್ಲರೂ ಸೇರಿ ಜೊತೆಯಲ್ಲೇ ನಡೆಯೋಣ? ಸರಿ ಹೋಗುತ್ತಾರೆ? ಅವರು ದೊಡ್ಡವರು? ಹೊಡೆಯುತ್ತಾರೆ? ಅವರು ನಮ್ಮ ನೆಂಟರು?... ಹೀಗೆ ಅನೇಕ ಹೇಡಿತನದ ಪರಮಾವಧಿಯ ಪ್ರಶ್ನೆಗಳನ್ನು ತೆರೆಮರೆಯಲ್ಲಿ ಹಾಕಿಕೊಂಡು, ನಾನು ಒಬ್ಬ ಒಕ್ಕಲಿಗ ಎಂದು ತಮಗೆ ತಾವೇ ಬುಜಾ ತಟ್ಟಿಕೊಳ್ಳುವ ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದರೆ ತಪ್ಪೇನಿಲ್ಲ.
ಸದ್ಯ ಈಗ ಮಾಧ್ಯಮಗಳಲ್ಲಿ ಪವರ್ ಟಿವಿ ಬಿತ್ತರಿಸಿರುವ ವರದಿಯು ನಿಜಕ್ಕೂ ಶ್ಲಾಘನೀಯ ಹೌದು, ಇಲ್ಲಿಯ ತನಕ ಒಂದು ಪಕ್ಷವನ್ನು ಸಮುದಾಯ ಎಂಬ ಭಾವನೆಯಲ್ಲಿ ಬಳಸಿಕೊಳ್ಳುತ್ತಿದ್ದ ಹಾಗೂ ಇದನ್ನು ಅತಿ ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ಪ್ರೋತ್ಸಾಹಿಸುತ್ತಿದ್ದ ಕೆಲವು ರಾಜಕೀಯ ಪ್ರಜ್ಞ ಹೀನರ ಅಜಾಗರೂಕತೆಯನ್ನು ತಿದ್ದುವ ವಿಷಯವೇ ಆಗಿದೆ. ಇನ್ನಾದರೂ ಜನ ಪಕ್ಷಗಳನ್ನು ಬಿಟ್ಟು ವ್ಯಕ್ತಿತ್ವಗಳನ್ನು ಗುರುತಿಸಿ ನಾಯಕರನ್ನು ಬೆಳೆಸಬೇಕು ಹಾಗೂ ಪ್ರಾಂತ್ಯ ವಾರು ನಾಯಕತ್ವದ ನಿರ್ಧಾರ ಆಗಬೇಕೆ ಹೊರತು, ಪಕ್ಷಗಳು ತಮಗಿಷ್ಟ ಬಂದಂತೆ ಎಲ್ಲೋ ಕುಳಿತು ನಮ್ಮ ಗ್ರಾಮೀಣತೆಯ ಹಾಗೂ ನಗರ ಮತ್ತು ತಾಲೂಕುಗಳ ನಾಯಕರ ಜವಾಬ್ದಾರಿಯನ್ನು ನಿರ್ಧರಿಸಬಾರದು.
ಇದೊಂದು ಬಹಳ ಸೂಕ್ಷ್ಮ ಹಾಗೂ ಅವಲೋಕಿಸಬೇಕಾದ ವಿಷಯವೆಂಬುದನ್ನು ಇಂದಿಗೂ ಮರೆಯಬಾರದು.
ಇದೇ ರೀತಿ ಮುಳಬಾಗಿಲು ತಾಲೂಕಿನಲ್ಲೂ ಸಹ ರಾಜಕೀಯ ಸುಧಾರಣೆ ಅವಶ್ಯಕತೆ ಆಗಲೇಬೇಕು ಹಾಗೂ ಇದರ ಜವಾಬ್ದಾರಿಯನ್ನು ಪ್ರತಿಯೊಂದು ಕ್ಷೇತ್ರದ ಹೆಚ್ಚಿನ ಜನಸಂಖ್ಯೆ ಹೊಂದಿರುವ ಸಮುದಾಯದವರು ಮುನ್ನಡೆಸುವ ನಾಯಕತ್ವ ವಹಿಸಬೇಕು, ಏಕೆಂದರೆ ಹೆಚ್ಚಿನ ಜನಸಂಖ್ಯೆ ಹೊಂದಿರುವ ಸಮುದಾಯ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿದಾಗ ಮಾತ್ರ ಹಳ್ಳಿಗಳಲ್ಲಿ ಮತ್ತು ತಾಲೂಕಿನ ಎಲ್ಲೆಡೆ ಸಾಮರಸ್ಯ ಮತ್ತು ಸೌಹಾರ್ದತೆ ಹೆಚ್ಚುತ್ತದೆ ಇದರಿಂದ ಪ್ರಗತಿಯ ವೇದಿಕೆಗೆ ಪೂರಕವಾದಂತಹ ವ್ಯವಸ್ಥೆ ಸೃಷ್ಟಿಯಾಗುತ್ತದೆ ಹಾಗೂ ಜಾತಿ ಮತ ಧರ್ಮಗಳ ತಾರತಮ್ಯ ದೂರವಾಗಿ ರಾಷ್ಟ್ರೀಯ ಐಕ್ಯತೆಗೆ ನಾಂದಿ ಹಾಡುತ್ತದೆ.
ಇನ್ನು ಮತ್ತೆ ನಾವು ಮುಳಬಾಗಿಲು ತಾಲೂಕಿನ ವಿಷಯಕ್ಕೆ ಬರುವುದಾದರೆ ಮುಳಬಾಗಿಲು ತಾಲೂಕಿನಲ್ಲಿ ಹೆಚ್ಚಿನ ಜನಸಂಖ್ಯೆ ಇರುವ ಒಕ್ಕಲಿಗ ಸಮುದಾಯವು, ಇನ್ನಾದರೂ ಜಾಗೃತಿ ವಹಿಸಿ ತಮ್ಮ ತಪ್ಪುಗಳನ್ನು ಮತ್ತೊಮ್ಮೆ ಮಾಡದೆ... ಇನ್ನಾದರೂ ಸಮುದಾಯದ ಹೆಸರನ್ನು ಬಳಸಿಕೊಂಡು ಸಮಾಜವನ್ನು ಒಡೆಯುವ ನಾಯಕರು ಎಂದು ಹೇಳಿಕೊಂಡು ಹಳ್ಳಿಹಳ್ಳಿಗಳಲ್ಲಿ ತಿರುಗಾಡುತ್ತಿರುವ ದ್ರೋಹಿ ನಾಲಾಯಕರುಗಳನ್ನು ರಾಜಕೀಯದಿಂದ ದೂರ ಇಡಬೇಕು. ಜಾತಿ ಮತ ಧರ್ಮದ ತಾರತಮ್ಯ ಇಲ್ಲದೆ ಸಮಾಜವನ್ನು ಸಮಾಜದ ಪ್ರಗತಿಗೆ ಅವಲೋಕಿಸುವಂತಹ ಹಾಗೂ ಸದಾಕಾಲ ಭೂಮಿ ತಾಯಿಯ ಸೇವೆ ಮಾಡುವ ಒಕ್ಕಲಿಗನನ್ನು ಗೌರವಿಸಿ ಅವನ ಸಮಸ್ಯೆಗಳಿಗೆ ಸ್ಪಂದಿಸಿ ಹಳ್ಳಿಗಳಲ್ಲಿ ಸಾಮರಸ್ಯ ಬೆಳೆಸುವ ನಾಯಕರುಗಳನ್ನು ಗುರುತಿಸಬೇಕು ಅಥವಾ ಇನ್ನು ಮುಂದಾದರು ನಾಯಕತ್ವಗಳನ್ನು ಬೆಳೆಸಬೇಕು.
ಇದನ್ನು ಮಾಡಲು ಕೆಲವರು ಹಣ ಇದ್ದರೆ ಮಾತ್ರ ಆಗುತ್ತದೆ ಎಂದು ಸಮುದಾಯವನ್ನು ಹೊಡೆದು ಸುಳ್ಳು ಹೇಳಿ, ಬಲಿಷ್ಠ ವಾದಂತಹ ಸಂಖ್ಯೆ ಮತ್ತು ಸ್ವಾಭಿಮಾನದ ಸಂಕೇತವಾಗಿರುವ ಒಕ್ಕಲಿಗರನ್ನು ವಿಭಜಿಸಿ ಅವರನ್ನು ಆಳುಗಳಂತೆ ಮಾನಸಿಕವಾಗಿ ಕುಂಠಿತ ರನ್ನಾಗಿ ಮಾಡಿ ತಮ್ಮ ಅಡಿಯಾಳಾಗಿ ರಾಜಕೀಯ ಸ್ವಾರ್ಥಗಳಿಗೆ ಬಳಸಿಕೊಳ್ಳುತ್ತಿರುವ ವಿಷಯಗಳು ಬಹಳ ಬೇಜಾರಿನ ಸಂಗತಿ. ಆದರೆ ಇದೊಂದು ಅತಿ ದೊಡ್ಡ ಸುಳ್ಳು ಎಂಬುದನ್ನು ಮರೆಯದಿರಿ, ಏಕೆಂದರೆ ಅತಿ ಹೆಚ್ಚು ಜನಸಂಖ್ಯೆ ಇರುವ ಒಕ್ಕಲಿಗರು ಒಮ್ಮೆಲೇ ಯೋಚಿಸಿ , ಮನೆಗೊಂದು ಸಾವಿರ ಅಥವಾ ಒಕ್ಕಲುತನದ ಬಲಿಷ್ಠತೆಯ ಹಳ್ಳಿಗಳಿಗಾಗಿ ಒಂದು 5000 ತಲಾದೇನಿಗೆಗಳನ್ನು ಹಾಕಿಕೊಂಡು ನಮಗಿಷ್ಟ ಬಂದಂತಹ ಒಳ್ಳೆಯ ಯುವಕರನ್ನು ರಾಜಕೀಯದಲ್ಲಿ ಗೆಲ್ಲಿಸಿ ಮುಂದೆ ತರಬಹುದು.
ಅದನ್ನು ಬಿಟ್ಟು ಸ್ವಾಭಿಮಾನವನ್ನು ಮಾಡಿಕೊಂಡು ವಿಭಜಿತರಾಗಿ ಬದುಕುವ ಅವಶ್ಯಕತೆ ಎಂದು ಒಮ್ಮೆ ಯೋಚಿಸಲೇಬೇಕು?
ಮೇಲ್ಕಂಡ ಎಲ್ಲಾ ವಿಷಯಗಳು ಸತ್ಯಕ್ಕೆ ದೂರವಾದದ್ದಲ್ಲ ಎಂಬುದು ಎಲ್ಲರಿಗೂ ತಿಳಿದಿರುತ್ತದೆ... ಒಂದು ವೇಳೆ ನೀವು ಒಕ್ಕಲಿಗರಾದರೆ ದಯಮಾಡಿ ಈ ವಿಷಯವಾಗಿ ಒಮ್ಮೆಯಾದರೂ ವಿಮರ್ಶಿಸಿ, ಮುಳಬಾಗಿಲು ತಾಲೂಕಿನ ಒಕ್ಕಲಿಗರ ಗೌರವ ಮತ್ತು ಮರ್ಯಾದೆಯನ್ನು ಮರು ನಿರ್ಮಾಣ ಮಾಡುವ ಅವಶ್ಯಕತೆ ಇದೆ ಎಂಬುದನ್ನು ಎಂದಿಗೂ ಮರೆಯದಿರಿ... ಪ್ರಸಕ್ತ ಇರುವ ರಾಜಕೀಯ ನಾಯಕರು ಎಂದು ಹೇಳಿ ನಮ್ಮನ್ನು ಸಮಾಜದಲ್ಲಿ ಮಾರಿಕೊಳ್ಳುತ್ತಿರುವ ಸ್ವಂತ ನಿಮ್ಮ ಚಿಕ್ಕಪ್ಪ ದೊಡ್ಡಪ್ಪನೆ ಆಗಲಿ... ಅಂತಹವರಿಂದಲೇ ನಿಮ್ಮ ಮಕ್ಕಳ ಮುಂದಿನ ಭವಿಷ್ಯ ವಿಷಮಯವಾಗುತ್ತದೆ ಎಂಬುದನ್ನು ಮರೆಯದಿರಿ.
ತಪ್ಪು ಮಾಡಿರುವವರನ್ನು ಕ್ಷಮಿಸುವುದರಲ್ಲಿ ಅರ್ಥ ಇದೆ, ಅದು ಅವರ ಬದಲಾವಣೆಗೆ ನೀಡುವ ಒಂದು ಅವಕಾಶ. ಆದರೆ ತಪ್ಪು ಮಾಡಿರುವವರನ್ನು ರಕ್ಷಿಸಿ ರಾಜಕೀಯದಲ್ಲಿ ಬೆಳೆಸಿ, ನಮ್ಮ ನಾಯಕರು ಎಂದು ಸಮಾಜದಲ್ಲಿ ಬಿಡುವುದು... ಹಾವಿಗೆ ಹಾಲು ಎರದು, ಅಮೃತವನ್ನು ಕಕ್ಕುತ್ತದೆ ಎಂದು ಕಾಯುವಂತಾಗುತ್ತದೆ ಎಂಬುದನ್ನು ಮರೆಯದಿರಿ . ಬದಲಿಗೆ ಇದೇ ಹಾವುಗಳಿಂದ ಕಚ್ಚಿಸಿಕೊಂಡು ಅನೇಕರು ಭವಿಷ್ಯ ಕಳೆದುಕೊಂಡಿರುತ್ತಾರೆ ಎಂಬುದು ಸತ್ಯ ಹಾಗೂ ಎಂದಿಗೂ ಇವರಿಂದ ಬಲಿಷ್ಠ ವಕ್ಕಲುತನದ ಏಳಿಗೆ ಆಗುವುದಿಲ್ಲ ಎಂಬುದನ್ನು ಜಾಗೃತಿ ವಹಿಸಿ ವಿಮರ್ಶಿಸಿ.
ಲೇಖನ: ಶ್ರೀ ಅಂತರಗಂಗಾಧರನಾಥ ಸ್ವಾಮೀಜಿ